Breaking News

ಕಲ್ಲುಗುಂಡಿಯಲ್ಲಿ ಎಸ್ಸೆಸ್ಸೆಫ್ ಬ್ಲಡ್ ಸೈಬೋದ 164ನೇ ರಕ್ತದಾನ ಶಿಬಿರ

Advt_Headding_Middle
Advt_Headding_Middle

ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಸಮಿತಿ ವತಿಯಿಂದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ & ಲೇಡಿಗೋಷನ್ ಆಸ್ಪತ್ರೆ ಮಂಗಳೂರು ಹಾಗೂ ಸಂಪಾಜೆ ಗ್ರಾಮ ಪಂಚಾಯತ್ ಸಹಭಾಗಿತ್ವದಲ್ಲಿ ಸಂಪಾಜೆ ಲಯನ್ಸ್ ಕ್ಲಬ್ ಸಹಕಾರದೊಂದಿಗೆ ಕಲ್ಲುಗುಂಡಿಯ ಪಂಚಾಯತ್ ಸಭಾಭವನದಲ್ಲಿ ಆಗಸ್ಟ್ 4ರಂದು ಎಸ್ಸೆಸ್ಸೆಫ್ ದ.ಕ ಜಿಲ್ಲಾ ಬ್ಲಡ್ ಸೈಬೋದ 164ನೇ ರಕ್ತದಾನ ಶಿಬಿರ ಜರಗಿತು.

ಜಾತಿ, ಧರ್ಮದ ಹಂಗುಮೀರಿ ಸುಮಾರು 65 ಡೋನರ್ಸ್ ಗಳು ರಕ್ತದಾನ ಮಾಡಿದರು.

SSF ದ.ಕ ಜಿಲ್ಲಾಧ್ಯಕ್ಷ ಇಬ್ರಾಹೀಂ ಸಖಾಫಿ ಸೆರ್ಕಳ ಅಧ್ಯಕ್ಷತೆಯಲ್ಲಿ ಸುಳ್ಯ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಸಂಪಾಜೆ ಗ್ರಾಮ ಪಂಚಾಯತ್ ಆಡಳಿತಧಿಕಾರಿ ಎಸ್. ಪಿ ಮಹಾದೇವ ಉದ್ಘಾಟಿಸಿದರು.

SSF ದ.ಕ ಜಿಲ್ಲಾ ಸಮಿತಿ ಕೋಶಾಧಿಕಾರಿ ಮುಹಮ್ಮದ್ ಅಲಿ ತುರ್ಕಳಿಕೆ ಮುನ್ನುಡಿ ಭಾಷಣಗೈದರು. SSF ಬ್ಲಡ್ ಸೈಬೋ ಕೋರ್ಡಿನೇಟರ್ ಕರೀಂ ಕೆದ್ಕಾರ್ ಪ್ರಾಸ್ತಾವಿಕ ಭಾಷಣಗೈದರು. ಸ್ವಬಾಹ್ ಹಿಮಮಿ ಸಖಾಫಿ ಸ್ವಾಗತಿಸಿ ಸಿದ್ದೀಖ್ ಗೂನಡ್ಕ ವಂದಿಸಿದರು.

ಸುಳ್ಯ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಪಿ ಮಹಾದೇವ, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ.ಕೆ ಹಮೀದ್, ಬ್ಲಡ್ ಸೈಬೋ ಕೋರ್ಡಿನೇಟರ್ ಕರೀಂ ಕೆದ್ಕಾರ್ ರವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಅಯ್ಯೂಬ್ ಮಹ್ಳರಿ ಕಾವಲ್ಕಟ್ಟೆ, ನವಾಝ್ ಸಖಾಫಿ ಅಡ್ಯಾರ್, ಜಿ.ಕೆ ಇಬ್ರಾಹೀಂ ಅಂಜದಿ, ಮುಹಮ್ಮದ್ ಕುಂಞಿ ಗೂನಡ್ಕ, ಕೆ.ಪಿ ಜಾನಿ, ಅಬೂಸ್ವಾಲಿಹ್ ಗೂನಡ್ಕ, ನಾಗೇಶ್ ಬಾಚಿಗದ್ದೆ, ವಾಸುದೇವ ಗಟ್ಟಮನೆ, ಕಿಶೋರ್ ಕುಮಾರ್ ಕಲ್ಲುಗುಂಡಿ, ಪ್ರಶಾಂತ್ ಕಲ್ಲುಗುಂಡಿ, ಅಬ್ದುರ್ರಹ್ಮಾನ್ ಮೊಗರ್ಪಣೆ, ಎಂ.ಸಿ ಅಬೂಬಕರ್, ಎಸ್.ಪಿ ಹನೀಫ್, ಹಕೀಂ ಕಳಂಜಿಬೈಲ್, ಇಮ್ರಾನ್ ರೆಂಜಲಾಡಿ, ಸಿದ್ದೀಖ್ ಕಟ್ಟೆಕಾರ್, ಎಸ್.ಕೆ ಹನೀಫ್, ಹಮೀದ್ ಸಂಪಾಜೆ, ಅಶ್ರಫ್ ಎ.ಟಿ, ಫೈಝಲ್ ಝುಹ್ರಿ, ಜುನೈದ್ ಸಖಾಫಿ, ಸ್ವಾದಿಖ್ ಮಾಸ್ಟರ್, ನೌಶಾದ್ ಕೆರೆಮೂಲೆ, ರಿಯಾಝ್ ನೆಕ್ಕಿಲ, ಶರೀಫ್ ಮೊಗರ್ಪಣೆ, ಹಾರಿಸ್ ಗೂನಡ್ಕ, ಹಸೈನ್ ಗೂನಡ್ಕ ಭಾಗವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.