ಧರ್ಮಾರಣ್ಯದಲ್ಲಿ ಶ್ರೀ ರಾಮ ಕಲ್ಪೋಕ್ತ ಪೂಜೆ

Advt_Headding_Middle
Advt_Headding_Middle

 

ವರ್ಷಂಪ್ರತಿಯ ರಾಮನವಮಿಯಂದು ಆಚರಿಸುವ ರಾಮ ಕಲ್ಪೋಕ್ತ ಪೂಜೆಯನ್ನು ಅಯೋಧ್ಯಾ ರಾಮಮಂದಿರದ ಭೂಮಿಪೂಜೆಯ ಈ ದಿನ ಆಚರಿಸಲಾಯಿತು.

ಬೆಳಗ್ಗೆ ಶ್ರೀ ಗುರುಗಣಪತಿಯ ಸಾನ್ನಿಧ್ಯದಲ್ಲಿ ಮಹಾಗಣಪತಿ ಹವನ ನಂತರ ಸುವಾಸಿನಿಯರಿಂದ ಶ್ರೀ ರಾಮಜ್ಯೋತಿ ಯನ್ನು ಬೆಳಗಿಸಿ ರಾಮತಾರಕ ಮಂತ್ರ ಜಪ ಪ್ರಾರಂಭಿಸಲಾಯಿತು. ಶ್ರೀ ರಾಮನಿಗೆ ಅಭಿಷೇಕ ನೆರವೇರಿಸಿ ಕಲ್ಪೋಕ್ತ ಪೂಜೆ ನೆರವೇರಿತು.


ಅಯೋಧ್ಯಾ ತೀರ್ಪಿನ ದಿನವನ್ನು ಪರಮೋಚ್ಚ ನ್ಯಾಯಾಲಯ ಫೋಷಿಸದ ದಿನದಾರಭ್ಯ ಇಂದಿನ ದಿನದ ವರೆಗೆ ನಡೆದ ತಾರಕ ಜಪವನ್ನು ದೇವರಿಗೆ ಸಮರ್ಪಿಸಿ,ನಮ್ಮೆಲ್ಲರ ಹೃದಯಮಂದಿರದಲ್ಲಿ ಸ್ಥಾಪಿತನಾದ ಶ್ರೀ ರಾಮಚಂದ್ರ ನಲ್ಲಿ,ಲೋಕಕ್ಕೆ ಬಂದೊದಗಿದ ವಿಪತ್ತಿನ ಪರಿಹಾರ ಹಾಗೂ ರಾಮಂದಿರದೊಂದಿಗೆ ರಾಮಸಾಮ್ರಾಜ್ಯವಾಗಿದ್ದ ಅಖಂಡ ಭಾರತದ ನಿರ್ಮಾಣಕ್ಕಾಗಿ ಪ್ರಾರ್ಥಿಸಲಾಯಿತು.
ಅಭಿವೃದ್ಧಿ ಸಮಿತಿಯ ಸದಸ್ಯರು,ಭಜನಾ ಸಮಿತಿಯ ಸದಸ್ಯರು ಈ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.