ಅಯೋಧ್ಯೆ ಶ್ರೀ ರಾಮ ಮಂದಿರ ಭೂಮಿಪೂಜೆ ಪ್ರಯುಕ್ತ ಸುಳ್ಯ ಶ್ರೀ ಚೆನ್ನಕೇಶವ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ

Advt_Headding_Middle
Advt_Headding_Middle

ಅಯೋಧ್ಯೆ ಶ್ರೀ ರಾಮ ಜನ್ಮಭೂಮಿಯಲ್ಲಿ ನೂತನ ರಾಮ ಮಂದಿರ ಪುನರ್ನಿರ್ಮಾಣ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಶಿಲಾನ್ಯಾಸ ನೆರವೇರಿಸುವ ಈ ಸುಸಂದರ್ಭದಲ್ಲಿ ಭಾಜಪಾ ಸುಳ್ಯ ಮಂಡಲ ಹಾಗೂ ಭಾಜಪಾ ಯುವ ಮೋರ್ಚಾ ಸುಳ್ಯ ಮಂಡಲದ ವತಯಿಂದ ಸುಳ್ಯದ ಶ್ರೀ ಚೆನ್ನಕೇಶವ ದೇವರ ಸನ್ನಿಧಯಲ್ಲಿ, ಹಾಗೂ ಆಂಜನೇಯ ಗುಡಿಯಲ್ಲಿ ಆ.5 ರಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.


ನಂತರ ಬೂಡು ಭಗವತಿ ಕ್ಷೇತ್ರದಲ್ಲಿ ಪ್ರಾರ್ಥಿಸಿ ಕ್ಷೇತ್ರದಲ್ಲಿ ಈ ದಿನದ ಸವಿ ನೆನಪಿಗಾಗಿ ಅಶ್ವತ್ಥ ಗಿಡ ನೆಡಲಾಯಿತು.
ಈ ಸಂಧರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಹರಪ್ರಸಾದ್ ತುದಿಯಡ್ಕ ಹಾಗೂ ರಾಷ್ಟ್ರೀಯ ಸ್ವಯಸೇವಕ ಸಂಘದ ಮಂಗಳೂರು ವಿಭಾಗ ಕಾರ್ಯವಾಹರಾದ ನ. ಸೀತಾರಾಮ ಪ್ರಾರ್ಥನೆ ಸಲ್ಲಿಸಿದರು.


ಸುಳ್ಯ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಗುರುದತ್ ಜಿ ನಾಯಕ್, ಜಿಲ್ಲಾ ಯುವ ಮೋರ್ಚಾ ಸದಸ್ಯ ಕಿಶನ್ ಜಬಳೆ, ಬಿಜೆಪಿ ಯುವ ಮೋರ್ಚಾ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್ ಎ. ರಾಮಚಂದ್ರ, ನಗರ ಪಂಚಾಯತ್ ಸದಸ್ಯರಾದ ವಿನಯ್ ಕುಮಾರ್ ಕಂದಡ್ಕ, ಸುಧಾಕರ್ ಕುರುಂಜಿಭಾಗ್, ನಗರ ಪಂಚಾಯತ್ ಮಾಜಿ ಸದಸ್ಯರಾದ ಗೋಪಾಲ್ ನಡುಬೈಲ್, ಸಿ ಎ ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡುಪನ್ನೆ, ಬೂಡು ರಾಧಾಕೃಷ್ಣ ರೈ, ಶಿವರಾಮ ಕೆರ್ಪಳ ಕೆವಿಜಿಪಿ, ಲಕ್ಷ್ಮೀಶ ದೇವರಕಲಿಯ, ಸುಪ್ರೀತ್ ಮೊಂಟಡ್ಕ, ಗೌತಮ್ ಭಟ್ ಹಳೆಗೇಟು ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.