ಕಲ್ಚೆರ್ಪೆ ವನದುರ್ಗಾ ದೇವಿ ಸನ್ನಿಧಾನದಲ್ಲಿ ಮರ ಬಿದ್ದು ಭಕ್ತರು ಪವಾಡಸದೃಶವಾಗಿ ಪಾರು

Advt_Headding_Middle
Advt_Headding_Middle
Advt_Headding_Middle
Advt_Headding_Middle

ಪೆರಾಜೆ ಸಮೀಪದ ಕಲ್ಚೆರ್ಪೆ ವನದುರ್ಗಾದೇವಿ ಪರಿವಾರ ದೈವಗಳ ಸನ್ನಿಧಿಯಲ್ಲಿ ಆ.೦೪ರಂದು ಸುರಿದ ಭಾರೀ ಗಾಳಿ ಮಳೆಗೆ ದೊಡ್ಡ ಗಾತ್ರದ ಮರವೊಂದು ಮುರಿದು ಸನ್ನಿಧಿಯ ಪಕ್ಕವೇ ಬಿದ್ದು ಅಲ್ಲಿ ಸೇರಿದ ಅನೇಕ ಭಕ್ತರು ಪವಾಡಸದೃಶವಾಗಿ ಅಪಾಯದಿಂದ ಪಾರಾಗಿದ್ದಾರೆ.


ಇಲ್ಲಿಯ ದೈವದಲ್ಲಿ ಒಂದಾದ ಗುಳಿಗನಿಗೆ ಆ.04ರಂದು ಅಗೇಲು ಸೇವೆ( ಗುಳಿಗನ ಹರಕೆ) ನಡೆದಿತ್ತು. ಇದಕ್ಕೆ ಸುಮಾರು 30ಕ್ಕೂ ಅಧಿಕ ಮಂದಿ ಸಾಮಾಜಿಕ ಅಂತರ ಕಾಯ್ದುಕೊಂಡು ಸೇರಿ ಗುಳಿಗನಿಗೆ ಬೇಕಾದ ಅಡುಗೆ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದರು.ಈ ಸಂದರ್ಭದಲ್ಲಿ ಗುಳಿಗನ ಕಟ್ಟೆಯ ಬಳಿ ಇದ್ದ ಮರವೊಂದು ಅರ್ಧದಿಂದ ತುಂಡಾಗಿ ಪಕ್ಕದ ನಾಗನ ಕಟ್ಟೆ ಹಾಗೂ ವನದುರ್ಗಾ ದೇವಿ ಕಟ್ಟೆಗೆ ತಾಗಿಕೊಂಡೇ ಬಿತ್ತು.

ಆದರೆ ಭಕ್ತರಿಗೆ ಹಾಗೂ ದೇವಿ ಹಾಗೂ ನಾಗನ ಕಟ್ಟೆಗೆ ಯಾವುದೇ ಹಾನಿ ಉಂಟಾಗಲಿಲ್ಲ ಇದು ಇಲ್ಲಿ ಸೇರಿದ ಭಕ್ತರ ಅಚ್ಚರಿಗೆ ಕಾರಣವಾಗಿದೆ. ಈ ಕ್ಷೇತ್ರದ ಜೀಣೋದ್ದಾರ ಸಮಯದಲ್ಲಿ ಇಂತಹದೆ ಪವಾಡಗಳು ಕೆಲವು ನಡೆದಿದೆ ಕ್ಷೇತ್ರದ ಆಡಳಿತ ಸಮಿತಿಯವರು ಹೇಳುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.