ಹದಗೆಟ್ಟ ತೊಡಿಕಾನ-ಕುಂಟುಕಾಡು ರಸ್ತೆ

Advt_Headding_Middle
Advt_Headding_Middle

 

ಅಂತರ್ ಜಿಲ್ಲಾ ಸಂಪರ್ಕ ರಸ್ತೆಯಾದರೂ ರಸ್ತೆ ಅಭಿವೃದ್ದಿಯ ಬಗ್ಗೆ ಮುತುವರ್ಜಿ ಇಲ್ಲ

ತೊಡಿಕಾನ-ಕುಂಟುಕಾಡು ರಸ್ತೆ ಸಂಪೂರ್ಣ ನಾದುರಸ್ತಿಯಲ್ಲಿದ್ದು ವಾಹನ ಸಂಚಾರಕ್ಕೆ ತೊಡಕ್ಕಾಗಿ ಪರಿಣಮಿಸಿದೆ. ಈ ರಸ್ತೆ ಮುಂದೆ ವ್ಯಾಪಾರೆ-ಕುಂಬಳಚೇರಿ-ಪುತ್ಯ ಪೆರಾಜೆಯ ಮೂಲಕ ಪೆರಾಜೆಯಲ್ಲಿ ಮಾಣಿ -ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುತ್ತದೆ. ತೊಡಿಕಾನದಿಂದ ದ.ಕ ಜಿಲ್ಲೆಯ ಗಡಿಭಾಗ ತನಕ ಕೇವಲ ಮೂರು ಕಿ.ಮೀ ಮಾತ್ರ ರಸ್ತೆ ಅಭಿವೃದ್ದಿಯಾಗಬೇಕಾಗಿದ್ದರೂ ರಸ್ತೆಯ ಅಭಿವೃದ್ದಿ ಮಾತ್ರ ಗಗನ ಕುಸುಮವಾಗಿ ಉಳಿದಿದೆ.


೧೯೬೯ರಲ್ಲಿ ತೊಡಿಕಾನ -ಕುಂಟುಕಾಡು ರಸ್ತೆಯನ್ನು ಖಚ್ಚಾ ರಸ್ತೆಯನ್ನಾಗಿ ಅಭಿವೃದ್ದಿ ಮಾಡಲಾಗಿತ್ತು.ಅದರ ಹಿಂದಿನ ದಿನಗಳಲ್ಲಿ ಅದು ಕೇವಲ ಕಾಲು ದಾರಿಯಾಗಿತ್ತು. ಸುಮಾರು ೨೦ ವರ್ಷಗಳ ಹಿಂದೆ ಸುಮಾರು ೧.ಕಿ.ಮೀ ರಸ್ತೆಯನ್ನು ತೊಡಿಕಾನ ಶಾಲಾ ಬಳಿಯಿಂದ ಡಾಮರೀಕರಣಗೊಳಿಸಲಾಗಿತ್ತು.ಬಳಿಕ ಆ ರಸ್ತೆ ಒಂದು ಬಾರಿಯು ಮರು ಡಾಮರೀಕರಣ ಕಂಡಿಲ್ಲ.ಕೆಲ ವರ್ಷಗಳ ಹಿಂದೆ ಸುಮಾರು ೬೦ ಮೀಟರ್ ರಸ್ತೆಯನ್ನು ತೊಡಿಕಾನ ಕುಂಟುಕಾಡು ರಸ್ತೆಯ ಮಧ್ಯಭಾಗದಲ್ಲಿ ಕಾಂಕ್ರೀಟಿಕರಣಗೊಳಿಸಲಾಗಿದ್ದು, ಆ ರಸ್ತೆಯ ಭಾಗವು ನಾದುರಸ್ತಿಯಲ್ಲಿದೆ.


ರಸ್ತೆಯಲ್ಲಿ ಜಲ್ಲಿಕಲ್ಲು
ಡಾಮರಿಕರಣಗೊಂಡ ರಸ್ತೆ ಸಂಪೂರ್ಣ ಕಿತ್ತು ಹೋದ ಪರಿಣಾಮ ರಸ್ತೆಯಲ್ಲಿಯೇ ಅಲ್ಲಲ್ಲಿ ಜಲ್ಲಿಕಲ್ಲುಗಳು ಬಿದ್ದುಕೊಂಡಿದ್ದು ವಾಹನ ಸಂಚಾರಕ್ಕೆ ತೊಡಕಾಗುತ್ತಿದೆ.ದ್ವಿಚಕ್ರ ವಾಹನ ಸವಾರರ ಗೋಳು ಕೇಳುವವರಿಲ್ಲ. ವಾಹನ ಚಲಾಯಿಸಲು ಅವರು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ವಾಹನಗಳು ಸಂಚಾರಿಸುವಾಗ ಜಲ್ಲಿಕಲ್ಲುಗಳು ವಾಹನದ ಚಕ್ರದಡಿಗೆ ಸಿಲುಕಿಕೊಂಡು.
ಪಾದಚಾರಿಗಳ ಮೇಲೆ ಎಸೆಯಲ್ಪಡುತ್ತಿದ್ದು ಇದು ಅಪಾಯಕಾರಿಯಾಗಿದೆ. ಮುಂದಿನ ಭಾಗದ ರಸ್ತೆ ಕೆಸರು ಗದ್ದೆಯಾಗಿದೆ.ತೊಡಿಕಾನ -ಕುಂಟುಕಾಡು-ವ್ಯಾಪಾರೆ ಕುಂಬಳಚೇರಿ -ಪುತ್ಯಪೆರಾಜೆ ರಸ್ತೆಯಲ್ಲಿ ದ.ಕ ಮತ್ತು ಕೊಡಗು ಜಿಲ್ಲೆಯ ಗಡಿಭಾಗ ಹಾದು ಹೋಗುತ್ತಿದ್ದು ತೊಡಿಕಾನದಿಂದ ಈ ರಸ್ತೆಯಲ್ಲಿ ಮೂರು ಕಿ.ಮೀ ಸಾಗಿದ್ದಾಗ ದ.ಕ ಜಿಲ್ಲೆ ಮತ್ತು ಕೊಡಗು ಜಿಲ್ಲೆಯ ಗಡಿಭಾಗ ಸಿಗುತ್ತದೆ.ತೊಡಿಕಾನದಿಂದ ಸುಮಾರು ಮೂರು ಕಿ.ಮೀ ಮಾತ್ರ ದ.ಕ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿದೆ.ಉಳಿದ ಭಾಗ ಕೊಡಗು ಜಿಲ್ಲೆಯ ವ್ಯಾಪ್ತಿಗೆ ಸೇರುತ್ತದೆ. ಕೊಡಗು ಜಿಲ್ಲೆಯ ವ್ಯಾಪ್ತಿಯ ೭ ಕಿ.ಮೀ ರಸ್ತೆಯು ಅಭಿವೃದ್ದಿಯಾಗಿದೆ.ಈ ಮೂರು ಕಿ.ಮೀ ರಸ್ತೆಯಲ್ಲಿ ೧ ಕಿ.ಮೀ ಡಾಮರುಗೊಂಡಿದ್ದು ೬೦ ಮೀಟರ್ ಮಾತ್ರ ಕಾಂಕ್ರಿಟಿಕರಣಗೊಂಡಿದೆ.ಉಳಿದ ರಸ್ತೆ ಯಾವುದೇ ಕಾಂಕ್ರೀಟಿಕರಣ ಹಾಗೂ ಡಾಮರೀಕಂಡಿಲ್ಲ.ಈ ಮೂರು ಕಿ.ಮೀ ರಸ್ತೆ ಸಂಪೂರ್ಣ ಅಭಿವೃದ್ದಿಯಾಗಬೇಕೆಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.

ಅಂತರ್ ಜಿಲ್ಲಾ ಸಂಪರ್ಕ ರಸ್ತೆ
ತೊಡಿಕಾನ-ಕುಂಟುಕಾಡು -ವ್ಯಾಪಾರೆ ಕುಂಬಳಚೇರಿ -ಪುತ್ಯ ಪೆರಾಜೆ ಅಂತರ್ ಜಿಲ್ಲಾ ಸಂಪರ್ಕ ರಸ್ತೆಯಾಗಿರುವುದರಿಂದ ಈ ರಸ್ತೆಯನ್ನು ಅಭಿವೃದ್ದಿ ಪಡಿಸಿದರೆ ಸ್ಥಳೀಯ ಜನರಿಗೆ ಹಾಗೂ ಕೊಡಗಿನ ಗಡಿ ಭಾಗದ ಜನರಿಗೆ ಹಲವು ಲಾಭಗಳಿವೆ.ಈ ರಸ್ತೆ ಪೆರಾಜೆಯಿಂದ ಸುಳ್ಯ ಸೀಮೆ ದೇವಾಲಯವಾದ ತೊಡಿಕನ ಶ್ರೀ ಮಲ್ಲಿಕಾರ್ಜುನ ದೇವಾಲಯಕ್ಕೆ ಹಾಗೂ ತೊಡಿಕಾನ ಕುಂಟುಕಾಡು ಭಾಗದಿಂದ ಪೆರಾಜೆ ಶ್ರೀ ಶಾಸ್ತವು ದೇವಾಲಯ ಹಾಗೂ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮೂಲಕ ಸುಳ್ಯ ತಾಲೂಕು ಕೇಂದ್ರವನ್ನು ಕಡಿಮೆ ಅಂತರದಿಂದ ಸೇರಬಹುದು.ಈ ಎಲ್ಲಾ ಕಾರಣದಿಂದ ತೊಡಿಕಾನ-ಕುಂಡುಕಾಡು-ವ್ಯಾಪಾರೆ.ಕಂಬಳಚೇರಿ ಪುತ್ಯ ಪೇರಾಜೆ ಸಂಪರ್ಕ ರಸ್ತೆ ಅತೀ ಅಗತ್ಯವಾಗಿ ಅಭಿವೃದ್ದಿ ಕಾಣಾಬೇಕಾಗಿದೆ.

ತೊಡಿಕಾನ-ಕುಂಟುಕಾಡು-ವ್ಯಾಪಾರೆ-ಕುಂಬಳಚೇರಿ -ಪುತ್ಯಪೆರಾಜೆ ರಸ್ತೆ ತೊಡಿಕಾನದಿಂದ ೩ ಕಿ.ಮೀ ಸಂಪೂರ್ಣ ಹದಗೆಟ್ಟಿದ್ದು ಇದರಲ್ಲಿ ವಾಹನ ಚಲಾಯಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.ಜನಪ್ರತಿನಿಧಿಗಳು,ಸಂಬಂಧಪಟ್ಟ ಇಲಾಖಾಧಿಕಾರಿಗಳು ರಸ್ತೆ ಅಭಿವೃದ್ದಿಗೆ ಅನುದಾನ ಒದಗಿಸಿ ಕೊಡಬೇಕು.
– ಕೆ.ಕೆ ನಾರಾಯಣ ಕುಂಟುಕಾಡು, ಸ್ಥಳೀಯರು

ಸದ್ಯ ಈ ರಸ್ತೆ ಅಭಿವೃದ್ದಿಗೆ ಅನುದಾನಗಳಿಲ್ಲ.ರಸ್ತೆ ಅಭಿವೃದ್ದಿಗೆ ನೇರ ಇಲಾಖೆಗೆ ಈಗ ಅನುದಾನ ಬರುವುದು ಕಡಿಮೆ.ಜನಪ್ರತಿನಿಧಿಗಳು ಅನುದಾನ ಒದಗಿಸಿಕೊಟ್ಟರೆ ರಸ್ತೆ ಅಭಿವೃದ್ದಿ ಮಾಡುತ್ತೇವೆ.

-ಹನುಮಂತರಾಯಪ್ಪ
ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸುಳ್ಯ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.