ಕಾವೂರು ದೇವಸ್ಥಾನದಲ್ಲಿ ಪವಮಾನ‌ಹೋಮ‌ ಮತ್ತು ವಿಶೇಷ ಪೂಜೆ

Advt_Headding_Middle
Advt_Headding_Middle

ಆಯೋಧ್ಯೆಯಲ್ಲಿ ನಿರ್ಮಾಣ ವಾಗಲಿರುವ ಶ್ರೀ ರಾಮ ಮಂದಿರದ ಶಿಲಾನ್ಯಾಸ ಕಾರ್ಯಕ್ರಮದ ಪ್ರಯುಕ್ತ ಮರ್ಕಂಜ ಮತ್ತು ನೆಲ್ಲೂರುಕೆಮ್ರಾಜೆ ಗ್ರಾಮಗಳ ಕಾವೂರು ಶ್ರೀ ಮಹಾವಿಷ್ಣು ದೇವಾಸ್ಥಾನದಲ್ಲಿ ಪವಮಾನಹೋಮ ಮತ್ತು ವಿಶೇಷ ಪೂಜೆ ಹಾಗೂ ವಿಶೇಷ ಪ್ರಾರ್ಥನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಉಭಯ ಗ್ರಾಮದಿಂದ ಅಯೋಧ್ಯೆಯ ಕರಸೇವೆಯಲ್ಲಿ ಪಾಲ್ಗೊಂಡಿದ್ದ ಕರಸೇವಕರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ ಸ್ವಾಗತಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ತಾಲ್ಲೂಕು ಕಾರ್ಯವಾಹಕ ಚಂದ್ರಶೇಖರ ಭಟ್ ತಳೂರು ರವರನ್ನು ಸಾಹಿತಿ ಕೃಷ್ಣ ಶಾಸ್ತ್ರಿ ದೋಳ ಸನ್ಮಾನಿಸಿದರು. ಬಳಿಕ
ಕರಸೇವೆಯಲ್ಲಿ ಪಾಲ್ಗೊಂಡಿದ್ದ ಪದ್ಮನಾಭ ಗೌಡ ಕುದನೆಕೋಡಿ, ವಿಜಯಲಕ್ಷ್ಮೀ ಶಾಸ್ತ್ರೀ ದೋಳ, ಸೂರ್ಯ ನಾರಾಯಣ ಭಟ್ ಪೊನ್ನೂರುಕಜೆ, ಮಾಧವ ಗೌಡ ಸುಳ್ಳಿ ಯವರನ್ನು ಚಂದ್ರಶೇಖರ‌ ಭಟ್ ತಳೂರು
ಶಾಲು ಹೊದಿಸಿ ಸನ್ಮಾನಿಸಿದರು. ಕೊನೆಯಲ್ಲಿ ಸಾಮೂಹಿಕವಾಗಿ ಶ್ರೀರಾಮನ ತಾರಕಮಂತ್ರ ಪಠಣ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.