Breaking News

ಸುಳ್ಯ ರೋಟರಿ, ಇನ್ನರ್ ವೀಲ್ ವತಿಯಿಂದ “ಆಟಿಯ ಸೊಬಗು” ಆಚರಣೆ

Advt_Headding_Middle
Advt_Headding_Middle

ರೋಟರಿ ಸುಳ್ಯ, ರೋಟರಿ ಸಿಟಿ ಸುಳ್ಯ ಮತ್ತು ಇನ್ನರ್ ವೀಲ್ ಕ್ಲಬ್ ಸುಳ್ಯ ಇವರ ಸಂಯುಕ್ತ ಆಶ್ರಯದಲ್ಲಿ “ಆಟಿಯ ಸೊಬಗು”ಕಾರ್ಯಕ್ರಮವನ್ನು ಆ 6 ರಂದು ಸಂಜೆ ರೋಟರಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಯಿತು.

ಆಟಿ ವಿಶೇಷ ಭೋಜನದ ನಂತರ ನಡೆದ ಸಭಾ ಕಾರ್ಯಕ್ರಮವು ಮಂಜುಳಾ ರಾಮಚಂದ್ರ ಇವರ ಪ್ರಾರ್ಥನೆಯೊಂದಿಗೆ ಆರಂಭ ವಾಯಿತು. ಅಧ್ಯಕ್ಷತೆಯನ್ನು ರೋಟರಿ ಸುಳ್ಯ ಸಿಟಿ ಇದರ ಅಧ್ಯಕ್ಷರಾದ ರೊl ಗುರು ವಿಕ್ರಂರವರು ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ರೋಟರಿ ಸುಳ್ಯದ ಅಧ್ಯಕ್ಷರಾದ ರೊlಡಾllಗುರುರಾಜ ವೈಲಾಯ ಸರ್ವರನ್ನು ಸ್ವಾಗತಿಸಿದರು.ಇನ್ನರ್ ವೀಲ್ ಅಧ್ಯಕ್ಷೆ ಜಯಮಣಿ ಮಾಧವ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಮುಂದೆ ರೊl ಪಿಹೆಚ್ಎಪ್ ರಮ ವೈ.ಕೆ ಇವರು ಆಟಿಯ ಮಹತ್ವದ ಬಗ್ಗೆ ಸವಿವರವಾಗಿ ಮಾತನಾಡಿ ಮೂಢ ನಂಬಿಕೆ ಹಾಗೂ ಮೂಲನಂಬಿಕೆ ಹಾಗೂ ಆಟಿ ತಿಂಗಳ ಆಚರಣೆಯ ವೈಜ್ಞಾನಿಕ,ಧಾರ್ಮಿಕ ಮತ್ತು ವೈದ್ಯಕೀಯ ವಿಚಾರಗಳನ್ನು ವಿವರಿಸಿದರು.


ತದನಂತರ ಜಂಟಿ ಕ್ಲಬ್ ಗಳ ಸದಸ್ಯರುಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಸಮಾರಂಭದ ವೇದಿಕೆಯಲ್ಲಿ ರೋಟರಿ ಸುಳ್ಯದ ನಿಯೋಜಿತ ಅಧ್ಯಕ್ಷ ರೊl ಪ್ರಭಾಕರ್ ನಾಯರ್, ರೋಟರಿ ಸುಳ್ಯ ಸಿಟಿ ಇದರ ಕಾರ್ಯದರ್ಶಿ ರೊl ಗಿರೀಶ್ ನಾರ್ಕೋಡು ,ಇನ್ನರ್ ವೀಲ್ ಕಾರ್ಯದರ್ಶಿ ಪೂಜಾ ಸಂತೋಷ್ ಉಪಸ್ಥಿತರಿದ್ದರು. ರೋಟರಿ ಸುಳ್ಯ ಇದರ ಕಾರ್ಯದರ್ಶಿ ರೊl ಲತಾ ಮಧುಸೂದನ್ ವಂದನಾರ್ಪಣೆ ಮಾಡಿದರು.


ಕಾರ್ಯಕ್ರಮದಲ್ಲಿ ಜಂಟಿ ಕ್ಲಬ್ ಗಳ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.