ಐವರ್ನಾಡಿನ ಕೊಯಿಲದಲ್ಲಿ ತಡೆಗೋಡೆ ಕುಸಿತ – ಅಪಾರ ನಷ್ಟ

Advt_Headding_Middle
Advt_Headding_Middle

ಐವರ್ನಾಡಿನ ಕೊಯಿಲದಲ್ಲಿ ಇತ್ತೀಚೆಗೆ ಸುರಿದ ವಿಪರೀತ ಮಳೆಗೆ ಮನೆಯ ಅಂಗಳದ ತಡೆಗೋಡೆಯು ಸಂಪೂರ್ಣ ಕುಸಿತಗೊಂಡಿದೆ.
ಕೊಯಿಲ ಸುಂದರ ಪೂಜಾರಿ ಎಂಬವರ ಮನೆಯ ಎದುರಿನ ಅಂಗಳದ ಬದಿಯು ಕಳೆದ ವರ್ಷ ಮಳೆಗೆ ಕುಸಿದು ಬಿದ್ದಿದ್ದು ಅದಕ್ಕೆ ಹೊಯಿಗೆ,ಮಣ್ಣು ತುಂಬಿಸಿದ ಗೋಣಿಚೀಲಗಳನ್ನು ಕಟ್ಟಿ ಜರಿಯದಂತೆ ಮಾಡಲಾಗಿತ್ತು.


ಆದರೆ ಈ ವರ್ಷ ಮಳೆಗೆ ಸಂಪೂರ್ಣ ಕುಸಿದು ಬಿದ್ದಿದೆ.
ಕೆಳಗೆ ಹೊಳೆಯು ಇದ್ದು ಗೋಣಿಚೀಲಗಳು ಹೊಳೆಯ ಬದಿಗೆ ಬಿದ್ದಿದೆ.
ಹತ್ತಿರದಲ್ಲಿಯೆ ಮನೆಯು ಮನೆಯು ಇರುವುದರಿಂದ ಅಪಾಯದಲ್ಲಿದೆ.
ಅಂಗಳದಲ್ಲಿ ಒಂದು ದೊಡ್ಡ ತೆಂಗಿನ ಮರವು ಇರುವುದರಿಂದ ಇನ್ನಷ್ಟು ಜರಿದರೆ ತೆಂಗಿನ ಮರವೂ ಬೀಳುವ ಸಾಧ್ಯತೆಯಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.