ಹೊಟ್ಟೆಪಾಡಿಗಾಗಿ ಹೂ ಮಾರುತ್ತಿರುವ ಬಾಲಕಿಯೊಬ್ಬಳಿಗೆ ಚಪ್ಪಲ್ ನೀಡುವ ಮೂಲಕ ಇನ್ನೊಂದು ಬಾಲಕಿ ಮಾನವೀಯತೆ ಮೆರೆದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸುಡುಬಿಸಿಲಿನಲ್ಲಿ ನಿಂತು ಪುಟ್ಟ ಬಾಲಕಿ ಹೂ ಮಾರುತ್ತಿರುವುದನ್ನು ಕಂಡು ಕಾರಿನಲ್ಲಿ ಬಂದ ಬಾಲಕಿ ಅವಳಿಗಾಗಿ ಹೊಸ ಚಪ್ಪಲ್ನ್ನು ಕೆಳಗೆ ಹಾಕುತ್ತಾಳೆ. ಹೂ ಮಾರುತ್ತಿರುವ ಬಾಲಕಿಗೆ ಹೃದಯ ತುಂಬಿ ಬರುತ್ತದೆ. ಮಾರನೇ ದಿನ ಅದೇ ಚಪ್ಪಲ್ ಧರಿಸಿ ಬಾಲಕಿ ಹೂ ಮಾರುತ್ತಾಳೆ.
ಲಾಭಕ್ಕಾಗಿ ಅಲ್ಲ, ಒಂದು ಹೊತ್ತು ಅನ್ನಕ್ಕಾಗಿ ಪ್ರತೀ ದಿನ ಪರದಾಡುವವರೂ ಇದ್ದಾರೆ ಎಂಬುದನ್ನು ಈ ವೀಡಿಯೋದಲ್ಲಿ ಕಾಣುತ್ತೇವೆ. ಈ ನಮ್ಮ ನಾಡು ಹಾಗೂ ದೇಶದಲ್ಲಿ ಬಹಳಷ್ಟು ನಿರ್ಗತಿಕರು, ಮಕ್ಕಳು, ವಯಸ್ಸಾದವರು, ಅನಾಥರು, ಅದೆಷ್ಟೋ ಜನರಿದ್ದಾರೆ. ಅಂತವರು ಕಾಣಿಸಿದರೆ ತಮ್ಮ ಕೈಲಾದ ಸಹಾಯವನ್ನು ಮಾಡಬೇಕು ಎಂಬ ಸಂದೇಶ ಈ ವಿಡಿಯೋದಲ್ಲಿದೆ.