Breaking News

ಸುಬ್ರಹ್ಮಣ್ಯ : ಮೋರಿ ಮುಚ್ಚಿ ರಸ್ತೆಯಲ್ಲೇ ನೀರು

Advt_Headding_Middle
Advt_Headding_Middle


ಸುಬ್ರಹ್ಮಣ್ಯದ ಅಗ್ರಹಾರ ಎಂಬಲ್ಲಿ ಪಂಚಾಯತ್ ನಿರ್ಮಿಸಿದ ಮೋರಿಯನ್ನು ಮುಚ್ಚಿ ರಸ್ತೆಯಲ್ಲಿ ನೀರು ನಿಲ್ಲುವಂತಾಗಿದ್ದು, ಇದರಿಂದ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ.


ಗ್ರಾ.ಪಂ ವ್ಯಾಪ್ತಿಯ ಅಗ್ರಹಾರ ರಸ್ತೆಯ ಅಗ್ರಹಾರ ಎಂಬಲ್ಲಿ ಖಾಸಗಿಯವರು ನೂತನ ವಸತಿ ಗೃಹವೊಂದನ್ನು ನಿರ್ಮಿಸುತ್ತಿದ್ದು, ಈ ವೇಳೆ ಮೋರಿಯೊಂದರ ಒಂದು ಭಾಗವನ್ನು ಮುಚ್ಚಿ ರಸ್ತೆಯಲ್ಲಿ ೫೦ ಮೀಟರ್ ನಷ್ಟು ರಸ್ತೆ ಒಂದು ಅಡಿಗೂ ಹೆಚ್ಚು ನೀರು ನಿಲ್ಲುವಂತೆ ಮಾಡಿ ಸಾರ್ವಜನಿಕರು ತೊಂದರೆಗೆ ಒಳಪಡುವಂತಾಗಿದೆ.

ಈ ರಸ್ತೆಯಲ್ಲಿ ಹೋಗುವ ಪ್ರಯಾಣಿಕರು, ವಾಹನ ಸವಾರರು ಕಷ್ಟ ಪಟ್ಟು ಹೋಗುವಂತ ಪರಿಸ್ಥಿತಿ ಬಂದೊದಗಿದೆ. ಇದರ ಬಗ್ಗೆ ಭಾಗದ ನಿವಾಸಿಗಳು ಪಂಚಾಯತ್ ಗಮನಕ್ಕೆ ತಂದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಆಕ್ಷೇಪವಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.