ಶ್ರೀ ಭಗವತಿ ಯುವ ಸೇವಾ ಸಂಘದ ವತಿಯಿಂದ ಕರಸೇವೆ

Advt_Headding_Middle
Advt_Headding_Middle

ಬೂಡು ಅಂಗನವಾಡಿ ಕೇಂದ್ರದ ನವೀಕರಣದ ಕರಸೇವೆಯು ಶ್ರೀ ಭಗವತಿ ಯುವ ಸೇವಾ ಸಂಘದ ವತಿಯಿಂದ ಆ. ೯ರಂದು ನಡೆಯಿತು.

೨೦೦೪ರಲ್ಲಿ ಶ್ರೀ ಭಗವತಿ ಯುವ ಸೇವಾ ಸಂಘದ ವತಿಯಿಂದ ಬೂಡು ಅಂಗನವಾಡಿ ಕೇಂದ್ರಕ್ಕೆ ಕೊಡುಗೆಯಾಗಿ ನೀಡಲಾಗಿತ್ತು. ೨೦೦೪ರಿಂದಲೂ ಶ್ರೀ ಭಗವತಿ ಯುವ ಸೇವಾ ಸಂಘದ ವತಿಯಿಂದ ಸ್ವಾತಂತ್ರ್ಯ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಧ್ವಜಸ್ತಂಭವು ಶಿಥಿಲವಾಗಿತ್ತು.
ಹಳೆಯ ಧ್ವಜಸ್ತಂಭವನ್ನು ತೆರವುಗೊಳಿಸಿ ಹೊಸದಾಗಿ ಅಳವಡಿಸಲಾಯಿತು. ಈ ಕರಸೇವೆ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ವಾಸುದೇವ ನಾಯಕ್, ಉಪಾಧ್ಯಕ್ಷರಾದ ಸಂಜೀವ ಆಚಾರ್ಯ, ಬೀರಣ್ಣ ಗೌಡ, ಕಾರ್ಯದರ್ಶಿ ಹೇಮನಾಥ್ ಕುತ್ತಿಮುಂಡ, ಖಜಾಂಚಿ ರಾಮಚಂದ್ರ, ಮಾಜೀ ಅಧ್ಯಕ್ಷರುಗಳಾದ ಮಾಜಿ ನಪಂ ಸದಸ್ಯರಾದ ಗೋಪಾಲ ನಡುಬೈಲು, ವಿಠಲ ರೈ, ಕುಸುಮಾಧರ ರೈ, ಸದಸ್ಯರಾದ ಅಜಯ್ ಕುರುಂಜಿಗುಡ್ಡೆ, ಜನಾರ್ದನ ಕುರುಂಜಿಗುಡ್ಡೆ, ದೀಕ್ಷಿತ್ ಕೇರ್ಪಳ, ಪ್ರದೀಪ್ ರೈ, ನಿತ್ಯಾನಂದ ಕುದ್ಪಾಜೆ, ಲಕ್ಷ್ಮೀಶ ಕೇರ್ಪಳ, ಮಣಿಕಂಠ ಕೇರ್ಪಳ, ಲಕ್ಷ್ಮಣ ಕೇರ್ಪಳ, ತೀಕ್ಷಣ್ ಗೌಡ, ಬಾಲಚಂದ್ರ ಕೇರ್ಪಳ, ವಿಜಯ್ ಕುಮಾರ್ ಕುರುಂಜಿಗುಡ್ಡೆ, ಅಂಗನವಾಡಿ ಕಾರ್ಯಕರ್ತೆ ಕವಿತಾ ಬೂಡು, ಸಹಾಯಕಿ ಕುಸುಮಾವತಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.