ಸುಳ್ಯದ ಸರಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಭಾನುಮತಿ ವಿ. ನಿವೃತ್ತಿ

Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಸುಳ್ಯದ ಸರಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಭಾನುಮತಿ ವಿ.ಯವರು ತಮ್ಮ ೨೮ವರುಷದ ಸೇವೆಯಿಂದ ಎ.೩೦ರಂದು ನಿವೃತ್ತರಾದರು.

ಇವರು 1992-1995 ನೇ ಇಸವಿಯಲ್ಲಿ ಕೆ.ಎಫ್.ಡಿ.ಸಿ.ಯ ಮಹಿಳಾ ಮೆಡಿಕಲ್ ಆಫೀಸರ್ ಆಗಿ ಸುಳ್ಯಕ್ಕೆ ಆಗಮಿಸಿ, 1996-2003ರವರೆಗೆ ಕಮ್ಯೂನಿಟಿ ಹೆಲ್ತ್ ಸೆಂಟರ್ ಸುಳ್ಯ ಇಲ್ಲಿನ ಮೆಡಿಕಲ್ ಆಫೀಸರ್ ಆಗಿ, 2015-2017ರಲ್ಲಿ ಸುಳ್ಯ ಸಂಚಾರಿ ಗಿರಿಜನ ಆರೋಗ್ಯ ಘಟಕದ ಮೆಡಿಕಲ್ ಆಫೀಸರ್ ಆಗಿ, 2015-2017ರಲ್ಲಿ ಅರಂತೋಡು ಪ್ರಾಥಮಿಕ ಆರೋಗ್ಯ ಘಟಕದ ವೈದ್ಯಕೀಯ ಅಧಿಕಾರಿಯಾಗಿದ್ದರು. ಬಳಿಕ 2017-2020ರಲ್ಲಿ ಸುಳ್ಯದ ಸರಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಭಡ್ತಿಗೊಂಡು ಎ.30ರಂದು ಸೇವೆಯಿಂದ ನಿವೃತ್ತಿ ಹೊಂದಿದರು.
ಕೊರೋನಾ ಕಾರಣದಿಂದ ಇವರ ಸೇವಾ ಅವಧಿ 2 ತಿಂಗಳುಗಳ ಕಾಲ ವಿಸ್ತರಣೆಯಾಗಿತ್ತು.
ಪ್ರಸ್ತುತ ಕಣಚೂರು ವೈದ್ಯಕೀಯ ಕಾಲೇಜು, ದೇರಳಕಟ್ಟೆ, ಮಂಗಳೂರು ಇಲ್ಲಿನ ಮೆಡಿಕಲ್ ಆಫೀಸರ್ ಆಗಿ (ಎನ್‌ಟಿಇಪಿ) ಮೆಡಿಕಲ್ ಕಾಲೇಜ್ ಹುದ್ದೆಗೆ ನೇಮಕಗೊಂಡಿದ್ದಾರೆ.
ಹಾಗೂ ಶನಿವಾರ ಹಾಗೂ ಭಾನುವಾರ ಸುಳ್ಯದ ಸದಾಶಿವ ನಿಲಯದಲ್ಲಿ ಚಿಕಿತ್ಸೆಗೆ ಲಭ್ಯರಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.