ಸುಳ್ಯ ಸಿ.ಡಿ.ಪಿ.ಒ. ಶ್ರೀಮತಿ ರಶ್ಮಿ ಅಶೋಕ್ ನೆಕ್ರಾಜೆಯವರಿಗೆ ಕೊರೋನ ಪೊಸಿಟಿವ್ ಬಂದಿರುವುದಾಗಿ ವರದಿಯಾಗಿದೆ.
ಮಂಗಳೂರಿನಲ್ಲಿ ಜಿ.ಪಂ. ಮುಖ್ಯ ಕಾರ್ಯದರ್ಶಿ ಯವರು ಕರೆದ ಸಭೆಯಲ್ಲಿ ಭಾಗವಹಿಸಿ ಬಂದಿದ್ದ ರಶ್ಮಿಯವರಿಗೆ ಬಳಿಕ ಸ್ವಲ್ಪಮಟ್ಟಿನ ಜ್ವರ ಕಂಡುಬಂದ ಹಿನ್ನೆಲೆಯಲ್ಲಿ ಕೊರೋನ ಪರೀಕ್ಷೆ ನಡೆಸಿದಾಗ ಅವರಿಗೆ ಪಾಸಿಟಿವ್ ಬಂದಿರುವುದಾಗಿ ತಿಳಿದುಬಂದಿದೆ. ಅವರು ಇವತ್ತಿನಿಂದ ಯೇನೆಕಲ್ ನಲ್ಲಿರುವ ಅವರ ತೋಟದ ಮನೆಯಲ್ಲಿ ಕ್ವಾರಂಟೈನ್ ಗೊಳಗಾಗಿದ್ದಾರೆಂದು ತಿಳಿದುಬಂದಿದೆ.
ಪತ್ನಿಗೆ ಪಾಸಿಟಿವ್ ಬಂದಿರುವ ಕಾರಣ ತಾ.ಪಂ.ಸದಸ್ಯ ಅಶೋಕ್ ನೆಕ್ರಾಜೆಯವರು ಕೂಡ ಸ್ವಯಂ ಕಾರಂಟೈನ್ ಗೊಳಗಾಗಲು ನಿರ್ಧರಿಸಿರುವುದಾಗಿ ತಿಳಿದಿಬಂದಿದೆ.