ಯೇನೆಕಲ್ಲು ಸರಕಾರಿ, ಸ್ನೇಹ ಸುಳ್ಯ, ಕುಮಾರಸ್ವಾಮಿ ಸುಬ್ರಹ್ಮಣ್ಯ, ಸತ್ಯಸಾಯಿ ಚೊಕ್ಕಾಡಿಗೆ ಶೇ.100
2019 – 20 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ಸುಳ್ಯ ತಾಲೂಕಿಗೆ ಶೇ.76.18 ಫಲಿತಾಂಶ ದಾಖಲಾಗಿದೆ.
ತಾಲೂಕಿನ 38 ವಿದ್ಯಾಸಂಸ್ಥೆ ಗಳಿಂದ 1818 ವಿದ್ಯಾರ್ಥಿಗಳು ಪರೀಕ್ಷೆ ಬರೆದು ಅವರಲ್ಲಿ 1385 ವಿದ್ಯಾರ್ಥಿಗಳು ತೇರ್ಗಡೆ ಯಾಗಿದ್ದಾರೆ.
ಸರಕಾರಿ ಪ್ರೌಢಶಾಲೆ ಯೇನೆಕಲ್ಲು, ಸ್ನೇಹ ವಿದ್ಯಾಸಂಸ್ಥೆ ಸುಳ್ಯ, ಸತ್ಯಸಾಯಿ ವಿದ್ಯಾಸಂಸ್ಥೆ ಚೊಕ್ಕಾಡಿ, ಕುಮಾರಸ್ವಾಮಿ ವಿದ್ಯಾಸಂಸ್ಥೆ ಸುಬ್ರಹ್ಮಣ್ಯ ಶೇ.100 ಫಲಿತಾಂಶ ದಾಖಲಾಗಿದೆ.
ಕುಮಾರಸ್ವಾಮಿ ಯ ಅನುಷ್ 625 ಅಂಕಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ.