Breaking News

ದುಗಲಡ್ಕ: 29ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ

Advt_Headding_Middle
Advt_Headding_Middle

ದುಗಲಡ್ಕದ ಮಿತ್ರ ಯುವಕ ಮಂಡಲ ಕೊಯಿಕುಳಿ ಹಾಗೂ ಕುರಲ್ ತುಳುಕೂಟ ದುಗಲಡ್ಕ ಇದರ ಆಶ್ರಯದಲ್ಲಿ 29 ನೇ ವರುಷದ ಶ್ರೀ ಕೃಷ್ಣ ಜನ್ಮಾಷ್ಠಮಿ ಯನ್ನು ಸರಳವಾಗಿ ಮಿತ್ರ ಯುವಕ ಮಂಡಲದ ಕಟ್ಟಡದಲ್ಲಿ ಇಂದು ಆಚರಿಸಲಾಯಿತು.

ಕಾರ್ಯಕ್ರಮವನ್ನು ದುಗಲಡ್ಕ ಸರಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಎ.ಯು.ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.ಕುರಲ್ ತುಳುಕೂಟದ ಸಂಚಾಲಕ ಕೆ.ಟಿ.ವಿಶ್ವನಾಥ ಮಾತನಾಡಿದರು. ವೇದಿಕೆಯಲ್ಲಿ ಮಿತ್ರ ಯುವಕ ಮಂಡಲದ ಅಧ್ಯಕ್ಷ ದಿನೇಶ್ ಕೊಯಿಕುಳಿ,ಕುರಲ್ ತುಳುಕೂಟದ ಅಧ್ಯಕ್ಷ ನಾರಾಯಣ ಟೈಲರ್ ಉಪಸ್ಥಿತರಿದ್ದರು. ದಿನೇಶ್ ಕೊಯಿಕುಳಿ ಸ್ವಾಗತಿಸಿ, ಯುವಕ ಮಂಡಲದ ನಿಕಟಪೂರ್ವಾಧ್ಯಕ್ಷ ಭವಾನಿಶಂಕರ ಕಲ್ಮಡ್ಕ ವಂದಿಸಿದರು.


ಬಳಿಕ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೆಲವು ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸಲಾಯಿತು. ಬಹುಮಾನ ವಿತರಣೆಯನ್ನು ಕುರಲ್ ತುಳುಕೂಟದ ಮಾಜಿ ಅಧ್ಯಕ್ಷ ಸಿರಿಲ್ ಡಿ ಸೋಜ, ಮಾಜಿ ನ.ಪಂ.ಸದಸ್ಯ ಜನಾರ್ದನ ಗೌಡ ಮೋಂಟಡ್ಕ,ಗೌರವ ಸಲಹೆಗಾರರಾದ ಕೃಷ್ಣ ಸ್ವಾಮಿ ಕಂದಡ್ಕ ನೆರವೇರಿಸಿದರು. ಸಂಚಾಲಕ ಕೆ.ಟಿ.ವಿಶ್ವನಾಥ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಯುವಕ ಮಂಡಲದ ಮಾಜಿ ಅಧ್ಯಕ್ಷ ಮನೋಜ್ ಪಾನತ್ತಿಲ ಸ್ವಾಗತಿಸಿ, ರಮೇಶ್ ನೀರಬಿದಿರೆ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.ಬಳಿಕ ರೋಟರಿ ಸಹಭಾಗಿತ್ವದಲ್ಲಿ ದುಗಲಡ್ಕ ಪ್ರೌಢಶಾಲೆಯಲ್ಲಿ ನಡೆದ ವನಮಹೋತ್ಸವದ ಗಿಡ ಗಳನ್ನು ವಿತರಿಸಲಾಯಿತು.


ಶ್ರಮದಾನ
ಮಿತ್ರ ಯುವಕ ಮಂಡಲದ ಸದಸ್ಯರು ಮತ್ತು ಕುರಲ್ ತುಳುಕೂಟದ ಸದಸ್ಯರು ಅಷ್ಠಮಿ ಕಾರ್ಯಕ್ರಮದ ಬಳಿಕ ಶ್ರಮದಾನ ನಡೆಸಿದರು. ಯುವಕ ಮಂಡಲದ ಕಟ್ಟಡದ ಆವರಣದಲ್ಲಿ ಗಿಡ ಗಂಟಿಗಳನ್ನು ತೆಗೆದು ಸ್ವಚ್ಚ ಗೊಳಿಸಲಾಯಿತು.ತೆಂಗಿನ ಬುಡಕ್ಕೆ ಸೊಪ್ಪು ಹಾಕುವ ಕೆಲಸವನ್ನು ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.