ಜಾಲ್ಸೂರು: ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ವಿಶೇಷ ಭಜನೆ

Advt_Headding_Middle
Advt_Headding_Middle

 

ಜಾಲ್ಸೂರಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ವಿಶೇಷ ಭಜನಾ ಕಾರ್ಯಕ್ರಮವು ಶ್ರೀ ಗುರುರಾಘವೇಂದ್ರ ಸ್ವಾಮಿ ಭಜನಾ ಮಂದಿರದಲ್ಲಿ ಆ.11ರಂದು ರಾತ್ರಿ ಜರುಗಿತು.

ಕೋವಿಡ್-19 ಹಿನ್ನೆಲೆಯಲ್ಲಿ ಸರಕಾರದ ನಿರ್ಬಂಧವಿರುವ ಕಾರಣದಿಂದ ಈ ಬಾರಿ ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ವಿವಿಧ ಆಟೋಟ ಕಾರ್ಯಕ್ರಮಗಳನ್ನು ನಡೆಸದೆ ಕೇವಲ ಭಜನೆಯನ್ನು ಮಂದಿರದ ಅರ್ಚಕ ರಾಮಕೃಷ್ಣ ಭಟ್ ಅವರ ನೇತೃತ್ವದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ನಡೆಸಲಾಯಿತು.
ಈ ಸಂದರ್ಭದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಜಗದೀಶ್ ಬೇರ್ಪಡ್ಕ, ಪ್ರ.ಕಾರ್ಯದರ್ಶಿ ವಿನಯ್ ಜಾಲ್ಸೂರು, ಕೋಶಾಧಿಕಾರಿ ರಾಮಣ್ಣ ನಾಯ್ಕ ಮರಸಂಕ, ಭಜನಾ ಮಂದಿರದ ಅಧ್ಯಕ್ಷ ಎಸ್. ಬಾಬು ಪಾಟಾಳಿ ಅರಿಯಡ್ಕ, ಭಜನಾ ಮಂದಿರದ ಪ್ರ.ಕಾರ್ಯದರ್ಶಿ ಮೋಹನ ಬೆಳ್ಚಪ್ಪಾಡ ಜಾಲ್ಸೂರು, ಜಯರಾಮ ರೈ ಜಾಲ್ಸೂರು, ಮಾದವ ಗೌಡ ಕಾಳಮನೆ, ನಾರಾಯಣ ಗೌಡ ಕದಿಕಡ್ಕ, ಸತೀಶ ಮರಸಂಕ ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.