ಬಿರುಕು ಬಿಟ್ಟ ಮನೆಯ ಗೋಡೆ
ಕೂಡಲೇ ಸ್ಪಂದಿಸಿದ ಸಹಕಾರಿ ಸಂಘ ಮತ್ತು ಗ್ರಾ.ಪಂ
ಆಹಾರ ಕಿಟ್ ಮತ್ತು ತುರ್ತು ಪರಿಹಾರ ಹಸ್ತಾಂತರ
ಐವರ್ನಾಡು ಗ್ರಾಮ ಬಾಂಜಿಕೋಡಿ ಎಂಬಲ್ಲಿ ಇತ್ತೀಚೆಗೆ ಸುರಿದ ವಿಪರೀತ ಮಳೆಗೆ ಮನೆಯ ಮೇಲ್ಛಾವಣಿ ಸಂಪೂರ್ಣ ಕುಸಿದು ಬಿದ್ದಿದ್ದು ಅಪಾರ ಹಾನಿಯಾಗಿದೆ.
ಗೋಡೆಯೂ ಬಿರುಕು ಬಿದ್ದಿದ್ದು ವಾಸಿಸಲು ಅಸಾಧ್ಯವಾಗಿದೆ.
ಪ್ರಭಾಕರ ನಾಯಕ್ ಎಂಬವರ ಮನೆಯು ಗಾಳಿ,ಮಳೆಗೆ ಕುಸಿದು ಬಿದ್ದಿದ್ದು ಮಳೆಗಾಲದಲ್ಲಿ ಅವರಿಗೆ ವಾಸಿಸಲು ತೊಂದರೆಯಾಗಿದೆ.
ಇವರಿಗೆ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಒಂದು ವಾರಕ್ಕೆ ಬೇಕಾದ ಆಹಾರ ಕಿಟ್ ಹಾಗೂ ವಿಲೇಜ್ ಟಾಸ್ಕ್ ಫೋರ್ಸ್ ಸಮಿತಿ ಯಿಂದ ರೂ.5000 ದ ಚೆಕ್ ತುರ್ತು ಪರಿಹಾರವಾಗಿ ಇಂದು ನೀಡಲಾಯಿತು.
ಅವರ ಮನೆಗೆ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ,ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ,ಉಪಾಧ್ಯಕ್ಷ ವಿಕ್ರಂ ಪೈ,ಗ್ರಾಮ ಲೆಕ್ಕಾಧಿಕಾರಿ ಕಾರ್ತಿಕ್,ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯು.ಡಿ.ಶೇಖರ್,ಮಾಜಿ ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ,ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸಿ.ಕೆ,ಶಾಂತಾರಾಮ ಕಣಿಲೆಗುಂಡಿ,ಮಹೇಶ್ ಮೇನಾಲ,ಶೇಖರ ಮಡ್ತಿಲ ಮತ್ತಿತರರು ಭೇಟಿ ನೀಡಿದರು.
ಹಾನಿಗೊಳಗಾದ ಮನೆಯ ಹಂಚು ಮತ್ತು ಇತರ ವಸ್ತುಗಳನ್ನು ತೆಗೆಯುವಲ್ಲಿ ಶ್ರೀಧರ ಮಿತ್ತಮೂಲೆ ಮತ್ತು ಮನೆಯವರು,ಪ್ರಸಾದ್ ಬಾಂಜಿಕೋಡಿ, ಸುನಿಲ್ ನಿಡ್ಡಾಜೆ,ಶರೀಪ್ ನಿಡುಬೆ ಶಾಂತರಾಮ ಕಣಿಲೆಗುಂಡಿ, ಬಾಲಕೃಷ್ಣ ಗೌಡ ಕೀಲಾಡಿಯವರು ಸಹಕರಿಸಿದರು.
ಮೆಸ್ಕಾಂ ಇಲಾಖೆಯವರು ಕೂಡಲೇ ಸ್ಥಳಕ್ಕಾಗಮಿಸಿ ವಿದ್ಯುತ್ ಕಡಿತಗೊಳಿಸಿ ಸಹಕರಿಸಿದರು.