ಮಡಿಕೇರಿಯಿಂದ ರೋಗಿಯೊಬ್ಬರನ್ನು ತುರ್ತು ಚಿಕಿತ್ಸೆಗಾಗಿ ಮಂಗಳೂರಿಗೆ ಆಂಬುಲೆನ್ಸ್ನಲ್ಲಿ ಕೊಂಡೊಯ್ಯುವ ವೇಳೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸುಳ್ಯದಲ್ಲಿ ಟ್ರಾಫಿಕ್ ಕ್ಲಿಯರೆನ್ಸ್ ಮಾಡಲಾಯಿತು.
ಆಂಬುಲೆನ್ಸ್ ಬರುವ ವಿಚಾರ ಪೊಲೀಸರಿಗೆ ಮೊದಲೇ ಮಾಹಿತಿ ಬಂದದ್ದರಿಂದ ಪೊಲೀಸರು ಟ್ರಾಫಿಕ್ ಕ್ಲಿಯರೆನ್ಸ್ ಮಾಡಿ ಸಹಕರಿಸಿದರು. ಸಾಮಾಜಿಕ ಜಾಲತಾಣದಲ್ಲಿ ಆಂಬುಲೆನ್ಸ್ ಬರುವ ಮಾಹಿತಿ ಹರಿದಾಡಿದ್ದರಿಂದ ಜನ ಕೂಡಾ ಸಹಕರಿಸಿದರು. ಆಂಬುಲೆನ್ಸ್ ಸುಳ್ಯದಲ್ಲಿ ಹೋಗುವ ವೇಳೆ ಸ್ಥಳೀಯರು ಹಾಗೂ ಪೊಲೀಸ್ ವಾಹನಗಳು ಎಸ್ಕಾರ್ಟ್ ನೀಡಿತು.