ಬಳ್ಪ ಗ್ರಾಮದ ಅಗಳ್ತ ಎಲ್ಯಣ್ಣ ಗೌಡರು ಅಲ್ಪ ಕಾಲದ ಅಸೌಖ್ಯದಿಂದ ಆ.13 ರಂದು ನಿಧನರಾದರು.
ಅವರಿಗೆ 69 ವರ್ಷ ಪ್ರಾಯವಾಗಿತ್ತು.
ಉದನೆ ಸೈಂಟ್ ಆಂಟನಿ ಪ್ರೌಢಶಾಲೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಅಧ್ಯಾಪಕರಾಗಿ,ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಇವರು ಪ್ರಸ್ತುತ ಧರ್ಮಸ್ಥಳದಲ್ಲಿ ನೆಲೆಸಿದ್ದರು.
ಮೃತರ ಪತ್ನಿ ಶ್ರೀಮತಿ ಚಂದ್ರಿಕಾರವರು ಐವರ್ನಾಡು ಗ್ರಾಮದ ದಿ.ಮಡ್ತಿಲ ದೇವಯ್ಯ ಗೌಡರ ಪುತ್ರಿಯಾಗಿದ್ದು ಪ್ರಸ್ತುತ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹೈಸ್ಕೂಲ್ ಉಜಿರೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದಾರೆ.
ಪುತ್ರರಾದ ನಿತಿನ್,ನೂತನ್ ಪುತ್ರಿ ದೀಪ್ತಿ ಯತೀಶ್,ಅಳಿಯ,ಮೊಮ್ಮಗ,ಸೊಸೆಯಂದಿರು,ಸಹೋದರರು,ಸಹೋದರಿಯರು,ಕುಟುಂಬಸ್ಥರು ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.