ಪಂಜ ಗ್ರಾಮ ಪಂಚಾಯತ್ ನಲ್ಲಿ 74ನೇ ಸ್ವಾತಂತ್ರ್ಯೋತ್ಸವ

Advt_Headding_Middle
Advt_Headding_Middle

ಪಂಜ ಗ್ರಾಮ ಪಂಚಾಯತ್ ನಲ್ಲಿ 74ನೇ ಸ್ವಾತಂತ್ರ್ಯೋತ್ಸವು ಗ್ರಾಮ ಪಂಚಾಯತ್ ಪಂಜ, ಜೇಸಿಐ ಪಂಜ ಪಂಚಶ್ರೀ, ಬಿ.ಎಂ.ಎಸ್ ರಿಕ್ಷಾ ಚಾಲಕರ ಸಂಘ, ವರ್ತಕರ ಸಂಘ, ಭಾರತ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜ ಇವುಗಳ ಆಶ್ರಯದಲ್ಲಿ ನಡೆಯಿತು. ಪಂಚಾಯತ್ ಆಡಳಿತಾಧಿಕಾರಿ ಡಾ.ದೇವೀಪ್ರಸಾದ್ ಕಾನತ್ತೂರ್ ರವರು ಅಧ್ಯಕ್ಷತೆ ವಹಿಸಿ ಧ್ವಜಾರೋಹಣಗೈದರು. ಬಳಿಕ ಜರಗಿದ ಸಭಾ ಕಾರ್ಯಕ್ರಮದಲ್ಲಿ ಜೇಸಿಐ ಪಂಜ ಪಂಚಶ್ರೀ ನಾಗಮಣಿ ಕೆದಿಲ ಅಧ್ಯಕ್ಷತೆ ವಹಿಸಿದ್ದರು. ಜೆಸಿಐ ವಲಯ ತರಬೇತಿದಾರ ಹರ್ಷಿತ್ ಪಡ್ರೆ  ಮುಖ್ಯ ಭಾಷಣ ಮಾಡಿದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಣಿಯಾನ ಪುರುಷೋತ್ತಮ, ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ನೆಕ್ಕಿಲ, ವರ್ತಕರ ಸಂಘದ ಮೇದಪ್ಪ ಗೌಡ, ಸ್ಕೌಟ್ ಮತ್ತು ಗೈಡ್ಸ್ ನ ದೇವಿಪ್ರಸಾದ್ ಜಾಕೆ, ಜೇಸಿಐ ನಿಕಟಪೂರ್ವ ಅಧ್ಯಕ್ಷ ವಾಸುದೇವ ಮೆಲ್ಪಾಡಿ, ಕಾರ್ಯದರ್ಶಿ ದೇವಿಪ್ರಸಾದ್ ಚಿಕ್ಮುಳಿ , ಕೌಶಿಕ್ ಕುಳ ವೇದಿಕೆಗೆ ಆಹ್ವಾನಿಸಿದರು ‌. ನಾಗಮಣಿ ಕೆದಿಲ ಸ್ವಾಗತಿಸಿದರು. ಪ್ರವೀಣ್ ಕಾಯರ ಅತಿಥಿಗಳನ್ನು ಪರಿಚಾಯಿಸಿದರು. ಜಿಲ್ಲಾ ಶುಚಿತ್ವ ಮತ್ತು ಪರಿಸರ ಜಿಲ್ಲಾ ಸಹ ಸಂಯೋಜಕರು ಪವನ್ ಕುಮಾರ್ ಸ್ವಚ್ಛತೆಯ ಪ್ರಮಾಣವಚನ ಸಭೆಗೆ ಬೋಧಿಸಿದರು ದೇವಿಪ್ರಸಾದ್ ಪ್ರಸಾದ ಚಿಕ್ಮುಳಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.