SKSSF ಸುಳ್ಯ ಟೌನ್ ಸಮಿತಿಯ ವತಿಯಿಂದ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಸುನ್ನಿ ಮಹಲ್ ಮುಂಬಾಗದಲ್ಲಿ ಆಚರಿಸಲಾಯಿತು. ದ್ವಾಜಾರೋಹಣವನ್ನು ರೋಟೀರಿಯನ್ ಬಾಪು ಸಾಹೇಬ್ ನೆರವೇರಿಸಿ ಸಂದೇಶವನ್ನು ಸಾರಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು SKSSF ಸುಳ್ಯ ಕ್ಲಸ್ಟರ್ ಅಧ್ಯಕ್ಷ ಅಬ್ದುಲ್ ರಜಾಕ್ ಕರಾವಳಿ ವಹಿಸಿದರು. ಉನೈಸ್ ಮುಸ್ಲಿಯಾರ್ ದುವಾದೊಂದಿಗೆ ಧನ್ಯಗೊಳಿಸಿದರು.
ಗಾಂಧಿನಗರ ಜಮಾಅತ್ ಸಮಿತಿ ಸದಸ್ಯ ಮಜೀದ್ ಕೆ ಬಿ ಮತ್ತು ನಗರ ಸಮಿತಿ ಕಾರ್ಯದರ್ಶಿ ಅಕ್ಬರ್ ಕರಾವಳಿ ಸಂಧರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಮದ್ರಸಾ ಮೆನೇಜ್ಮೆಂಟ್ ಕೋಶಾಧಿಕಾರಿ ಹಾಜಿ ಎಸ್.ಎ ಹಮೀದ್, ಹಾಜಿ ಅಹ್ಮದ್ ಸುಪ್ರೀಂ, ಹಾಜಿ ಅಹ್ಮದ್ ಪಾರೆ, ಡಾ.ರಿಝ್ವಾನ್ MBBS, ಇಕ್ಬಾಲ್ ಸುಳ್ಯ, ಅಬ್ದುಲ್ ಖಾದರ್ ಕಮ್ಮಾಡಿ, ಮುಸ್ತಫಾ ಬೀಜಕೊಚ್ಚಿ, ಆಗಮಿಸಿದರು.
ಜಿಲ್ಲಾ ಕೌನ್ಸಿಲ್ ಸದಸ್ಯ ಶಹೀದ್ ಪಾರೆ, ಮಷೂದ್ ಮಚ್ಚು, ರಾಶಿದ್ ಪೇರೆ, ಹಾಷಿಂ ಕೆ.ಹೆಚ್, ನಿಜಾರ್ ಸುಳ್ಯ, ನಿಝಾಂ ಅರಂಬೂರ್, ನವಾಜ್ ಸುಪ್ರೀಂ ಉಪಸ್ಥಿತರಿದ್ದರು.ಆಶಿಕ್ ಸುಳ್ಯ ಕಾರ್ಯಕ್ರಮಕ್ಕೆ ಎಲ್ಲರನ್ನು ಬರಮಾಡಿಕೊಂಡು,ವಂದನಾರ್ಪಣೆಗೈದರು.