Breaking News

ಓಡಬಾಯಿ ವಿನೂ ನಗರದ ರಸ್ತೆ ಮುಚ್ಚಿದ ವಿವಾದ

Advt_Headding_Middle
Advt_Headding_Middle

ನಗರ ಪಂಚಾಯತ್ ಎದುರು ಲೇಔಟ್ ನಿವಾಸಿಗಳ ಪ್ರತಿಭಟನೆ

ಸುಳ್ಯದ ಓಡಬಾಯಿಯಲ್ಲಿರುವ ವಿನೂ ನಗರದ ನಿವಾಸಿಗಳು ತಮ್ಮ ಈ ಮೊದಲಿನ ಮಾಮೂಲಿ ರಸ್ತೆಯನ್ನು ಮುಚ್ಚಲಾಗಿರುವುದನ್ನು ಪ್ರತಿಭಟಿಸಿ ಸುಳ್ಯ ನಗರ ಪಂಚಾಯತ್ ಕಚೇರಿಯೆದುರು ಬ್ಯಾನರ್ ಹಿಡಿದು ನಿಂತರಲ್ಲದೆ , ರಸ್ತೆ ಮುಚ್ಚಿ ತಮಗಾಗಿರುವ ಸಮಸ್ಯೆಯನ್ನು ಕೂಡಲೇ ನಿವಾರಿಸಬೇಕೆಂದು ಒತ್ತಾಯಿಸಿದರು.


ವಿನೂ ನಗರ ಲೇಔಟ್ ಗೆ ಓಡಬಾಯಿ ರಾಜ್ಯಹೆದ್ದಾರಿ ಕಡೆಯಿಂದ ಹೋಗಲು ನಿರ್ಮಿಸಿದ್ದ ಡಾಮರು ರಸ್ತೆಯನ್ನು ಹೆದ್ದಾರಿಬದಿಯ ಜಾಗವನ್ನು ಖರೀದಿಸಿದವರು ಬಂದ್ ಮಾಡಿದ್ದರು. ಬದಲಿಗೆ ಲೇಔಟ್ ಗೆ ನಿವೇಶನಗಳನ್ನು ಮಾರಾಟ ಮಾಡಿದ್ದ ಶುಭಕರ ರಾವ್ ರವರು ಅವರ ಜಾಗದ ಬದಿಯಲ್ಲಿ ನಿರ್ಮಿಸಿರುವ ರಸ್ತೆ ಸಂಚಾರಕ್ಕೆ ಪೂರಕವಾಗಿಲ್ಲವೆಂದು ಸ್ಥಳೀಯರು ಅಸಮಾಧಾನಗೊಂಡಿದ್ದರು. ಈ ಅಸಮಾಧಾನ ಆ.14 ರಂದು ಸ್ಫೋಟಗೊಂಡು ಪ್ರತಿಭಟನೆಯ ಸ್ವರೂಪ ತಳೆದಾಗ ಪೋಲೀಸರು ಮಧ್ಯಪ್ರವೇಶಿಸಿ ಸೋಮವಾರ ನಗರ ಪಂಚಾಯತ್ ಗೆ ಹೋಗಿ ಮಾತನಾಡುವಂತೆ ಸೂಚಿಸಿ ಜನರನ್ನು ಸಮಾಧಾನಗೊಳಿಸಿದ್ದರು.
ಆ.17 ರಂದು ವಿನೂ ನಗರ ಲೇಔಟ್ ನಿವಾಸಿಗಳು ವಿನೂನಗರ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಎಂಬ ಹೆಸರಲ್ಲಿ *ವಿನೂನಗರ ಲೇಔಟ್ ನ ಪಶ್ಚಿಮ ದಿಕ್ಕಿನ ಸುಳ್ಯ ಪುತ್ತೂರು ರಸ್ತೆಯಿಂದ ನೇರ ಸಂಪರ್ಕ ರಸ್ತೆಯ ತಡೆ ತೆರವಿಗಾಗಿ ಹೋರಾಟ* ಎಂದು ಬರೆದ ಬ್ಯಾನರ್ ಹಿಡಿದುಕೊಂಡು ನಗರ ಪಂಚಾಯತ್ ಎದುರುಗಡೆ ಬಂದು ನಿಂತರು. ಬಳಿಕ ತಮ್ಮ ರಸ್ತೆ ಸಮಸ್ಯೆ ಪರಿಹರಿಸುವಂತೆ ನ.ಪಂ.ಗೆ ಮನವಿ ಸಲ್ಲಿಸಿದರು.

” ಓಡಬಾಯಿ ಬಳಿ ಹಲವು ವರ್ಷಗಳ ಹಿಂದೆ ಶುಭಕರ ರಾವ್ ಎಂಬವರು ಮಾರಾಟ ಮಾಡಿದ ಸ್ಥಳದಲ್ಲಿ ರಿಯಲ್ ಎಸ್ಟೇಟ್ ಸಂಸ್ಥೆ ವಿನೂ ನಗರ ಎಂಬ ಬಡಾವಣೆಯನ್ನು ನಿರ್ಮಿಸಿದೆ. ಇಲ್ಲಿ ಲಕ್ಷಾಂತರ ರೂ ಕೊಟ್ಟು ನಾವು ನಿವೇಶನ ಖರೀದಿಸಿ ಮನೆ ಕಟ್ಟಿದ್ದೇವೆ. ಇದೀಗ ನಾವು ನಿವೇಶನ ಖರೀದಿ ಮಾಡುವ ಸಂದರ್ಭದಲ್ಲಿ ಇದ್ದ ರಸ್ತೆಯನ್ನು ಒಳಗೊಂಡಂತೆ ಹೆದ್ದಾರಿ ಬದಿಯ ಜಾಗವನ್ನು ಇನ್ನೊಬ್ಬರಿಗೆ ಮಾರಾಟ ಮಾಡಿ ಲೇಔಟ್ ನ ಇದನ್ನೊಂದು ತುದಿಯಲ್ಲಿ ನೂತನವಾಗಿ ಯಾವುದೇ ವ್ಯವಸ್ಥೆಗಳಿಲ್ಲದ ರಸ್ತೆ ನಿರ್ಮಿಸಿದ್ದಾರೆ. ವಿನೂ ನಗರ್ ಲೇಔಟ್ ನಲ್ಲಿ 56 ಸೈಟುಗಳಲ್ಲಿ 50 ಸೈಟುಗಳಿಗೆ ಇದೇ ರಸ್ತೆಯನ್ನು ತೋರಿಸಿ ದಾಖಲೆಯನ್ನು ತಯಾರಿಸಿ ಫಾರಂ 3, ಇನ್ನಿತರ ದಾಖಲೆಯನ್ನು ನೀಡಿರುತ್ತಾರೆ. ಇದೀಗ ರಸ್ತೆಯನ್ನು ಮುಚ್ಚಿದ್ದಾರೆ. ನಾವು ಸುಳ್ಯ ನ್ಯಾಯಾಲಯದಲ್ಲಿ ದಾವೆ ಹೂಡಿರುತ್ತೇವೆ.
ರಸ್ತೆ ಮುಚ್ಚದಂತೆ‌ ಇಂಜಂಕ್ಷನ್ ಆರ್ಡರ್ ಕೂಡ ಪಡೆದುಕೊಂಡಿರುತ್ತೇವೆ.
ಹೊಸದಾಗಿ ರಸ್ತೆ ಬದಿಯ ಜಾಗ ಖರೀದಿಸಿದವರು ನಮ್ಮ ಮೇಲೆ ಸುಳ್ಳು ದಾವೆ ಹೂಡಿ ರಸ್ತೆಯನ್ನು ಮುಚ್ಚಿರುತ್ತಾರೆ. ನ್ಯಾಯಾಲಯದ ಆದೇಶದಲ್ಲಿ ರಸ್ತೆಯನ್ನು ಮುಚ್ಚುವಂತೆ ಯಾವುದೇ ಉಲ್ಲೇಖಗಳಿರುವುದಿಲ್ಲ. ಹೀಗಿರುವಾಗ ರಸ್ತೆಯನ್ನು ಮುಚ್ಚಿ ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿರುತ್ತಾರೆ. ಇದನ್ನು ನಗರ ಪಂಚಾಯತು ಪರಿಶೀಲಿಸಿ ಸಮಸ್ಯೆ ಸರಿಪಡಿಸಿಕೊಡಬೇಕೆಂದು” ಮನವಿಯಲ್ಲಿ ಅವರು ವಿನಂತಿಸಿಕೊಂಡಿದ್ದಾರೆ.

*ಕೋರ್ಟಿನಲ್ಲಿ ದಾವೆ ಹೂಡಿದ್ದೇವೆ ದಾಖಲೆಯಲ್ಲೂ ಈ ರಸ್ತೆಯಿದೆ. ಹಲವು ವರ್ಷಗಳಿಂದ ಇದನ್ನು ನಾವು ಅನುಭವಿಸುತ್ತಿದ್ದೇವೆ ನಮಗೇ ಲೇಔಟ್ ಖರೀದಿ ಮಾಡುವಾಗ ತೋರಿಸಿರುವ ರಸ್ತೆ ನಮಗೆ ಸಿಗಬೇಕೆಂದು ನಗರ ಪಂಚಾಯತ್ ಗೇ ಮನವಿ ಮಾಡಿದ್ದೇವೆ ನಮಗೆ ನ್ಯಾಯ ಸಿಗುವರೆಗೂ ವಿನೂ ನಗರ ನಿವಾಸಿಗಳು ಹೋರಾಟ ಮಾಡುತ್ತೆವೆ*
ಡಾ.ಮಹಾಬಲೇಶ್ವರ ಭಟ್

*ವಿನೂ ನಗರದಲ್ಲಿ ಜಾಗ ಖರೀದಿಸಿ ಎಲ್ಲಾ ದಾಖಲೆಗಳು ಸರಿ ಇದ್ದು ನಮಗೆ ತೋರಿಸಿರುವ ರಸ್ತೆಯ ಜಾಗವನ್ನು ಸ್ಥಳದ ಮಾಲಕ ಶುಭಕರ ರಾವ್ ಹಾಗೂ ಸೈಟ್ ಇಂಜಿನಿಯರ್ ಕುಲದೀಪ್ ಸುತ್ತುಕೋಟೆ ಅವರು ಸೇರಿ ಇನ್ನೊಬ್ಬರಿಗೆ ಮಾರಾಟ ಮಾಡಿದ್ದಾರೆ ನಾವು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಮಗೆ ರಸ್ತೆ ಇಲ್ಲದ ಪರಿಸ್ಥಿತಿ ರ್ನಿರ್ಮಾಣ‌ವಾಗಿದೆ ಪಕ್ಕದಲ್ಲಿರುವ ಕೆಸರುಮಯ ರಸ್ತೆಯಲ್ಲಿ ಸಂಚರಿಸಿ ನನ್ನ ಕಾಲು ಮುರಿದಿದೆ..*
ಚಂದ್ರಶೇಖರ
ವಿನೂ ನಗರ ಬಡಾವಣೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.