ಸುಳ್ಯ ತಾ.ಪಂ ಕೆಡಿಪಿ ಮಾಸಿಕ ಪ್ರಗತಿ ಪರಿಶೀಲನಾ ಸಭೆ

Advt_Headding_Middle
Advt_Headding_Middle

ಎಚ್.ಟಿ ವಿದ್ಯುತ್ ಲೈನ್‌ಗಳ ಪರಿಶೀಲನೆಗೆ ಸೂಚನೆ

ಸಭೆಯಲ್ಲಿ ತಾ.ಪಂ ಅಧ್ಯಕ್ಷ ಚನಿಯ ಕಲ್ತಡ್ಕ ಹೇಳಿಕೆ

ಮಳೆಗಾಲದಲ್ಲಿ ವಿದ್ಯುತ್ ತಂತಿಗಳಿಂದ ಅವಘಡಗಳು ನಡೆಯುತ್ತಿದೆ. ಈ ಕಾರಣದಿಂದ ಸುಳ್ಯ ತಾಲೂಕಿನಲ್ಲಿ ಹಾದು ಹೋಗುವ ಎಲ್ಲಾ ಎಚ್‌ಟಿ ವಿದ್ಯುತ್ ತಂತಿಗಳ ಪರಿಶೀಲನೆಯನ್ನು ಕೂಡಲೇ ನಡೆಸಬೇಕು ಎಂದು ಸುಳ್ಯ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಸೂಚಸಿದ್ದಾರೆ.

ಅವರು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿಂತಿಕಲ್ಲಿನಲ್ಲಿ ವಿದ್ಯುತ್ ತಂತಿ ರಸ್ತೆಗೆ ಬಾಗಿದ ಪರಿಣಾಮ ಅವಘಡ ಸಂಭವಿಸಿ ಬೈಕ್ ಸವಾರ ಸಜೀವ ದಹನನಾಗಿದ್ದಾನೆ. ಘಟನೆ ನಡೆದ ಸಂದರ್ಭದಲ್ಲೇ ಸುಮಾರು ೩೫ ಜನರಿಂದ ಬಸ್ಸು ಅದೇ ರಸ್ತೆ ಮೂಲಕ ಬಂದಿದೆ. ಇದರಿಂದ ದೊಡ್ಡ ದುರಂತವೊಂದು ಸ್ವಲ್ಪದರಲ್ಲೇ ತಪ್ಪಿದೆ. ಇತಂಹ ಘಟನೆಗಳು ತಾಲೂಕಿನ ಯಾವ ಕಡೆಯು ನಡೆಯಬಾರದು. ಈ ಕಾರಣದಿಂದ ಎಲ್ಲಾ ಎಚ್‌ಟಿ ವಿದ್ಯುತ್ ತಂತಿಗಳ ಪರಿಶೀಲನೆ ಅಗತ್ಯ ಇದೆ. ಕೂಡಲೇ ಪರಿಶೀಲನೆ ನಡೆಸಬೇಕು ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ಮೆಸ್ಕಾಂ ಜೆ.ಇ ವಿದ್ಯುತ್ ತಂತಿ ಕೆಳಕ್ಕೆ ಜಾರಿದ ಪರಿಣಾಮ ದುರಂತ ಸಂಭವಿಸಿದೆ ಎಂದರು. ಅಲ್ಲದೇ ಈ ಮಳೆಗಾಲದಲ್ಲಿ ಈ ವರೆಗೆ ಸುಮಾರು ೭೪೦ ವಿದ್ಯುತ್ ಕಂಬಗಳು ನಾಶವಾಗಿ ಒಂದೂವರೆ ಕೋಟಿ ನಷ್ಟ ಸಂಭವಿಸಿದೆ. ಇದರಿಂದ ಈ ಹಿಂದಿನ ಕೆಲಸಗಳು ಬಾಕಿ ಆಗಿದೆ. ಮಳೆಗಾಲ ಕಳೆದ ತಕ್ಷಣ ಕಾಮಗಾರಿಗಳು ಆರಂಭವಾಗಲಿದೆ. ಸೌಭಾಗ್ಯ ಯೋಜನೆಯಡಿ ಆಲೆಟ್ಟಿ ಗ್ರಾಮದ ಮಾಣಿಮರ್ದ್ ಎಂಬಲ್ಲಿ ೨೦ ಕುಟುಂಬಗಳಿಗೆ ಸೋಲಾರ್ ಅಳವಡಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.
ಕೊಲ್ಲಮೊಗ್ರ ಗ್ರಾಮ ಪಂಚಾಯತ್ ವ್ಯಾಪ್ತಿಯ ನೆರೆ ಹಾವಳಿಯಾಗುವ ಕುಟುಂಬಗಳಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪನ್ನೆ ಎಂಬಲ್ಲಿ ಸರಕಾರಿ ಜಮೀನನ್ನು ನಿವೇಶನಕ್ಕೆ ಜಂಟಿ ಸರ್ವೇ ನಡೆಸಿ ಮಂಜೂರು ಮಾಡಲಾಗಿದೆ. ಆದರೆ ಅರಣ್ಯ ಇಲಾಖೆಯ ಆಕ್ಷೇಪಣೆಯಿಂದ ಇದಕ್ಕೆ ತಡೆ ಉಂಟಾಗಿದೆ. ಮಾನವೀಯ ನೆಲೆಯಲ್ಲಿ ಅರಣ್ಯ ಇಲಾಖೆ ವರದಿ ನೀಡಬೇಕು ಎಂದು ಅಧ್ಯಕ್ಷರು ಹೇಳಿದರು. ಈ ಬಗ್ಗೆ ಮತ್ತೊಮ್ಮೆ ಪರಿಶೀಲನೆ ಮಾಡಿ ವರದಿ ನೀಡುತ್ತೇವೆ ಎಂದು ಆರ್‌ಎಫ್‌ಒ ಗಿರೀಶ್ ಹೇಳಿದರು.


ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಹಾನಿಗೀಡಾಗುವ ಮನೆಗಳ ವರದಿ ನೀಡುವಾಗ ಗ್ರಾಮ ಲೆಕ್ಕಾಧಿಕಾರಿಗಳು ಸರಿಯಾದ ವರದಿ ನೀಡಬೇಕು. ವಿಎ ಗಳು ನೀಡುವ ವರದಿಯಿಂದ ಹಲವು ಬಡಜನರಿಗೆ ಅನ್ಯಾಯ ಆಗುತ್ತಿದೆ ಎಂದು ಚನಿಯ ಕಲ್ತಡ್ಕ ಹೇಳಿದರು.
ಉದ್ಯೋಗ ಖಾತರಿ ಯೋಜನೆಯಲ್ಲಿ ಅಕ್ರಮಗಳು ನಡೆಯುತ್ತಿದೆ. ಯೋಜನೆಗಳು ಬಡ ಫಲಾನುಭವಿಗಳಿಗೆ ದೊರೆಯುತ್ತಿಲ್ಲ ಸ್ಥಾಯಿ ಸಮಿತಿ ಅಧ್ಯಕ್ಷೆ ಜಾಹ್ನವೀ ಕಾಂಚೋಡು ಹೇಳಿದರು. ಈ ವರೆಗೆ ಅಂತಹ ದೂರುಗಳು ಬಂದಿಲ್ಲ. ವ್ಯಯಕ್ತಿಕ ದೂರುಗಳು ಇದ್ದರೆ ತಿಳಿಸಿ ಅಂತವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ತಾ.ಪಂ ಕಾರ್ಯಾನಿರ್ವಾಹಣಾಧಿಕಾರಿ ಭವಾನಿಶಂಕರ್ ಹೇಳಿದರು. ಪ್ರತಿ ಗ್ರಾಮ ಪಂಚಾಯತ್‌ಗಳಲ್ಲಿ ಉದ್ಯೋಗ ಖಾತರಿ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿ ಆಗಬೇಕು ಎಂದು ಅಧ್ಯಕ್ಷರು ಸೂಚಿಸಿದರು.
ಗ್ರಾಮ ಪಂಚಾಯತ್‌ಗಳಲ್ಲಿ ಬಾಕಿ ಇರುವ ವಿದ್ಯುತ್ ಬಿಲ್‌ಗಳ ಪಾವತಿ ನಡೆಯುತ್ತಿದೆ. ಸಂಪಾಜೆ ಹೊರತು ಪಡಿಸಿ ಉಳಿದೆಲ್ಲ ಪಂಚಾಯತ್‌ಗಳ ಬಿಲ್ ಪಾವತಿ ಆಗಿದೆ. ಈ ಬಗ್ಗೆ ತಾಲೂಕು ಪಂಚಾಯತ್‌ನಿಂದ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಭವಾನಿಶಂಕರ್ ಹೇಳಿದರು
ಸುಳ್ಯ ತಾಲೂಕಿನಲ್ಲಿ ಇದುವರೆಗೆ ೧೩೮ ಜನರಿಗೆ ಪಾಸಿಟಿವ್ ಬಂದಿದೆ. ಅರಲ್ಲಿ ೭೨ ಜನರು ಡಿಸ್ಚಾರ್ಜ್ ಆಗಿದ್ದಾರೆ. ಸಧ್ಯ ೬೧ ಪ್ರಕರಣಗಳು ಸಕ್ರಿಯ ಇದೆ. ತಾಲೂಕಿನ ೫ ಮಂದಿ ಕೊರೋನಾಕ್ಕೆ ತುತ್ತಾಗಿದ್ದಾರೆ. ೩೪ ಮಂದಿ ಮನೆಯಲ್ಲೇ ಮತ್ತು ೨೮ ಮಂದಿ ಆಸ್ಪತ್ರೆಯಲ್ಲಿ ಕ್ವರಂಟೈನ್ನಲ್ಲಿದ್ದಾರೆ ಎಂದು ಅರೋಗ್ಯ ಇಲಾಖೆಯ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು. ಕ್ವಾರಂಟೈನ್ ನಿಯಮಗಳನ್ನು ಪ್ರತಿ ಗ್ರಾಮಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಮತ್ತು ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರ ಪಟ್ಟಿಯನ್ನು ಕೂಡಲೇ ಮಾಡಬೇಕು ಎಂದು ಅಧ್ಯಕ್ಷ ಚನಿಯ ಕಲ್ತಡ್ಕ ಸೂಚನೆ ನೀಡಿದರು.
ಸಭೆಯಲ್ಲಿ ತಾ.ಪಂ ಉಪಾಧ್ಯಕ್ಷೆ ಪುಪ್ಪಾ ಮೇದಪ್ಪ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷೆ ಜಾಹ್ನವೀ ಕಾಂಚೋಡು, ತಹಶೀಲ್ದಾರ್ ಅನಂತ ಶಂಕರ್, ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಭವಾನಿಶಂಕರ್, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.