Breaking News

ಕೆ.ವಿ.ಜಿ. ದಂತ ಮಹಾವಿದ್ಯಾಲಯಕ್ಕೆ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ

Advt_Headding_Middle
Advt_Headding_Middle

 

ರಾಜೀವ್ ‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯವು ಜುಲೈ/ಆಗಸ್ಟ್ 2020 ರಲ್ಲಿ ನಡೆಸಿದ ಈ ಸಾಲಿನ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಕೆ.ವಿ.ಜಿ. ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಸುಳ್ಯದ ವಿದ್ಯಾರ್ಥಿಗಳು ಶೇ. 1೦೦ ಫಲಿತಾಂಶವನ್ನು ಪಡೆದಿರುತ್ತಾರೆ. ಪರೀಕ್ಷೆಗೆ ಹಾಜರಾದ ಎಲ್ಲಾ 33 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಕನ್ಸರ್‌ವೇಟಿವ್ ಡೆಂಟಿಸ್ಟ್ರಿ ವಿಭಾಗದಲ್ಲಿ ಡಾ. ವಿದ್ಯಾ ಶೆಣೈ ಶೇ. 79.16, , ಪ್ರೊಸ್ತೋಡಾಂಟಿಕ್ಸ್‌ ವಿಭಾಗದಲ್ಲಿ ಡಾ. ಗೀತಾಂಜಲಿ ಶೇ. 78.33, ಓರಲ್ ಸರ್ಜರಿ ವಿಭಾಗದಲ್ಲಿಡಾ. ವಿಜಯಲಕ್ಷ್ಮಿಶೇ. 73.5, ಒರ್ಥೋಡೋಂಟಿಕ್ಸ್ ವಿಭಾಗದಲ್ಲಿ ಡಾ. ಸೋನಿ ಡಿ. ಶೇ. 74.83, ಪೀಡೋಡೋಂಟಿಕ್ಸ್ ವಿಭಾಗದಲ್ಲಿ ಡಾ. ವಿಜಯನಾಥ್‌ಎಸ್. ಶೇ. 71.66, ಪೆರಿಯೊಡೋಂಟಿಕ್ಸ್ ವಿಭಾಗದಲ್ಲಿ ಡಾ. ಕ್ರಿಸ್ಟೀನಾ ಎಮಿ ಮ್ಯಾಥ್ಯೂಸ್‌ ಶೇ. 73.83, ಪಬ್ಲಿಕ್ ಹೆಲ್ತ್‌ಡೆಂಟಿಸ್ಟ್ರಿವಿಭಾಗದಲ್ಲಿ ಡಾ. ವರ್ಷ ಮನೋಹರನ್‌ಶೇ. 74.83 ,ಓರಲ್‌ಮೆಡಿಸಿನ್ ವಿಭಾಗದಲ್ಲಿಡಾ. ಶಾಂತಿ ಸೂಸನ್‌ಶೇ.67.83 ಹಾಗೂ ಒರ್ಥೋಡೋಂಟಿಕ್ಸ್‌ಪಿ.ಜಿ. ಡಿಪ್ಲೋಮವಿಭಾಗದಲ್ಲಿಡಾ. ರೋಸ್ ಫ್ರಾನ್ಸಿಸ್‌ಶೇ. 74.5 ಅಂಕಗಳನ್ನು ಗಳಿಸಿದ್ದಾರೆ.

ಇವರನ್ನು ಅಕಾಡೆಮಿ ಆಫ್ ಲಿಬರಲ್‌ ಎಜುಕೇಶನ್ ಇದರ ಅಧ್ಯಕ್ಷ ಡಾ|| ಕೆ.ವಿ. ಚಿದಾನಂದ, ಪ್ರಧಾನ ಕಾರ್ಯದರ್ಶಿ ಡಾ|| ರೇಣುಕಾಪ್ರಸಾದ್ ಕೆ.ವಿ., ಜತೆ ಕಾರ್ಯದರ್ಶಿ ಕೆ.ವಿ. ಹೇಮನಾಥ್, ನಿರ್ದೇಶಕಿಯರಾದ ಶ್ರೀಮತಿ ಶೋಭಾಚಿದಾನಂದ, ಡಾ|| ಜ್ಯೋತಿಆರ್. ಪ್ರಸಾದ್, ಡಾ|| ಅಭಿಜ್ಞಾ ಕೆ.ಆರ್., ಪ್ರಾಂಶುಪಾಲೆ ಡಾ|| ಮೋಕ್ಷಾ ನಾಯಕ್ ಹಾಗೂ ಪ್ರಾಧ್ಯಾಪಕ ವೃಂದದವರು ಅಭಿನಂದಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.