Breaking News

ಸಂಪುಟ ನರಸಿಂಹ ಸ್ವಾಮಿ ಮಠದ ವತಿಯಿಂದ ವಿದ್ಯಾರ್ಥಿಗಳಿಗೆ ಸನ್ಮಾನ

Advt_Headding_Middle
Advt_Headding_Middle

 

ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠ ಇದರ ಆಡಳಿತಕ್ಕೊಳಪಟ್ಟ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ
ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಆ.20 ರಂದು ನಡೆಯಿತು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 8 ನೇ ಸ್ಥಾನಗಳಿಸಿದ ಊರ್ವಿ ( 618/625 ) ಹಾಗೂ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಧನ್ಯ ( 567 ) , ಸಿಂಚನಾ ( 542 ) , ಪ್ರಮೀಳಾ ( 537 ) , ಲತಾ ( 535 ) ಇವರುಗಳಿಗೆ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದ ವತಿಯಿಂದ ಸನ್ಮಾನಿಸಲಾಯಿತು. ಮಠದ ಯತಿಗಳಾದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ರವರು ಸ್ಮರಣಿಕೆ , ಫಲಕಾಣಿಕೆ ಹಾಗೂ ನಗದು ನೀಡಿ ಅಭಿನಂದಿಸಿದರು. ಈ ವೇಳೆ ಶಾಲಾ
ಆಡಳಿತ ಮಂಡಳಿ ಉಪಾಧ್ಯಕ್ಷ ವೇಣುಗೋಪಾಲ ಶಾಸ್ತ್ರಿ , ಕೋಶಾಧಿಕಾರಿ ಯಜ್ಞೆಶ್ ಆಚಾರ್ಯ , ಸದಸ್ಯ ಗುರುಪ್ರಸಾದ್, ಪ್ರೌಢಶಾಲೆಯ ಶಿಕ್ಷಕ ವೃಂದ , ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು. ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಕೃಷ್ಣ ಶರ್ಮ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು .ಪ್ರೌಢಶಾಲಾ ಮುಖ್ಯ ಗುರುಗಳಾದ  ಹಿರಿಯಣ್ಣ ಗೌಡ ವಂದಿಸಿದರು.  ಗಣೇಶ ಕಾಶಿಕಟ್ಟೆ ಸಹಕರಿಸಿದರು .

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.