Breaking News

ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆಯಲ್ಲಿ ಬೀಳ್ಕೊಡುಗೆ ಸಮಾರಂಭ

Advt_Headding_Middle
Advt_Headding_Middle

ಎಸ್. ಎಸ್. ಎಲ್. ಸಿ. ಟಾಪರ್ ಅನುಷ್ ಗೆ ಅಭಿನಂದನೆ

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ

 

ಎಲಿಮಲೆ ಜ್ಞಾನದೀಪ ವಿದ್ಯಾ ಸಂಸ್ಥೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವು ಇಂದು ನಡೆಯಿತು.

ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಶೇಖರ ತಳೂರು ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಈ ಬಾರಿಯ ಎಸ್.ಎಸ್.ಎಲ್.ಸಿ. ಟಾಪರ್ ಅನುಷ್ ಎ.ಎಲ್. ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ಸರಕಾರಿ ಶಾಲೆಗಳ ಪೈಕಿ ಹೆಚ್ಚು ಅಂಕ ಪಡೆದ ಎಲಿಮಲೆ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಹಿತಾಶ್ರೀ ಅವರನ್ನು ಅಭಿನಂದಿಸಲಾಯಿತು.

ಜ್ಞಾನದೀಪ ವಿದ್ಯಾಸಂಸ್ಥೆಯ ಟಾಪರ್ ಗಳಾದ ಉಜಾನ, ರಕ್ಷಿತಾ ಮತ್ತು ಅನಘ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ವತಿಯಿಂದ ಹಾಗೂ ದಾನಿಗಳು ಸಂಸ್ಥೆಯ ಈ ಮೂವರು ವಿದ್ಯಾರ್ಥಿಗಳಿಗೆ ನಗದು, ಉಂಗುರ, ಕಿವಿಯೋಲೆ, ಕೈ ಗಡಿಯಾರ ಸೇರಿದಂತೆ ಅನೇಕ ಕೊಡುಗೆಗಳನ್ನು ನೀಡಲಾಯಿತು.

ಶಾಲಾ ಸಂಚಾಲಕ ಎ.ವಿ.ತೀರ್ಥರಾಮ, ಆಡಳಿತ ಮಂಡಳಿ ನಿರ್ದೇಶಕ ರಾಧಾಕೃಷ್ಣ ಕೆ.ಆರ್., ಆಡಳಿತಾಧಿಕಾರಿ ಅನಿಲ್ ಅಂಬೆಕಲ್ಲು, ಮುಖ್ಯೋಪಾಧ್ಯಾಯ ಗದಾಧರ ಬಾಳುಗೋಡು, ಆಡಳಿತ ಮಂಡಳಿ ಸದಸ್ಯರಾದ ಮಹಾವೀರ ಜೈನ್, ಕೃಷ್ಣಯ್ಯ ಮೂಲೆತೋಟ, ಸೂರ್ಯ ನಾರಾಯಣ ಭಟ್, ಜಯಂತ ಅಂಬೆಕಲ್ಲು, ಎಲಿಮಲೆ ಸರಕಾರಿ ಪ್ರೌಢ ಶಾಲಾ ಶಿಕ್ಷಕ ಗೋಪಿನಾಥ ಮೆತ್ತಡ್ಕ, ಶಿಕ್ಷಕ ರಕ್ಷಕ ಸಂಘದ ಶ್ರೀಮತಿ ರೇಷ್ಮ ಮರ್ಕಂಜ ಉಪಸ್ಥಿತರಿದ್ದರು.

ಶಾಲಾ ಮುಖ್ಯೊಪಾಧ್ಯಾಯ ಗದಾಧರ ಬಾಳುಗೋಡು ಸ್ವಾಗತಿಸಿ ಪ್ರಸ್ತಾವನೆಗೈದರು. ಶಿಕ್ಷಕಿಯರಾದ ದಿವ್ಯ ಬಾಳುಗೋಡು , ಹರ್ಷಿತಾ ಸನ್ಮಾನಿತರನ್ನು ಪರಿಚಯಿಸಿದರು.
ಶಿಕ್ಷಕರಾದ ಪುನೀತ್ ರವಿ ಮತ್ತು ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.