ಬಳ್ಳಕ್ಕ: 33 ನೇ ವರ್ಷದ ಗಣೇಶೋತ್ಸವ

Advt_Headding_Middle
Advt_Headding_Middle

ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಬಳ್ಳಕ್ಕ ಇದರ ಆಶ್ರಯದಲ್ಲಿ 33 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಆ.22 ರಂದು ಸ.ಕಿ.ಪ್ರಾ ಶಾಲೆ ಹರಿಪುರ ಬಳ್ಳಕ್ಕದಲ್ಲಿ ನಡೆಯಿತು. ಬೆಳಿಗ್ಗೆ ವೆಂಕಟ್ರಮಣ ಭಟ್ ರಜತಗಿರಿಯವರ ನೇತೃತ್ವದಲ್ಲಿ ಗಣಪತಿ ಪ್ರತಿಷ್ಠೆ ನಡೆದ ಬಳಿಕ ಸ್ಥಳೀಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನೆರವೇರಿತು.

ಬಳಿಕ ಗಣಪತಿ ವಿಸರ್ಜನೆ ಕಾರ್ಯಕ್ರಮ ನಡೆಯಿತು. ಸೀಮಿತ ಜನರ ಭಾಗವಹಿಸುವಿಕೆಯೊಂದಿಗೆ ಪರಸ್ಪರ ಅಂತರ ಕಾಯ್ದುಕೊಂಡು ಸರಳವಾಗಿ ಕಾರ್ಯಕ್ರಮ ನಡೆಯಿತು.

ಗಣೇಶೋತ್ಸವ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಚಿಕ್ಮುಳಿ, ಗಣೇಶೋತ್ಸವ ಸೇವಾ ಟ್ರಸ್ಟ್ ಅಧ್ಯಕ್ಷ ಸುಬ್ಬಣ್ಣ ನಾಯ್ಕ ಬಳ್ಳಕ್ಕ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.