Breaking News

ಎನ್.ಎಸ್. ದೇವಿಪ್ರಸಾದ್ ರವರ ಸಾಕ್ಷ್ಯಚಿತ್ರಕ್ಕೆ ಚಾಲನೆ

Advt_Headding_Middle
Advt_Headding_Middle

ಚಲನಚಿತ್ರ ನಿರ್ಮಾಪಕ, ಸಾಹಿತಿ, ಸಂಘಟಕ ಎನ್.ಎಸ್. ದೇವಿಪ್ರಸಾದ್‌ರವರ ಕುರಿತು ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿಯು ನಿರ್ಮಿಸುತ್ತಿರುವ ಸಾಕ್ಷ್ಯಚಿತ್ರಕ್ಕೆ ಆ.20 ರಂದು ಸಂಪಾಜೆಯ ಅವರ ನಿವಾಸದಲ್ಲಿ ಚಾಲನೆ ನಿಡಲಾಯಿತು.

ಅರೆಭಾಷೆ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆಯವರು ಕ್ಯಾಮರಾ ಆನ್ ಮಾಡುವ ಮೂಲಕ ಚಾಲನೆ ನೀಡಿದರು. ಸಾಕ್ಷ್ಯಚಿತ್ರದ ಮೂಲಕ ಮಹನೀಯರು ಅರೆಭಾಷೆಗೆ ನೀಡಿರುವ ಕೊಡುಗೆಯನ್ನು ಅಕಾಡೆಮಿಯು ದಾಖಲಿಸುವ ಕಾರ್ಯ ಮಾಡುತ್ತಿದೆ ಎಂದು ಕಜೆಗದ್ದೆ ಹೇಳಿದರು.
ಎನ್.ಎಸ್. ದೇವಿಪ್ರಸಾದ್ ಹಾಗೂ ಇಂದಿರಾ ದೇವಿಪ್ರಸಾದ್, ಯೋಜನೆಯ ಸದಸ್ಯ ಸಂಚಾಲಕ ಹಾಗೂ ಅರೆಭಾಷೆ ಅಕಾಡೆಮಿ ಸದಸ್ಯ ಪುರುಷೋತ್ತಮ ಕಿರ್ಲಾಯ, ಇನ್ನೋರ್ವ ಸದಸ್ಯ ಎ.ಟಿ.ಕುಸುಮಾಧರ, ಸಾಕ್ಷ್ಯಚಿತ್ರದ ನಿರ್ದೇಶಕ ದುರ್ಗಾಕುಮಾರ್ ನಾಯರ್‌ಕೆರೆ, ಸುದ್ದಿ ಬಳಗದ ಕೃಷ್ಣ ಬೆಟ್ಟ, ವಿನಯ ಜಾಲ್ಸೂರು, ಕುಶಾಂತ್ ಕೊರತ್ಯಡ್ಕ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಅರೆಭಾಷೆಯವರಾಗಿರುವ ಎನ್.ಎಸ್.ದೇವಿಪ್ರಸಾದ್ ರವರು ಅರೆಭಾಷೆ ಮತ್ತು ಸಂಸ್ಕೃತಿಗೆ ನೀಡಿರುವ ಕೊಡುಗೆ ಮತ್ತು ಅವರ ಸಾಧನೆಗಳ ಕುರಿತ ಸಾಕ್ಷ್ಯ ಚಿತ್ರ ಇದಾಗಿದ್ದು, ಅರೆಭಾಷೆ ಅಕಾಡೆಮಿಯು ತನ್ನ ಹೊಸ ಯೋಜನೆಯ ಮೂಲಕ ಇದನ್ನು ನಿರ್ಮಿಸುತ್ತಿದೆ. ದುರ್ಗಾಕುಮಾರ್ ನಾಯರ್‌ಕೆರೆಯವರು ಈ ಸಾಕ್ಷ್ಯ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಸುದ್ದಿ ಮಿಡಿಯಾ ಕ್ರಿಯೇಷನ್ಸ್ ತಯಾರಿಸುತ್ತಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.