ಕನಕಮಜಲು ಯುವಕ ಮಂಡಲದ ವತಿಯಿಂದ ಎಸ್.ಎಸ್.ಎಲ್.ಸಿ. ಟಾಪರ್ ಅನುಷ್ ಗೆ ಸನ್ಮಾನ

Advt_Headding_Middle
Advt_Headding_Middle

ಯುವಜನ ವಿಕಾಸ ಕೇಂದ್ರ ಯುಕ ಮಂಡಲ ಕನಕಮಜಲು ಇದರ ವತಿಯಿಂದ ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯದಲ್ಲಿ 625ರಲ್ಲಿ 625 ಅಂಕ ಗಳಿಸುವ ಮೂಲಕ ಸಾಧನೆ ಮಾಡಿದ ಅನುಷ್ ಎ.ಎಲ್. ಅವರಿಗೆ ಕನಕಮಜಲು ಯುವಕ ಮಂಡಲದ ವತಿಯಿಂದ ಆ.23ರಂದು ಸನ್ಮಾನಿಸಿ ಗೌರವಿಸಲಾಯಿತು.


ಯುವಕ ಮಂಡಲದ ಅಧ್ಯಕ್ಷ ಜಯಪ್ರಸಾದ್ ಕಾರಿಂಜ ಅಧ್ಯಕ್ಷತೆ ವಹಿಸಿದ್ದರು. ಮಂಡ್ಯ-ಮೈಸೂರು ಗುರುದೇವ ಲಲಿತಕಲಾ ಅಕಾಡೆಮಿ ನಿರ್ದೇಶಕ ರಾಧಾಕೃಷ್ಣ ಮೂರ್ಜೆ ಅವರು ಯುವಕ ಮಂಡಲದ ವತಿಯಿಂದ ಅನುಷ್ ಅವರನ್ನು ಸನ್ಮಾನಿಸಿ, ಶುಭಹಾರೈಸಿದರು.

ಯುವಕ ಮಂಡಲದ ಗೌರವ ಸಲಹೆಗಾರರಾದ ದಾಮೋದರ ಕಣಜಾಲು ಅವರು ಅಭಿನಂದನಾ ಮಾತುಗಳನ್ನಾಡಿದರು.


ಈ ಸಂದರ್ಭದಲ್ಲಿ ಯುವಕ ಮಂಡಲದ ಪ್ರ.ಕಾರ್ಯದರ್ಶಿ ಬಾಲಚಂದ್ರ ನೆಡಿಲು, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಶ್ರೀಧರ ಕುತ್ಯಾಳ, ಅನುಷ್ ತಂದೆ ಲೋಕೇಶ್ ಎಣ್ಣೆಮಜಲು, ತಾಯಿ ಶ್ರೀಮತಿ ಉಷಾ ಬೊಮ್ಮೆಟ್ಟಿ, ಸಹೋದರ ಆಕಾಶ್ ಎಣ್ಣೆಮಜಲು, ಅಜ್ಜಿ ಕುಸುಮಾವತಿ ಎಣ್ಣೆಮಜಲು, ಕನಕಮಜಲು ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷ ನಾರಾಯಣ ಬೊಮ್ಮೆಟ್ಟಿ, ಕನಕಮಜಲು ಶ್ರೀ ಆತ್ಮಾರಾಮ ಭಜನಾ ಮಂದಿರದ ಪ್ರ.ಕಾರ್ಯದರ್ಶಿ ಚಂದ್ರಶೇಖರ ನೆಡಿಲು, ಗ್ರಾ.ಪಂ. ಮಾಜಿ ಸದಸ್ಯ ದಿವಾಕರ ಕಾಳಪ್ಪಜ್ಜನಮನೆ, ಕುಸುಮಾಧರ ಬೊಮ್ಮೆಟ್ಟಿ, ಭಜನಾ ಮಂದಿರದ ಗೌರವಾಧ್ಯಕ್ಷ ಜಗನ್ನಾಥ ಕಾಪಿಲ, ಯುವಕ ಮಂಡಲದ ಪೂರ್ವಾಧ್ಯಕ್ಷರುಗಳಾದ ಹೇಮಂತ್ ಮಠ, ನೇತ್ರಕುಮಾರ್ ಪೇರೋಳಿ, ಯುವಕ ಮಂಡಲದ ಗೌರವಾಧ್ಯಕ್ಷ ಹರಿಪ್ರಸಾದ್ ಮಾಣಿಕೋಡಿ, ಸತೀಶ್ ಬೊಮ್ಮೆಟ್ಟಿ, ಗಂಗಾಧರ ಮಾಣಿಕೋಡಿ ಸೇರಿದಂತೆ ಯುವಕ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.