Breaking News

ಕನಕಮಜಲು: ಬೈಕ್-ಬೈಕ್ ಅಪಘಾತ, ಬೈಕ್ ಸವಾರ ಆಸ್ಪತ್ರೆಗೆ ದಾಖಲು

Advt_Headding_Middle
Advt_Headding_Middle


ಎರಡು ಬೈಕ್ ಗಳ ಮಧ್ಯೆ ಅಪಘಾತ ಸಂಭವಿಸಿ, ಸವಾರಿಬ್ಬರು ಗಾಯಗೊಂಡ ಘಟನೆ ಕನಕಮಜಲಿನಲ್ಲಿ ಆ.25ರಂದು ಬೆಳಿಗ್ಗೆ ಸಂಭವಿಸಿದೆ.
ಕನಕಮಜಲಿನ ಕುತ್ತಿಮುಂಡ ಶೇಷಪ್ಪ ಗೌಡ ಎಂಬವರು ತಮ್ಮ ಬೈಕ್ ನಲ್ಲಿ ದೇರ್ಕಜೆ ರಸ್ತೆಯಿಂದ ಮುಖ್ಯರಸ್ತೆಗೆ ಬರುತ್ತಿದ್ದಂತೆ ಸುಳ್ಯ ಕಡೆಯಿಂದ ಪುತ್ತೂರು ಕಡೆಗೆ ಬರುತ್ತಿದ್ದ ಪ್ರಸನ್ನ ಅಡ್ಕಾರು ಎಂಬವರ ಬೈಕ್ ಗೆ ಢಿಕ್ಕಿ ಹೊಡೆಯಿತು. ಪರಿಣಾಮ ಬೈಕ್ ನಿಂದ ರಸ್ತೆಗೆ ಎಸೆಯಲ್ಪಟ್ಟ ಶೇಷಪ್ಪ ಗೌಡರು ಕಾಲಿಗೆ ಗಾಯಗೊಂಡು ಪ್ರಜ್ಞೆ ತಪ್ಪಿ ಬಿದ್ದರೆನ್ನಲಾಗಿದೆ. ಶೇಷಪ್ಪ ಗೌಡರ ಕಾಲಿನ ಬೆರಳು ತುಂಡಾಗಿದ್ದು, ತಕ್ಷಣ ಅವರನ್ನು ಸ್ಥಳೀಯರು ಸೇರಿ ಜೀಪಿನಲ್ಲಿ ಸುಳ್ಯ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.