Breaking News

ಜ್ಞಾನದೀಪದಲ್ಲಿ ಕಂಪ್ಯೂಟರ್ ಮತ್ತು ಶಿಕ್ಷಕಿಯರ ತರಬೇತಿಗೆ ಅರ್ಜಿ ಆಹ್ವಾನ

Advt_Headding_Middle
Advt_Headding_Middle

ಕರ್ನಾಟಕ ಸರಕಾರದ ಗ್ರಾಮೀಣ ಜನರ ಕೌಶಲ್ಯಾಭಿವೃದ್ಧಿ ಯೋಜನೆಗೆ ಪೂರಕವಾಗಿ ಕಂಪ್ಯೂಟರ್ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ರಾಜ್ಯದ ಪ್ರತಿಷ್ಠಿತ ಗ್ರಾಮೀಣ ಕಂಪ್ಯೂಟರ್ ತರಬೇತಿ ಅಕಾಡಮಿಯ ಸುಳ್ಯ ಮತ್ತು ಬೆಳ್ಳಾರೆ ಶಾಖೆಯ ಜ್ಞಾನದೀಪ ಶಿಕ್ಷಣ ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಖಾತರಿ ಉದ್ಯೋಗ ಕಲ್ಪಿಸುವ ವಿವಿಧ ಅಲ್ಪಾವಧಿಯ ಕಂಪ್ಯೂಟರ್ ತರಬೇತಿ ಸೇರಿದಂತೆ ಒಂದು ವರ್ಷದ ಕಂಪ್ಯೂಟರ್ ಮತ್ತು ನರ್ಸರಿ ಶಾಲಾ ಶಿಕ್ಷಕಿಯರ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.


ಸರಕಾರದ ಮಾನ್ಯತೆಯ ಪ್ರಮಾಣ ಪತ್ರ
ಗ್ರಾಮೀಣ ಜನರ ಕೌಶಾಲ್ಯಭಿವೃದ್ಧಿ ಯೋಜನೆಗೆ ಪೂರಕವಾಗಿ ಗ್ರಾಮೀಣ ಕಂಪ್ಯೂಟರ್ ತರಬೇತಿ ಅಕಾಡಮಿಯು ತರಬೇತಿಗಳನ್ನು ನೀಡುತ್ತಿದ್ದು, ಸರಕಾರದ ಹಾಗೂ ಐಎಸ್‌ಒ ೯೦೦೧:೨೦೧೫ನ ಮಾನ್ಯತೆಯನ್ನೂ ಪಡೆದಿದೆ.

ಕೌಶಲ್ಯಾಭಿವೃದ್ಧಿ ತರಬೇತಿ
ಜ್ಞಾನದೀಪ ಸಂಸ್ಥೆಯಲ್ಲಿ ಸಾಫ್ಟ್ ಸ್ಕಿಲ್ ಕೋರ್ಸ್, ಡಿಪ್ಲೊಮಾ ಇನ್ ಫ್ರಂಟ್ ಆಫೀಸ್ ಮ್ಯಾನೇಜ್‌ಮೆಂಟ್, ಸಿಐಟಿ, ಡಿಪ್ಲೊಮಾ ಇನ್ ಆಫೀಸ್ ಅಟೋಮೇಶನ್, ಪೋಸ್ಟ್ ಗ್ರಾಜ್ಯುವೇಟ್ ಡಿಪ್ಲೊಮಾ ಇನ್ ಕಂಪ್ಯೂಟರ್ ಅಪ್ಲಿಕೇಶನ್, ಜಿಎಸ್‌ಟಿಯೊಂದಿಗೆ ಕಂಪ್ಯೂಟರ್ ಟ್ಯಾಲಿ ಮತ್ತು ಬೇಸಿಕ್ ಕಂಪ್ಯೂಟರ್ ತರಬೇತಿಗಳನ್ನು ನಡೆಸಲಾಗುತ್ತಿದೆ.

ಕಂಪ್ಯೂಟರ್ ಶಿಕ್ಷಕಿಯರ ತರಬೇತಿ
ಶಾಲಾ ಕಾಲೇಜುಗಳಲ್ಲಿ ಖಚಿತ ಉದ್ಯೋಗವಕಾಶಗಳನ್ನು ಒದಗಿಸುವ ಕಂಪ್ಯೂಟರ್ ಟೀಚರ್ ಟ್ರೈನಿಂಗ್ ಕೋರ್ಸ್ ಹಾಗೂ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಖಾತರಿ ಉದ್ಯೋಗ ಕಲ್ಪಿಸುವ ನರ್ಸರಿ ಟೀಚರ್ ಟ್ರೈನಿಂಗ್ ಕೋರ್ಸ್ ತರಬೇತಿಯನ್ನು ಸಂಸ್ಥೆ ನಡೆಸುತ್ತಿದೆ. ಪಿಯುಸಿ ಅಥವಾ ಪದವಿ ಉತ್ತೀರ್ಣರಾದವರು ಈ ತರಬೇತಿಗೆ ಸೇರಬಹುದಾಗಿದ್ದು, ಆಸಕ್ತರು ಸುಳ್ಯದ ಶ್ರೀ ಹರಿ ವಾಣಿಜ್ಯ ಸಂಕೀರ್ಣದಲ್ಲಿ ಹಾಗು ಬೆಳ್ಳಾರೆಯ ಶ್ರೀ ದುರ್ಗಾ ವಾಣಿಜ್ಯ ಸಂಕೀರ್ಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜ್ಞಾನದೀಪ ಶಿಕ್ಷಣ ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆಯಿಂದ ಅರ್ಜಿ ಹಾಗೂ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದೆಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.