ಸುಳ್ಯ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯಲ್ಲಿದ್ದ 7  ಗ್ರಾಮಗಳನ್ನು ಕಡಬ ಬ್ಲಾಕ್ ಕಾಂಗ್ರೆಸ್‌ಗೆ ಹಸ್ತಾಂತರ

Advt_Headding_Middle
Advt_Headding_Middle


ನೂತನವಾಗಿ ರಚನೆಗೊಂಡಿರುವ ಕಡಬ ತಾಲೂಕಿಗೆ ಸುಳ್ಯ ತಾಲೂಕಿನಲ್ಲಿದ್ದ ೭ ಗ್ರಾಮಗಳಾದ ಐನೆಕಿದು, ಸುಬ್ರಹ್ಮಣ್ಯ, ಏನೆಕಲ್ಲು, ಬಳ್ಪ, ಕೇನ್ಯ, ಎಡಮಂಗಲ, ಮತ್ತು ಎಣ್ಮೂರು ಗ್ರಾಮಗಳು ಸರಕಾರದ ಆಡಳಿತಾತ್ಮಕವಾಗಿ ಸೇರ್ಪಡೆಗೊಂಡಿದ್ದು ಸುಳ್ಯ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯಲ್ಲಿದ್ದ ಈ ಗ್ರಾಮಗಳನ್ನು ಕಡಬ ಬ್ಲಾಕ್ ಕಾಂಗ್ರೇಸ್ ವ್ಯಾಪ್ತಿಗೆ ಸಾಂಕೇತಿಕವಾಗಿ ಹಸ್ತಾಂತರಿಸುವ ಕಾರ್ಯಕ್ರಮ ಇಂದು ಏನೆಕಲ್ಲು ಗೌರವ್ ಗಾರ್ಡನ್ ಹೋಟೇಲಿನ ಸಭಾಂಗಣದಲ್ಲಿ ನಡೆಯಿತು.


ಸುಳ್ಯ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎನ್ ಜಯಪ್ರಕಾಶ್ ರೈ ಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ರವರ ಸಮ್ಮುಖದಲ್ಲಿ ಕಡಬ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗಣೇಶ್ ಕೈಕುರೆಯವರಿಗೆ ಹಸ್ತಾಂತರಿಸಲಾಯಿತು.


ಸುಳ್ಯ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎನ್ ಜಯಪ್ರಕಾಶ್ ರೈ ಯವರು ಪ್ರಾಥಾವಿಕವಾಗಿ ಮಾತನಾಡಿ, ಆಡಳಿತಾತ್ಮಕವಾಗಿ ಕಡಬ ತಾಲೂಕಿಗೆ ಸೇರ್ಪಡೆಗೊಂಡಿರುವ ಗ್ರಾಮಗಳು ಎಲ್ಲಾ ಕಛೇರಿ ವ್ಯವಹಾರಗಳಿಗೆ, ಮತ್ತು ಚುನಾವಣಾ ವಿಚಾರವಾಗಿ ಕಡಬವನ್ನೇ ಅವಲಂಭಿಸಬೇಕಾಗಿರುವುದರಿಂದ ಜಿಲ್ಲಾ ಕಾಂಗ್ರೇಸ್ ಸೂಚನೆ ಮೇರೆಗೆ ಸುಳ್ಯ ಬ್ಲಾಕ್ ಕಾಂಗ್ರೇಸ್ ವ್ಯಾಪ್ತಿಯಲ್ಲಿದ್ದ ಈ ೭ ಗ್ರಾಮಗಳನ್ನು ಕಡಬ ಬ್ಲಾಕ್ ಕಾಂಗ್ರೇಸ್ಗೆ ಹಸ್ತಾಂತರಿಸುತ್ತಿದ್ದೇವೆ. ಈ ಎಲ್ಲಾ ಗ್ರಾಮಗಳ ಎಲ್ಲಾ ನಾಯಕರು, ಜನಪ್ರತಿನಿಧಿಗಳು, ಕಾರ್ಯಕರ್ತರು, ಕಾಂಗ್ರೇಸ್ ಪಕ್ಷಕ್ಕಾಗಿ ಬಹಳಷ್ಟು ದುಡಿದಿದ್ದಾರೆ. ಇನ್ನು ಮುಂದೆಯೂ ಕಡಬ ಬ್ಲಾಕಿನ ಅಧೀನದಲ್ಲಿ ಪಕ್ಷವನ್ನು ಈ ಭಾಗದಲ್ಲಿ ಪ್ರಭಲವಾಗಿ ಸಂಘಟಿಸಬೇಕು ಎಂದು ಅಭಿಪ್ರಾಯ ಪಟ್ಟರು.


ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾದ ಹರೀಶ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೇಸ್‌ಗೆ ಉತ್ತಮ ಭವಿಷ್ಯವಿದೆ. ಖ ಕೆ ಶಿವಕುಮಾರ್ ನೇತೃತ್ವದಲ್ಲಿ ಉತ್ತಮ ಸಂಘಟನೆಯೊಂದಿಗೆ ಮುನ್ನಡೆಯುತ್ತಿದೆ. ಮೋದಿ ನೇತೃತ್ವದ ಕೇಂದ್ರ ಸರಕಾರ ಪ್ರತಿಯೊಬ್ಬ ಬಡವನಿಗೂ ಹೊರೆಯನ್ನು ಹೊರಿಸಿದ್ದಾರೆ. ಆನರು ಬೇಸತ್ತಿದ್ದಾರೆ ಜನರಿಗೆ ಸತ್ಯ ಸಂಗತಿ ಅರಿವಾಗಿದೆ, ಕಷ್ಟಕಾಲಕ್ಕೆ ಕಾಂಗ್ರೇಸ್ಸೇ ಬೇಕೆಂದು ಮನದಟ್ಟಾಗಿದೆ. ಕೇಂದ್ರ ಬಿ ಜೆ ಪಿ ಸರಕಾರ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಶಾಸಕರ ಖರೀದಿಯಲ್ಲಿ ತೊಡಗಿದೆ. ಬಂಡವಾಳಶಾಹಿಗಳನ್ನು ಮಾತ್ರ ಪ್ರೋತ್ಸಾಹಿಸುತ್ತಿದ್ದಾರೆ. ಬಿಜೆಪಿ ಸರಕಾರ ಸಂಪೂರ್ಣಸಂವಿದಾನ ವಿರೋದಿ ದೋರಣೆಯನ್ನು ಅನುಸರಿಸುತ್ತಿದೆ ಮುಂಬರುವ ಗ್ರಾಮ ಪಂಚಾಯತ್ ಚುಣಾವಣೆಯ ಸಂದರ್ಭ ಅವಲೋಕನ ಮಾಡಿಕೊಂಡು ಚುನಾವಣೆಯನ್ನು ಎದುರಿಸಬೇಕಾಗಿದೆ. ಪಕ್ಷ ಅಧಿಕಾರಕ್ಕೆ ಬಂದ್ರೆ ಮಾತ್ರ ಕಾರ್ಯಕರ್ತರಿಗೆ ಅಧಿಕಾರ ಸಿಗಳಿದೆ ಎಂದು ಹೇಳಿದರು. ಗ್ರಾಮ ಕಾಂಗ್ರೇಸ್ ಸಮಿತಿಗಳ ನಾಯಕರುಗಳು ತಮ್ಮ ಅಭಿಪ್ರಾಯ ಮಂಡಿಸಿದರು. ಕೆ.ಪಿ.ಸಿ.ಸಿ ಮಾಜಿ ಕಾರ್ಯದರ್ಶಿ ಎಂ .ವೆಂಕಪ್ಪ ಗೌಡ, ಕೆಪಿಸಿಸಿ ಆಡಳಿತ ವಿಭಾಗದ ಸದಸ್ಯ ಭರತ್ ಮುಂಡೋಡಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಕಡಬ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗಣೇಶ್ ಕೈಕುರೆ, ಜಿಲ್ಲಾ ಪಂಚಾಯತ್ ಸದಸ್ಯ ಪಿ ಪಿ ವರ್ಗಿಸ್, ಕೆಪಿಸಿಸಿ ಉಸ್ತುವಾರಿ ಕೃಷ್ಣಪ್ಪ, ತಾಲೂಕು ಪಂಚಾಯತ್ ಸದಸ್ಯರಾದ ಅಶೋಕ್ ನೆಕ್ರಾಜೆ, ಫಝಲ್, ಉಪಸ್ಥಿತರಿದ್ದರು. ಅಶೋಕ್ ನೆಕ್ರಾಜೆ ಸ್ವಾಗತಿಸಿದರು. ಲಕ್ಷ್ಮೀ ಸುಬ್ರಹ್ಮಣ್ಯ ಪ್ರಾರ್ಥಿಸಿದರು. ಬಾಲಕೃಷ್ಣ ಮರೋಳಿ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.