Breaking News

ಪಂಜ : ಬಸ್ಸ್ ತಂಗುದಾಣದ ಬಳಿ ಜಾಗ ವಿವಾದ

Advt_Headding_Middle
Advt_Headding_Middle

ಪಂಜ ಗ್ರಾಮ ಪಂಚಾಯತ್ ವಾಣಿಜ್ಯ ಸಂಕೀರ್ಣ ಸಮೀಪ ಜಾಗ ವಿವಾದದ ದೂರಿನ ಮೇರೆಗೆ ಸುಬ್ರಹ್ಮಣ್ಯ ಪೋಲೀಸರು ಮತ್ತು ಗ್ರಾಮ ಪಂಚಾಯತ್‌ನವರು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ ಘಟನೆ ವರದಿಯಾಗಿದೆ.

ಸೌಧಾಮಿನಿ ಸಂಕೀರ್ಣಕ್ಕೆ ಪಂಜ ಬಸ್ಸ್ ತಂಗುದಾಣದಿಂದ ನೇರವಾಗಿ ೬ ಫೀಟ್ ರಸ್ತೆ ಹಕ್ಕು ದಾಖಲೆ ಇದೆ. ಆದರೆ ಈ ರಸ್ತೆಯಲ್ಲಿ ವಾಹನವನ್ನು ಇಟ್ಟು ತೊಂದರೆ ಮಾಡುತ್ತಿದ್ದಾರೆ. ರಸ್ತೆಯ ಒಂದು ಬದಿಯಲ್ಲಿ ಗಿಡ ನೆಟ್ಟು ರಸ್ತೆ ಕಿರಿದು ಮಾಡಿರುತ್ತಾರೆ. ಅದೇ ದಾರಿಯಲ್ಲಿ ಬಾವಿ ತೆಗೆದಿದ್ದು ಅದಕ್ಕೆ ಯಾವುದೇ ತಡೆಗೋಡೆ ವಗೈರೆ ಇರುವುದಿಲ್ಲ. ಇದರಿಂದ ಅರ್ಜಿದಾರರಿಗೆ ಹಾಗೂ ಸಾರ್ವಜನಿಕರಿಗೆ ಅತೀವ ತೊಂದರೆಯಾಗಿದೆ ಎಂದು ಸೌಧಾಮಿನಿ ಮೋನಪ್ಪರವರು ಪಕ್ಕದ ಕಟ್ಟದ ಮಾಧವ ಮಡಿವಾಳರ ವಿರುದ್ದ ಸುಬ್ರಹ್ಮಣ್ಯ ಪೋಲೀಸ್ ಠಾಣೆಗೆ ಹಾಗೂ ಪಂಜ ಗ್ರಾಮ ಪಂಚಾಯತ್‌ಗೆ ದೂರು ನೀಡಿದ್ದರು. ಸುಬ್ರಹ್ಮಣ್ಯ ಠಾಣಾಧಿಕಾರಿ ಓಮನ, ಪಂಜ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಮಣಿಯಾನ, ಆಡಳಿತಾಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರ್ ರವರು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಇದೇ ವಿಷಯದಲ್ಲಿ ಮುಂದಿನ ಸೆ.೧೦ ರಂದು ನನಗೆ ಕೋರ್ಟ್ ಹಾಜರಾಗಲು ಉಂಟು. ಆದ್ದರಿಂದ ಈ ಸಂದರ್ಭ ಪೋಲೀಸರು, ಪಂಚಾಯತ್‌ನವರು ಈಗ ಮಧ್ಯೆ ಪ್ರವೇಶಿಸುವುದು ತಪ್ಪು. ಆ ಜಾಗ ನನಗೆ ಸೇರಿದ್ದು, ಕನ್ವರ್ಷನ್ ಆಗಿದೆ. ತೆರೆದ ಬಾವಿ ಮೇಲಿಂದ ಮುಚ್ಚಿದ್ದೇನೆ ಎಂದು ಮಾಧವರು ಪತ್ರಿಕೆಗೆ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.