Breaking News

ತ್ವಲಬಾ ವಿಂಗ್ ಸುಳ್ಯ ವಲಯ: ಸಯ್ಯಿದ್ ಫಖ್ರುದ್ದೀನ್ ತಂಙಳ್ ಅನುಸ್ಮರಣೆ ಹಾಗೂ ಮಜ್ಲಿಸುನ್ನೂರ್

Advt_Headding_Middle
Advt_Headding_Middle

 

SKSSF ಸುಳ್ಯ ವಲಯ ತ್ವಲಬಾ ವಿಂಗ್ ವತಿಯಿಂದ ಸಯ್ಯಿದ್ ಫಖ್ರುದ್ದೀನ್ ತಂಙಳ್ ದುಗ್ಗಲಡ್ಕ (ನ.ಮ) ರವರ ಅನುಸ್ಮರಣೆ ಹಾಗೂ ಮಜ್ಲಿಸುನ್ನೂರ್ ಸಂಗಮವು ಸುಪ್ರೀಂ ಹಾಲ್ ನಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತ್ವಲಬ ವಿಂಗ್ ಸುಳ್ಯ ಉಸ್ತುವಾರಿ ಇಸ್ಹಾಕ್ ಕಳಂಜ ವಹಿಸಿದರು.
ಚೇರ್ಮ್ಯಾನ್ ಕಬೀರ್ ಅಜ್ಜಾವರ ದುವಾ ನೆರವೇರಿಸಿದರು.

ಮುಖ್ಯ ಭಾಷಣಗಾರರಾಗಿ ಆಗಮಿಸಿದ ಇರ್ಷಾದ್ ಫೈಝಿ ಪಾಲ್ತಾಡ್ ಅನುಸ್ಮರಣ ಪ್ರಭಾಷಣ ನಡೆಸಿದರು.

ಸಮಾರಂಭದಲ್ಲಿ ಸುಳ್ಯ ರೇಂಜ್ ಮದ್ರಸಾ ಮೆನೇಜ್ಮೆಂಟ್ ಕೋಶಾಧಿಕಾರಿ ಹಾಜಿ ಎಸ್.ಎ ಹಮೀದ್, ಸುಳ್ಯ ವಲಯ ಪ್ರ.ಕಾರ್ಯದರ್ಶಿ ಅಕ್ಬರ್ ಕರಾವಳಿ, ಹಾಜಿ ಅಹ್ಮದ್ ಸುಪ್ರೀಂ, ಹಾಜಿ ಅಹ್ಮದ್ ಪಾರೆ, ಮದ್ರಸಾ ಮೆನೇಜ್ಮೆಂಟ್ ಕಾರ್ಯದರ್ಶಿ ಬಶೀರ್ ಯು.ಪಿ, SKSSF ವರ್ಕಿಂಗ್ ಕಾರ್ಯದರ್ಶಿ ಆಶಿಕ್ ಸುಳ್ಯ, ಜಿಲ್ಲಾ ಕೌನ್ಸಿಲ್ ಸದಸ್ಯ ಶಹೀದ್ ಪಾರೆ, ಅಬ್ದುಲ್ ಮಜೀದ್ ಕೆ.ಬಿ, ನವಾಜ್ ಸುಪ್ರೀಂ, ಕಯ್ಯುಮ್ ಕಟ್ಟೆಕ್ಕಾರ್, ರಾಷಿದ್ ಪೇರೆ ಉಪಸ್ಥಿತರಿದ್ದರು. ಸಿನಾನ್ ಇರುವಂಬಳ್ಳ ಸ್ವಾಗತಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.