ಕ್ಷೇತ್ರ ಸಮನ್ವಯಾಧಿಕಾರಿ‌ಗಳಿಗೆ ಕೊರೊನಾ ಪಾಸಿಟಿವ್

Advt_Headding_Middle
Advt_Headding_Middle

 

ಕ್ಷೇತ್ರ ಸಂಪನ್ಮೂಲ ಕೇಂದ್ರ ದ ಸಮನ್ವಯಾಧಿಕಾರಿ ಶ್ರೀಮತಿ ವೀಣಾ ಎಂ.ಟಿ.ಯವರಿಗೆ ಕೊರೊನಾ ಪಾಸಿಟಿವ್ ಇರುವುದಾಗಿ ತಿಳಿದುಬಂದಿದೆ.

ಅಸೌಖ್ಯದ ಕಾರಣದಿಂದ ಇಂದು ಸುಳ್ಯ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆ ಗೊಳಪಡಿಸಿದಾಗ ಅವರಿಗೆ ಪಾಸಿಟಿವ್ ಇರುವುದು ದೃಢ ಪಟ್ಟಿದೆ.
ವೀಣಾರವರ ಪತಿ , ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪಿ.ಡಿ. ಆಗಿರುವ ಸತೀಶ್ ಕೊಯಿಂಗಾಜೆ ಯವರಿಗೂ ಕೊರೋನ ಪಾಸಿಟಿವ್ ಬಂದಿರುವುದಾಗಿ ತಿಳಿದುಬಂದಿದೆ.
ಅವರು ಒಂದೆರಡು ಮದುವೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು , ಆ ಮದುವೆಯಲ್ಲಿದ್ದ ದಿನೇಶ ಎಂಬ ಯುವಕನಿಗೆ ಕೊರೊನ ಇರುವುದು ನಂತರ ಧೃಢಪಟ್ಟಿತ್ತು. ಆ ಹಿನ್ನೆಲೆಯಲ್ಲಿ ಸತೀಶ್ ಕೊಯಿಂಗಾಜೆ ಮತ್ತು ವೀಣಾ ಎಂ.ಟಿ.ಯವರು ಸ್ವಯಂ ಕ್ವಾರಂಟೈನ್ ಗೊಳಗಾಗಿದ್ದರು. ಈ ಮಧ್ಯೆ ಅವರಿಬ್ಬರಿಗೂ ಜ್ವರದ ಲಕ್ಷಣ ಕಂಡು ಬಂದುದರಿಂದ ಇಬ್ಬರೂ ಇಂದು ಸುಳ್ಯ ಸರಕಾರಿ ಆಸ್ಪತ್ರೆಗೆ ಬಂದು ಕೋವಿಡ್ ಟೆಸ್ಟ್ ಗೊಳಗಾಗಿದ್ದರು. ಕೊರೊನ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರಿಬ್ಬರು ಹೋಂಕ್ವಾರೆಂಟೈನ್ ನಲ್ಲಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.