ಮಾವಿನಕಟ್ಟೆ : ಪುಷ್ಪಕರ ಮಾವಿನಕಟ್ಟೆ ಯವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ

Advt_Headding_Middle
Advt_Headding_Middle

ದೇವಚಳ್ಳ ಗ್ರಾಮ ಪಂಚಾಯತ್ ಮಾಜಿ ಸದಸ್ಯ, ಮಾವಿನಕಟ್ಟೆ ಉದಯಗಿರಿ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಆಯುಧ ಪೂಜಾ ಸಮಿತಿಯ ಅಧ್ಯಕ್ಷ, ಶ್ರೀ ವಿಷ್ಣು ಯುವಕ‌ಮಂಡಲದ ಸಕ್ರೀಯ ಸದಸ್ಯ, ದೇವಚಳ್ಳ ಭಾಗದಲ್ಲಿ ಜನಾನುರಾಗಿಯಾಗಿ, ವಿವಿಧ ಸಂಘಟನೆಗಳಲ್ಲಿ ದುಡಿಯುತ್ತಿದ್ದು‌, ಅಕಾಲಿಕವಾಗಿ ಇತ್ತೀಚೆಗೆ ನಿಧನರಾದ ಪುಷ್ಪಕರ ಮಾವಿನಕಟ್ಟೆ ಯವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯು ಇಂದು ಸಂಜೆ ಮಾವಿನಕಟ್ಟೆಯ ಉದಯಗಿರಿ ಶ್ರೀ ವಿಷ್ಣು ಕಲಾ ಮಂದಿರದಲ್ಲಿ ನಡೆಯಿತು.


ಕಾರ್ಯಕ್ರಮದ ಆರಂಭದಲ್ಲಿ ಮೃತರ ಆತ್ಮಕ್ಕೆ ಚಿರಶಾಂತಿ ಕೋರಲಾಯಿತು. ರಾಜ್ಯ ಹಾಗೂ ಪುರುಷ ದೈವಸ್ಥಾನ ತಳೂರು ಇದರ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಶೇಖರ ತಳೂರು ಅಧ್ಯಕ್ಷತೆ ವಹಿಸಿದ್ದರು. ಶ್ರೀ ಮಹಾವಿಷ್ಣು ದೈವಸ್ಥಾನದ ಅಧ್ಯಕ್ಷ ಎ.ವಿ.ತೀರ್ಥರಾಮ, ದೇವಚಳ್ಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದಿವಾಕರ ಮುಂಡೋಡಿ, ಪುಷ್ಪಾಕರ ಮಾವಿನಕಟ್ಟೆಯವರ ಸಹೋದರ ರಾಜೇಶ್ ಮಾವಿನಕಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ‌ ಎಲಿಮಲೆ ಪ್ರೌಢಶಾಲೆಯ ಅಧ್ಯಾಪಕ ಗೋಪಿನಾಥ ಮೆತ್ತಡ್ಕ ಪ್ರಸ್ತಾವಿಕ ಮಾತನಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.