Breaking News

ಗಾಳಿಪಟದೊಂದಿಗೆ ಗಾಳಿಯಲ್ಲಿ ಹಾರಾಡಿ ಆತಂಕ ಸೃಷ್ಟಿಸಿದ ಮಗು : ವೀಡಿಯೋ ವೈರಲ್

Advt_Headding_Middle
Advt_Headding_Middle


ತೈವಾನ್‌ನಲ್ಲಿ ನಡೆದ ಗಾಳಿಪಟ ಉತ್ಸವವೊಂದರಲ್ಲಿ ಗಾಳಿಪಟ ಹಾರಿಸುತ್ತಿದ್ದ ಮಗುವನ್ನೇ ಗಾಳಿಪಟ ಮೇಲಕ್ಕೆ ಹೊತ್ತೊಯ್ದು ನೋಡುಗರನ್ನು ಆತಂಕಕ್ಕೀಡುಮಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತೈವಾನ್‌ನ ಕ್ಸಿಂಚು ಎಂಬಲ್ಲಿ ಗಾಳಿಪಟ ಉತ್ಸವ ಆಚರಿಸಲಾಗಿತ್ತು. ನೋಡಲು ನೂರಾರು ಮಂದಿ ಜನ ಸೇರಿದ್ದರು. ಈ ವೇಳೆ ಆಕಾಶದೆತ್ತರಕ್ಕೆ ಹಾರಿದ ಬೃಹತ್ ಗಾತ್ರದ ಗಾಳಿಪಟವೊಂದು ಗಾಳಿಪಟ ಹಿಡಿದಿದ್ದ ಮಗುವನ್ನು ಕೂಡಾ ಎತ್ತರಕ್ಕೆ ಒಯ್ದಿತು. ಮಗು ಗಾಳಿಯಲ್ಲಿ ತೇಲುತ್ತಿದ್ದಂತೆ ಮಗು, ಪಾಲಕರು ಬೊಬ್ಬಿಡಲು ಪ್ರಾರಂಭಿಸಿದರು. ಅದೃಷ್ಟವಶಾತ್ ಗಾಳಿಪಟ ಪ್ರೇಕ್ಷಕರಿದ್ದ ಕಡೆಗೇ ಬಂದು ಕೆಳಗಿಳಿಯಿತು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.