Breaking News

ಸುಳ್ಯ ರೋಟರ್ಯಾಕ್ಟ್ ಕ್ಲಬ್ ಪದ ಪ್ರದಾನ ಸಮಾರಂಭ

Advt_Headding_Middle
Advt_Headding_Middle

 

 

ಸುಳ್ಯ ರೋಟರ್ಯಾಕ್ಟ್ ಕ್ಲಬ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಹೀದ್ ಪಾರೆ ಹಾಗೂ ಕಾರ್ಯದರ್ಶಿ ಶ್ಯಾಮ್ ಪ್ರಸಾದ್ ನಿಡ್ಯಮಲೆ ತಂಡದ ಪದ ಪ್ರದಾನ ಸಮಾರಂಭವು. ಆ.26 ರಂದು ಸುಳ್ಯ ರಥಬೀದಿಯಲ್ಲಿರುವ ರೋಟರಿ ಕಮ್ಯೂನಿಟಿ ಹಾಲ್ ನಲ್ಲಿ ನಡೆಯಿತು.

 

ಅಧ್ಯಕ್ಷತೆಯನ್ನು ವಹಿಸಿದ್ದ ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಡಾ.ಗುರುರಾಜ್ ವೈಲಾಯ ಪ್ರದ ಪ್ರದಾನ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ರೊ.ಮೇಜರ್ ಡೋನರ್ ಡಾ.ಕೇಶವ್ ಪಿ.ಕೆ., ಝೋನಲ್ ಲೆಫ್ಟಿನೆಂಟ್ ಜಿತೇಂದ್ರ ಎನ್.ಎ., ರೋಟರಿ ಕ್ಲಬ್ ಐ.ಪಿ.ಪಿ. ಡಾ.ಪುರುಷೋತ್ತಮ ಕೆ.ಜಿ., ರೋಟರ್ಯಾಕ್ಟ್ ಡಿ.ಆರ್.ಆರ್. ಅಭಿಜಿತ್, ಝಡ್.ಆರ್. ಆರ್.‌ಶಶಿಧರ ಮಾವಿನಕಟ್ಟೆ ಭಾಗವಹಿಸಿದ್ದರು.

ರೋಟರ್ಯಾಕ್ಟ್ ನಿರ್ಗಮಿತ ಅಧ್ಯಕ್ಷ ಮೋಹಿತ್ ಹರ್ಲಡ್ಕ, ನಿರ್ಗಮಿತ ಸಭಾಪತಿ ಪ್ರಭಾಕರ್ ನಾಯರ್, ನೂತನ ಸಭಾಪತಿ ಅಶೋಕ್ ಸರಳಾಯ, ರೋಟರಿ ಕ್ಲಬ್ ಕಾರ್ಯದರ್ಶಿ ಶ್ರೀಮತಿ ಲತಾ ಮಧುಸೂದನ್ ವೇದಿಕೆಯಲ್ಲಿ ದ್ದರು.

ಡಾ.ಗುರುರಾಜ್ ವೈಲಾಯ ಸ್ವಾಗತಿಸಿದರು. ಚೇತನ್ ಕಜೆಗದ್ದೆ ವಾರ್ಷಿಕ ವರದಿ ಮಂಡಿಸಿದರು. ಭವಾನಿಶಂಕರ್ ಕಲ್ಮಡ್ಕ ಕ್ಲಬ್ ಸದಸ್ಯರ ಜವಾಬ್ದಾರಿಯ ಪಟ್ಟಿ ವಾಚಿಸಿದರು. ಕಾರ್ಯದರ್ಶಿ ಶ್ಯಾಮ್ ಪ್ರಸಾದ್ ನಿಡ್ಯಮಲೆ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.