ಜೇಸಿ ದೇವಿಪ್ರಸಾದ್ ಚಿಕ್ಮುಳಿಯವರಿಗೆ ಸಾಧನಾಶ್ರೀ ಪ್ರಶಸ್ತಿ

Advt_Headding_Middle
Advt_Headding_Middle

ಜೇಸಿಐ ಪಂಜ ಪಂಚಶ್ರೀಯ ಕಾರ್ಯದರ್ಶಿ, ಯುವ ಉದ್ಯಮಿ, ಗುತ್ತಿಗಾರಿನ ದೇವಿ ಸಿಟಿ ಕಾಂಪ್ಲೆಕ್ಸ್‌ನ ಮಾಲಕ ಜೇಸೀ ಜೆಎಫ್‌ಎಂ ದೇವಿಪ್ರಸಾದ್ ಚಿಕ್ಮುಳಿಯವರಿಗೆ ಜೇಸಿಐ ಭಾರತದ ವಲಯ 15 ರ ವಿಭಾಗದ ಅಭಿವೃದ್ಧಿ, ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನದಲ್ಲಿ ನೀಡುವ ಸಾಧನಾಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ವ್ಯವಹಾರ ಅಥವಾ ವೃತ್ತಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿ ಜೇಸೀ ಘಟಕದ ಓರ್ವ ಸದಸ್ಯರಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಪಂಜ ಜೇಸಿಐ ಘಟಕದಿಂದ ಇವರು ಆಯ್ಕೆಯಾಗಿದ್ದಾರೆ. ಸೆ. ೬ರಂದು ಬಂಟ್ವಾಳದ ಬಂಟರ ಭವನದಲ್ಲಿ ನಡೆಯುವ ಅದ್ವಿತೀಯ ವ್ಯವಹಾರ ಸಮ್ಮೇಳನ ೨೦೨೦ರಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.