Breaking News

ಮಕ್ಕಳ ಬಾಳಿನ ಸಾರಥಿ ಶಿಕ್ಷಕ

Advt_Headding_Middle
Advt_Headding_Middle
Advt_Headding_Middle

🖊️ ಪೂರ್ಣಿಮಾ ಚೊಕ್ಕಾಡಿ
ಮುಖ್ಯ ಶಿಕ್ಷಕಿ -ಚೊಕ್ಕಾಡಿ ಆಂಗ್ಲ ಮಾಧ್ಯಮ ಶಾಲೆ ಕುಕ್ಕುಜಡ್ಕ

ಅಪೂರ್ಣದಿಂದ ಕೂಡಿರುವ ಪುಸ್ತಕಕ್ಕೆ ಹೊಸ ಅಕ್ಷರಗಳನ್ನು ತುಂಬಿ ಸಹ ಜೀವನವನ್ನು ರೂಪಿಸಿ ರಂಗಿನ ಮೆರಗನ್ನು ನೀಡುವಾತ ನಮ್ಮ ಶಿಕ್ಷಕ.
ಹಿಂದಿನ ಕಾಲದಿಂದಲೂ ಶಿಕ್ಷಣಕ್ಕೆ ಬಂದಿರುವ ವಿಶೇಷ ಗಣನೆಯು ನಮ್ಮ ಶಿಕ್ಷಣ ಕ್ಷೇತ್ರವನ್ನು ಮೆಲುಕು ಹಾಕುತ್ತಿದೆ. ಶಿಕ್ಷಣ ಸಮಾಜದಲ್ಲಿ ಬಹುವ್ಯಾಪಿಸಿದೆ.
ಗುರು ಬ್ರಹ್ಮ ಗುರು ವಿಷ್ಣು ಗುರುರ್ ದೇವೋ ಮಹೇಶ್ವರ
ಗುರು ಸಾಕ್ಷತ್ ಪರ ಬ್ರಹ್ಮ ತಸ್ಮೈಶ್ರೀ ಗುರುವೇ ನಮ

ಪ್ರತಿಯೊಬ್ಬರ ಬಾಳಿನಲ್ಲಿ ಗುರು ಎಂಬುದು ಮಾರ್ಗದರ್ಶಕನಾಗಿರುತ್ತಾನೆ.
ಗುರುವೆಂದರೆ ನಾಲ್ಕು ಗೋಡೆಗಳ ಮದ್ಯೆ ಕಪ್ಪು ಹಲಗೆಯ ಮೇಲೆ ಬರೆದು ಕಲಿಸುವವ ಮಾತ್ರವಲ್ಲ. ಪ್ರತಿಯೊಬ್ಬರ ಬದುಕಲ್ಲೂ ತಂದೆ ತಾಯಿ ಎಷ್ಟು ಪ್ರಮುಖವೋ ಹಾಗೆ ನಾನಾ ತರನಲ್ಲಿ ಸ್ಥಾನ ತುಂಬುತ್ತಿರುವ ಸಾರಥಿ ಶಿಕ್ಷಕ ನಾಗಿದ್ದಾನೆ. ಮಕ್ಕಳ
ಜೀವನ ರೂಪಿಸುವಲ್ಲಿ ಹಲವು ವರ್ಷಗಳಿಂದ ತಯಾರು ಮಾಡಿ ಮಕ್ಕಳ ಜೊತೆಗೆ ತಂದೆ ತಾಯಿಯರನ್ನು ಸಹ ಹೆಸರನ್ನು ಗುರುತಿಸಿಕೊಳ್ಳುವಾಗೆ ವೇದಿಕೆಯ ಮೆಟ್ಟಿಲನ್ನೇರಿಸುತ್ತಾರೆ.
ನಾವು ಗುರುವಿನಿಂದ ಶಾಲೆಗೆ ಹೋಗಿಯೇ ಶಿಕ್ಷಣವನ್ನು ಕಲಿಯಬೇಕೆಂದಿಲ್ಲ.ನಾವು ಯಾರಿಂದಲೋ ಒಂದೊಳ್ಳೆಯ ಅಥವಾ ಗೊತ್ತಿಲ್ಲದ ವಿಷಯಗಳನ್ನು ಕಲಿತರೆ ಅವು ನಮಗೆ ಗುರುಗಳೇ. ಪ್ರಕೃತಿ, ಮರಗಿಡ ಪ್ರಾಣಿ ಪಕ್ಷಿಗಳಿಂದ ಕಲಿಯಬೇಕಾದದ್ದು ತುಂಬಾ ಇದೆ, ಹಾಗು ಕಲಿಯುತ್ತೇವೆ. ಇವುಗಳು ಒಂದು ಮಾರ್ಗದರ್ಶಕರೆ.ಒಂದು ಸಣ್ಣ ಜೀವಿ ಇರುವೆ, ಅವುಗಳನ್ನು ಗಮನಿಸಿದರೆ ಶಿಸ್ತನ್ನು ಗಮನಿಸಬಹುದು. ಹೀಗೆ ಪ್ರತಿ ವ್ಯಕ್ತಿಯೂ ಪ್ರತೀ ಹಂತದಲ್ಲೂ ವಿವಿಧ ರೀತಿಯಲ್ಲಿ ಅನುಭವವಗಳನ್ನು ಪಡೆಯುತ್ತೇವೆ. ಅವುಗಳಿಗೆ ಕಾರಣಕರ್ತರು ನಮಗೆ ತಿಳಿಯದೇ ಇರುವವರೂ ಇರಬಹುದು,
ವಾಟ್ಸಪ್, ಪೇಸ್ಬುಕ್, ಯೂಟ್ಯೂಬ್ ,ವೀಡಿಯೋ ,ಗೂಗಲ್ ನಲ್ಲಿ ನಲ್ಲಿ ನಮಗೆ ಗೊತ್ತಿಲ್ಲದ ವಿಷಯಗಳನ್ನು ತಿಳಿಸಲ್ಪಡುತ್ತದೆ. ಸಮಾಜದಲ್ಲಿ ಆಗುವ ಘಟನೆಯು ನಮ್ಮ ಮೇಲೇ ಪರಿಣಾಮ ಬೀರಿ ಹೊಸ ವಿಷಯಗಳಲ್ಲಿ ನೀತಿ ನಿಯಮ, ಸಾಧನೆಯ ಗುರಿ, ಸಂತೋಷವನ್ನು ತೋರಿಸುವಲ್ಲಿ ಕನ್ನಡಿಯಾಗುತ್ತದೆ. ಆ ನಿಟ್ಟಿನಲ್ಲಿ ನಮ್ಮ ಸ್ನೇಹಿತರು, ಅಕ್ಕ ತಂಗಿಯು ಕೂಡ ಗುರುಗಳೇ.

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ.
ಎಂಬಂತೆ ವಿಶೇಷ ಗುಣಗಾನಗಳನ್ನು ಇಲ್ಲಿ ಬಿಂಬಿಸುತ್ತವೆ. ಒಂದು ದೀಪವು ತಾನು ಉರಿಯದೆ, ಮತ್ತೊಂದು ದೀಪವೂ ಬೆಳಗಲಾಗದು.ಗುರು ತಾನು ಕಲಿಯದೆ ಇನ್ನೊಬ್ಬರಿಗೆ ಕಲಿಸಲಾರ. ತಿಳಿಯುವಲ್ಲಿ ಯಾವ ಶಿಕ್ಷಕರು ಹಿಂದೇಟು ಹಾಕಬಾರದು. ಕಲಿಸುವ ಹಂತದಲ್ಲಿಯೂ ಮಕ್ಕಳಿಂದ ಕಲಿಕೆ ಸಿಗುತ್ತದೆ. ಮಕ್ಕಳೊಂದಿಗೆ ಕಳೆಯುವ ಕ್ಷಣ ಅಮೂಲ್ಯವಾದದು. ಶಾಲೆಯಲ್ಲಿ ಶಿಕ್ಷಕರ ಸಮಯ ವ್ಯರ್ಥವಾಗದೆ ಸಂತೋಷದಿಂದ ಕಳೆಯುವಂತಹದು. ಹೊಸ ಕಲಿಕೆ, ಹೊಸ ಚಟುವಟಿಕೆಗಳು ಮಕ್ಕಳಿಗೆ ಅಭ್ಯಸಿಸುವಾಗ, ಮಕ್ಕಳ ತುಂಟಾಟ, ನಗು ಮಾತು ಎಲ್ಲವೂ ಖುಷಿಯನ್ನಾಧಾರಿಸುತ್ತದೆ.

ಮಕ್ಕಳಲ್ಲಿ ನಿನ್ನ ಗುರಿ ಏನು ಕೇಳಿದಾಗ, ಐಎಸ್, ಐಪಿಎಸ್ ವೈದ್ಯ, ಹೀಗೆ ನೂರಾರು ಆಸೆ ಕನಸುಗಳನ್ನು ಹೇಳುವ ಮಕ್ಕಳು ಸಾಧನೆಯನ್ನು ಮಾಡಿದಾಗ, ನನ್ನಕ್ಕಿಂತ ಎತ್ತರಕ್ಕೇರಿದ್ದಾನೆ ಒಳ್ಳೆಯ ಶುಭ ಹಾರೈಕೆ ನೀಡುವಂತಹ ಗುರುಗಳು. ಶಿಷ್ಯನ ಸಾಧನೆ ಉತ್ತುಂಗಕ್ಕೇರಿ ನೂರಾರು ಜನರ ಮುಂದೆ ಸನ್ಮಾಸಿಲ್ಪಟ್ಟಾಗ, ಅದನ್ನು ವೇದಿಕೆಯ ಮುಂಭಾಗದಲ್ಲಿ ಕುಳಿತು ಅಥವಾ ಟಿವಿ, ಪೇಪರ್ ನಲ್ಲಿ ಪೋಟೋ ನೋಡಿದಾಗ ನಮ್ಮ ಶಿಷ್ಯ ಎಂದು ಹೇಳಿಕೊಂಡು ಹೆಮ್ಮೆ ಪಡುವ ಗುರುಗಳು. ಶಿಕ್ಷಕನೇ ಹಾಗೇ ಮಕ್ಕಳ ಸಾಧನೆ, ಉತ್ತಮ ನಡವಳಿಕೆಯನ್ನು ನೋಡಿ ಖುಷಿ ಪಡುವಂತಹ ಶಿಕ್ಷಕರು.

ಶಿಕ್ಷಕರಿಗೂ ಅಷ್ಟೇ ಮಕ್ಕಳಷ್ಟೇ ಶಾಲೆ ಅಚ್ಚುಮೆಚ್ಚು. ವಿವಿಧ ಧರ್ಮ,ಜಾತಿಯನ್ನೊಳಗೊಂಡ ಶಾಲೆಯ ಮಕ್ಕಳನ್ನು ತನ್ನ ಮಕ್ಕಳಂತೆ ಅಮ್ಮನ ಪ್ರೀತಿಯು ನೀಡಿ ಶಾಲೆಯಿಂದ ವಿದಾಯ ಹೇಳುವ ಸಂದರ್ಭದಲ್ಲಿ ಸಂತೋಷದಿಂದ ಕಣ್ಣೀರು ಹಾಕುತ್ತ ಕಳುಹಿಸಿಕೊಡುವ ನಮ್ಮ ಗುರುಗಳು. A teacher is a friend, philosopher and guider. ನಮ್ಮ ಬದುಕಿಗೆ ಸಾತ್ ಕೊಡುವ ಶಿಕ್ಷಕ. ನಾವು ಶಿಕ್ಷಕರಾಗಿದ್ದು ನಮಗೆಲ್ಲವೂ ತಿಳಿದಿದೆ ,ಎಂದು ಗೊತ್ತಿಲ್ಲದೆ ವಿಷಯಗಳನ್ನು ತಿಳಿಯುವಲ್ಲಿ ಹಿಂದೇಟು ಹಾಕಬಾರದು. ಶಿಕ್ಷಕನು ಪ್ರತಿ ಸಮಯದಲ್ಲೂ ನಾವು ವಿದ್ಯಾರ್ಥಿ ಎಂದು ಕಲಿಯುವಲ್ಲಿ ಕಾತುರರಾಗಿರಬೇಕು.
ಅರಿವೇ ಗುರುವು, ಮನುಷ್ಯನ ಬದುಕಿನಲ್ಲಿ ಅರಿವಿನ ಕಿಡಿಯನ್ನು ಹಚ್ಚಿಸಿ ಮುನ್ನಡೆಸುವ ಶಿಕ್ಷಕರು ಬಹುವ್ಯಾಪಿತವಾಗಿದೆ. ಇದು ನಿರ್ದಿಷ್ಟ ಚೌಕಟ್ಟಿಗೆ ಒಳಪಡದೆ ಚೌಕಟ್ಟು ಮೀರಿ ಚಿಂತಿಸುವಲ್ಲಿ ಮುಂದಾಳತ್ವ, ನಾಯಕತ್ವ ವನ್ನು ಹೊಂದಿ ಕ್ರಿಯಾಶೀಲರನ್ನಾಗಿಸುತ್ತಾರೆ.

ದೇಶದ ಎರಡನೇ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ನವರ ನೆನಪಿನಾರ್ಥದಲ್ಲಿ ಸೆಪ್ಟೆಂಬರ್ 5 ರಂದು ಶಿಕ್ಷಕ ದಿನಾಚರಣೆಯ ಮೂಲಕ ತಮ್ಮ ಜೀವನದಲ್ಲಿ ರೂಪಿಸಿದ ಶಿಕ್ಷಣವನ್ನು ನೆನಪಿಸುವ ದಿನವಾದರೆ, ಹೆಚ್ಚಿನವರ ಬಾಳಿನಲ್ಲಿ ತಾನು ಬಂದಿರುವ ಹಾದಿಯನ್ನು ಮೆಲುಕು ಹಾಕುವ ದಿನವು ಹೌದು. ನಾವು ಏನಾಗಿದ್ದೇವೆ ಎಂಬುದನ್ನು ನಮ್ಮ ಗುರುಗಳ ಮುಂದೆ ನಿಂತು ಹೇಳುವ ಖುಷಿಯೇ ಬೇರೆ. ನಮ್ಮ ಪಾಲಿನಲ್ಲಿ ಶಾಲೆಯು ಹಚ್ಚಹಸಿರಿನಿಂದ ಕೂಡಿದ ದೇಗುಲವಾಗಿದೆ, ಕಾರಣ ನಮ್ಮ ಶಿಕ್ಷಕರಿಂದಲೇ ಶಾಲೆಗಯು ಗುರುತಿಸಿಕೊಂಡು ನಮ್ಮ ನೆನಪಿನಲ್ಲಿ ಶಾಶ್ವತವಾಗಿ ಉಳಿದಿದೆ.
ಇತ್ತೀಚಿನ ದಿನಗಳಲ್ಲಿ ಶಿಕ್ಷಕ ವಿದ್ಯಾರ್ಥಿಗಳ ಸಂಬಂಧ ಕ್ಷೀಣಿಸುತ್ತ ಸಾಗುತ್ತಿದೆ.ನಮ್ಮ ಸಮಾಜಕ್ಕೆ ಮಕ್ಕಳ ಮೂಲಕ ಸಾರಥಿಯಾಗಿರಬೇಕು,ಇದು ಅನಿವಾರ್ಯವಾಗಿದೆ. ಜಾಗತಿಕ ಪರಿಣಾಮದಿಂದ ನೀತಿ ನಿಯಮ, ನಡತೆ ಬದಲಾಗುತ್ತಿದೆ, ಆದರೂ ಮಕ್ಕಳ ಭವಿಷ್ಯಕ್ಕೆ ತಮ್ಮ ಜೀವನದ ಮುಕ್ಕಾಲು ಭಾಗವನ್ನು ಮುಡಿಪಾಗಿಡುವ ಶಿಕ್ಷಕರಿಗೆ ಬದುಕಿನಲ್ಲಿ ಸರಿಯಾದ ದಿಕ್ಕಿನಲ್ಲಿ ಮುನ್ನುಗಲು ಮಾರ್ಗದರ್ಶನ ಮಾಡುವ ಮಾರ್ಗದರ್ಶಕರಿಗೆ ಗೌರವ ನೀಡಲು ಶಿಕ್ಷಕರವೇ ಬೇಕೆಂದಿಲ್ಲ, ನಮ್ಮ ಭವಿಷ್ಯ ರೂಪಿಸಸುತ್ತಿರುವ ನಮ್ಮನ್ನು ಸತ್ಪಥದಲ್ಲಿ ಮುನ್ನಡೆಯುವಂತೆ ಮಾರ್ಗ ತೋರುವ ಗುರುವಿನ ಸ್ಮರಣೆ ಸದಾಕಾಲ ಇರಲಿ.
ಆಕ್ಷರಗಳನ್ನು ಪರಿಚಯಿಸಿ ತಮ್ಮ ಜೀವನಕ್ಕೆ ದಾರಿ ತೋರಿಸಿ, ಏಳು ಬೀಳುಗಳನ್ನು ಅರ್ಥೈಸಿ, ಹೆಸರನ್ನು ಗುರುತಿಸಿಕೊಳ್ಳುವಂತೆ ಮಾಡಿರುವ ನಿಮಗೆ ಸದಾ ಚಿರಋಣಿ.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.