ಕೋಲ್ಚಾರಿನಲ್ಲಿ ಕೊರೋನ ಸ್ಪೋಟ : 21 ಮಂದಿಗೆ ಪಾಸಿಟಿವ್ ಪತ್ತೆ

Advt_Headding_Middle
Advt_Headding_Middle

 


ಆಲೆಟ್ಟಿ ಗ್ರಾಮದ ಕೋಲ್ಚಾರಿನಲ್ಲಿ ಇದ್ದಕ್ಕಿದ್ದಂತೆ ಕೊರೋನಾ ಸ್ಪೋಟಗೊಂಡಿದೆ. ಅಲ್ಲಿ ಸುಮಾರು ೨೧ ಮಂದಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ಇತ್ತೀಚೆಗೆ ಕೋಲ್ಚಾರು ಪರಿಸರದಲ್ಲಿ ನಡೆದ ಕಾರ್ಯಕ್ರಮದ ಬಳಿಕ ವ್ಯಾಪಕವಾಗಿ ಜ್ವರ ತಲೆನೋವು ಮತ್ತಿತರ ಲಕ್ಷಣಗಳು ಕಂಡುಬಂದುದರಿಂದ ಪರೀಕ್ಷೆ ನಡೆಸಿದಾಗ ಕೆಲವರಿಗೆ ಕೊರೋನಾ ಪಾಸಿಟಿವ್ ಪತ್ತೆಯಾಯಿತು. ಈ ಹಿನ್ನಲೆಯಲ್ಲಿ ಅವರ ಪ್ರಥಮ ಸಂಪರ್ಕಿತರನ್ನು ರ್‍ಯಾಪಿಡ್ ಟೆಸ್ಟ್‌ಗೆ ಒಳಪಡಿಸಿದಾಗ ಇನ್ನಷ್ಟು ಪಾಸಿಟಿವ್ ಪ್ರಕರಣಗಳು ಗೊತ್ತಾದವೆಂದು ತಿಳಿದುಬಂದಿದೆ. ಇದೀಗ ಒಟ್ಟು ೨೧ ಪ್ರಕರಣ ಕೋಲ್ಚಾರು ಪರಿಸರದಲ್ಲಿ ವರದಿಯಾಗಿದ್ದು, ಅದು ಇನ್ನಷ್ಟು ಹೆಚ್ಚುವ ಸಂಭವವಿದೆ ಎಂದು ಜನರಾಡಿಕೊಳ್ಳುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.