Breaking News

ಅಂಕತ್ತಡ್ಕ ಪ್ರಾಥಮಿಕ ಶಾಲಾ ಶಿಕ್ಷಕಿ ಹರ್ಷಲತ ಎಂ.ಜೆ ಯವರಿಗೆ ಪದೋನ್ನತಿ

Advt_Headding_Middle
Advt_Headding_Middle

 

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಕತಡ್ಕ ಪುತ್ತೂರು ತಾಲೂಕು ಇಲ್ಲಿ ಕಳೆದ 1 ವರ್ಷಗಳಿಂದ ಸಹ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ, ಶ್ರೀಮತಿ ಹರ್ಷಲತ ಎಂ ಜೆ ಇವರು ಸರಕಾರಿ ಪ್ರೌಢಶಾಲೆ ಏನೆಕಲ್ಲು ಇಲ್ಲಿಗೆ ಇಂಗ್ಲಿಷ್ ಭಾಷಾ ಸಹಾಯಕ ಶಿಕ್ಷಕರಾಗಿ ಪದೋನ್ನತಿ ಹೊಂದಿರುತ್ತಾರೆ.

ಇವರು ಮೂಲತಃ ಸುಳ್ಯ ತಾಲೂಕಿನ ಕನಕಮಜಲು ಗ್ರಾಮದ ಕಣಜಾಲು ಜತ್ತಪ್ಪ ಗೌಡ ಮತ್ತು ಮೀನಾಕ್ಷಿ ದಂಪತಿಗಳ ಪುತ್ರಿಯಾಗಿದ್ದು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಂತಿನಗರ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಅಂಕತ್ತಡ್ಕ ಶಾಲೆಗೆ ವರ್ಗಾವಣೆಯಾಗಿ ಬಂದಿದ್ದರು. ಸೆ. 3 ರಂದು ನಡೆದ ಜಿಲ್ಲಾ ಹಂತದ ಕೌನ್ಸೆಲಿಂಗ್ ನಲ್ಲಿ ಉಪನಿರ್ದೇಶಕರು (ಅಭಿವೃದ್ಧಿ) ಇವರ ಆದೇಶದಂತೆ ಸ್ಥಳವನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಇವರು ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಇಲ್ಲಿ ಬಿಆರ್‌ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ, ಪ್ರಸ್ತುತ ಕೆಪಿಎಸ್ ಬೆಳ್ಳಾರೆ (ಪ್ರಾಥಮಿಕ ವಿಭಾಗ) ಇಲ್ಲಿ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ದಿನೇಶ್ ಮಾಚಾರ್ ಇವರ ಪತ್ನಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.