ಸೆ.9 ರಿಂದ ಸುಳ್ಯದಲ್ಲಿ ಜೇಸಿಐ ಸಪ್ತಾಹ ಆರಂಭ

Advt_Headding_Middle
Advt_Headding_Middle

ಸೆ.15 ರಂದು ಕಮಲಪತ್ರ, ಪಯಸ್ವಿನಿ ಶ್ರೀ ಪ್ರಶಸ್ತಿ ಪ್ರದಾನ

ಜೇಸಿಐ ಸುಳ್ಯ ಪಯಸ್ವಿನಿ ಮತ್ತು ಜೇಸಿರೆಟ್ ಯುವ ಜೇಸಿ ವಿಭಾಗ ಹಾಗೂ ಪಯಸ್ವಿನಿ ಜೇಸಿಸ್ ಚಾರಿಟೇಬಲ್ ಟ್ರಸ್ಟ್ ಸುಳ್ಯ ಇದರ ಆಶ್ರಯದಲ್ಲಿ ಜೇಸಿಐ ಸಪ್ತಾಹ ೨೦೨೦ ಸೆ.೯ರಿಂದ ಆರಂಭಗೊಂಡು ಸೆ.೧೫ರವರೆಗೆ ನಡೆಯಲಿದೆ. ಸೆ.೧೬ರಂದು ವಲಯಾಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮ ನಡೆಯಲಿದೆ.
ಸೆ.೫ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಜೇಸಿಐ ಅಧ್ಯಕ್ಷ ದೇವರಾಜ್ ಕುದ್ಪಾಜೆ ಕಾರ್ಯಕ್ರಮದ ಕುರಿತು ವಿವರ ನೀಡಿದರು.


ಸೆ.೯ರಂದು ಜೇಸಿಐ ಸಪ್ತಾಹದ ಉದ್ಘಾಟನೆ ಸುಳ್ಯ ಕುರುಂಜಿಭಾಗ್‌ನ ಬಿ.ಸಿ.ಯಂ ಹಾಸ್ಟೆಲ್‌ನಲ್ಲಿ ನಡೆಯಲಿದೆ. ಅಂದು ಪ್ರತಿಭಾ ಪುರಸ್ಕಾರ ಹಾಗೂ ಗೌರವಾರ್ಪಣೆ ನಡೆಯಲಿದ್ದು, ಯುವ ಪ್ರತಿಭೆಗಳಾದ ಕು| ಮೇಘ ಕುದ್ಪಾಜೆ, ಕು| ಶುಭದಾ ಸೂರ್ತಿಲ, ಕು| ಕನ್ನಿಕಾ ಅಂಬೆಕಲ್ಲುರನ್ನು ಗೌರವಿಸಲಾಗುತ್ತದೆ. ಹಾಗೂ ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ವಿದ್ಯಾರ್ಜನೆ ಮಾಡಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿಭಾಗದಲ್ಲಿ ತಾಲೂಕು ಮಟ್ಟಕ್ಕೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು.


ಸೆ.೧೦ರಂದು ಅಕ್ಕೋಜಿಪಾಲ್ ಅಂಗನವಾಡಿ ಕೇಂದ್ರ ಅಮರಪಡ್ನೂರಿನಲ್ಲಿ ಪರಿಸರ ಸ್ವಚ್ಛತೆ ಮತ್ತು ಕೊರೊನಾ ವಾರಿಯರ್‍ಸ್‌ಗಳಿಗೆ ಸನ್ಮಾನ ನಡೆಯುವುದು. ಅಲ್ಲಿ ಆಶಾ ಕಾರ್ಯಕರ್ತೆ ಶ್ರೀಮತಿ ಪ್ರೇಮಾ ಮೂಡೆಕಲ್ಲುರನ್ನು ಸನ್ಮಾನಿಸಲಾಗುತ್ತದೆ.
ಸೆ.೧೧ರಂದು ಸುಳ್ಯ ನಗರದಲ್ಲಿ ಹೋಟೆಲ್, ರೆಸ್ಟೋರೆಂಟ್, ಬಸ್ ನಿಲ್ದಾಣ ಮುಂತಾದ ಕಡೆಗಳಲ್ಲಿ ಸೇವ್ ವಾಟರ್ ಜಾಗೃತಿ ಕಾರ್ಯಕ್ರಮ ನಡೆಯಲಿದೆ.
ಸೆ.೧೨ರಂದು ಗಾಂಧಿನಗರ ನಾವೂರು ಕಾಲೊನಿಯಲ್ಲಿ ಕೊರೊನಾ ಬಗ್ಗೆ ಜಾಗೃತಿ ಮತ್ತು ಸಾಧಕರಿಗೆ ಗೌರವಾರ್ಪಣೆ ನಡೆಯಲಿದೆ. ಅಂದು ಧಾರ್ಮಿಕ ಸೇವೆ ಮತ್ತು ಸಾಮಾಜಿಕ ಕಾರ್ಯಕರ್ತರರಾದ ಎಸ್.ತಿಮ್ಮಪ್ಪ ಗೌಡ ನಾವೂರು, ಮಾಜಿ ಪುರಸಭಾ ಸದಸ್ಯ ಕಂಜಳ ನಾವೂರು, ಹಿರಿಯ ಕಾರ್ಮಿಕ ಅಬ್ದುಲ್ಲ ಕುಂಭಕೋಡು, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಶೋಭಾ ಎಸ್‌ರನ್ನು ಗೌರವಿಸಲಾಗುವುದು. ಸೆ.೧೩ರಂದು ಕಾಯರ್ತೋಡಿ ಸೂರ್ತಿಲ ಅಂಗನವಾಡಿ ಕೇಂದ್ರದಲ್ಲಿ ಮಹಿಳೆಯರ ದೈನಂದಿನ ಆರೋಗ್ಯದ ಬಗ್ಗೆ ಮಾಹಿತಿ ಮತ್ತು ಸನ್ಮಾನ, ಕೊರೊನಾ ವಾರಿಯರ್‍ಸ್‌ಗಳಿಗೆ ಸನ್ಮಾನ ನಡೆಯುವುದು. ವಿಷ್ಣು ಸರ್ಕಲ್ ಬಳಿಯ ಶ್ರೀ ವಿಷ್ಣು ಅಟೋ ಗ್ಯಾರೇಜ್ ಮಾಲಕ ವೆಂಕಟ್ರಮಣ ಡಿ.ಎನ್. ಹಾಗೂ ಜನಪದ ಕಲಾವಿದೆ ಶ್ರೀಮತಿ ಬೆಳ್ಳಚ್ಚಿ ಕೇಪು ಅಜಿಲರನ್ನು ಸನ್ಮಾನಿಸಲಾಗುವುದು. ಕಿರಿಯ ಆರೋಗ್ಯ ಸಹಾಯಕಿ ಶ್ರೀಮತಿ ಕನಕಾಂಗಿ ಎಂ, ಸೂರ್ತಿಲ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಲತಾ ರಾಧಾಕೃಷ್ಣರನ್ನು ಗೌರವಿಸಲಾಗುವುದು. ಸೆ.೧೪ರಂದು ಸುಳ್ಯ ನಗರ ಪಂಚಾಯತ್‌ನಲ್ಲಿ ಕರೊನಾ ವಾರಿಯರ್‍ಸ್‌ಗಳಿಗೆ ಗೌರವಾರ್ಪಣೆ ನಡೆಯುವುದು.
ಸೆ.೧೫ರಂದು ಸುಳ್ಯ ಜೇಸಿ ಭವನ ಅಂಬಟೆಡ್ಕದಲ್ಲಿ ಸಮಾರೋಪ ಸಮಾರಂಭ ಮತ್ತು ಕುಟುಂಬ ಸಮ್ಮಿಲನ ನಡೆಯುವುದು.
ಸಮಾರಂಭದಲ್ಲಿ ಜೇಸಿಐ ಪೂರ್ವಾಧ್ಯಕ್ಷ ಎಂ.ಬಿ. ಸದಾಶಿವರಿಗೆ ಕಮಲಪತ್ರ, ಪತ್ರಕರ್ತ ಗಂಗಾಧರ ಕಲ್ಲಪಳ್ಳಿರಿಗೆ ಪಯಸ್ವಿನಿ ಶ್ರೀ, ಚಿಲ್ಪಾರು ಆನಂದ ಗೌಡರಿಗೆ ಮೌನ ಸಾಧಕ, ಹೈನುಗಾರಿಕೆ ಕ್ಷೇತ್ರದಲ್ಲಿ ನಾರಾಯಣ ನಾಯಕ್ ಕೊಡಿಯಾಲಬೈಲು, ಸುಳ್ಯದ ಗಾಯಕ ಗಣೇಶ್ ವಿ.ಎಸ್.ರಿಗೆ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಸೆ.೧೬ರಂದು ವಲಯಾಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮ ನಡೆಯಲಿದ್ದು ಅಂದು ಚಿಲ್ಪಾರು ಆನಂದ ಗೌಡರು ಸುಮಾರು ೪ ಲಕ್ಷ ವೆಚ್ಚದಲ್ಲಿ ನಿರ್ಮಿಸಿ ಕೊಟ್ಟಿರುವ ಜೇಸಿ ನಿಲಯವನ್ನು ಹಸ್ತಾಂತರ ಮಾಡಲಾಗುವುದು ಎಂದು ಅವರು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಜೆಸಿಐ ರಾಷ್ಟ್ರೀಯ ಕಾರ್ಯಕ್ರಮ ಸಂಯೋಜಕ ಅಶೋಕ್ ಚೂಂತಾರು, ಕಾರ್ಯಕ್ರಮ ನಿರ್ದೇಶಕ ರಂಜಿತ್ ಕುಕ್ಕೆಟ್ಟಿ, ಝೇಸಿಐ ಪೂರ್ವಾಧ್ಯಕ್ಷ ಮೋಹನ್ ಎ.ಕೆ., ಯುವ ಜೇಸಿ ಅಧ್ಯಕ್ಷ ಚಿತ್ತಾರ ಬಂಟ್ವಾಳ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.