ಎಸ್.ಎಸ್.ಎಲ್.ಸಿ. ಮರುಮೌಲ್ಯಮಾಪನ ನಿಂತಿಕಲ್ಲು ಕೆ.ಎಸ್.ಗೌಡ. ವಿದ್ಯಾಸಂಸ್ಥೆಯ ಭವನ್ ರೈಯವರಿಗೆದ 537 ಅಂಕ

Advt_Headding_Middle
Advt_Headding_Middle

ಕಳೆದ ತಿಂಗಳಲ್ಲಿ ಪ್ರಕಟವಾದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಭವಿನ್ ರೈ ಪಾದೆಕಲ್ಲುರವರು ವಿಜ್ಞಾನ ವಿಷಯದಲ್ಲಿ 58 ಅಂಕ ಮತ್ತು ಸಮಾಜ ವಿಜ್ಞಾನದಲ್ಲಿ 84 ಅಂಕ ಗಳಿಸಿದ್ದರು. ಮರು ಮೌಲ್ಯಮಾಪನದ ಬಳಿಕ ವಿಜ್ಞಾನದಲ್ಲಿ 14 ಅಂಕ ಮತ್ತು ಸಮಾಜ ವಿಜ್ಞಾನದಲ್ಲಿ 8 ಅಂಕ ಹೆಚ್ಚುವರಿಯಾಗಿ ಪಡೆದು ಈ ಹಿಂದೆ ಇದ್ದ ಒಟ್ಟು ಅಂಕ 515ರ ಬದಲಾಗಿ 537 ಅಂಕ ಗಳಿಸಿಕೊಂಡಿದ್ದಾರೆ.

‘ಮೌಲ್ಯಮಾಪಕರ ಅಚಾತುರ್ಯದಿಂದ ಕಷ್ಟಪಟ್ಟು ಓದುವ ವಿದ್ಯಾರ್ಥಿಗಳಿಗೆ ಅನ್ಯಾಯವೆಸಗಿದಂತಾಗುತ್ತದೆ. ನಾವು ಮರು ಮೌಲ್ಯಮಾಪನ ಮಾಡಿಸಿದ ಕಾರಣ ಎರಡು ವಿಷಯದಲ್ಲಿ 22 ಅಂಕ ಹೆಚ್ಚುವರಿಯಾಗಿ ಬಂದಿದೆ. ಎಷ್ಟೋ ವಿದ್ಯಾರ್ಥಿಗಳ ಪೋಷಕರು ಮರು ಮೌಲ್ಯಮಾಪನ ಮಾಡಿಸುವುದಿಲ್ಲ. ಯಾರೋ ಮಾಡಿದ ತಪ್ಪಿಗೆ ವಿದ್ಯಾರ್ಥಿಗಳು ಜೀವನಪೂರ್ತಿ ಕಷ್ಟ ಅನುಭವಿಸುವಂತಾಗಿದೆ. ಇನ್ನು ಮುಂದೆಯಾದರೂ ಸಂಬಂಧಿಸಿದ ಇಲಾಖೆಯವರು ಈ ರೀತಿಯ ತಪ್ಪುಗಳಾಗದಂತೆ ಜಾಗ್ರತೆ ವಹಿಸಲಿ” ಎಂದು ವಿದ್ಯಾರ್ಥಿಯ ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಭವನ್ ರೈ ಪಿ.ಯವರು ಮುಪ್ಪೇರ್ಯ ಗ್ರಾಮದ ಪಾದೆಕಲ್ಲು ಬಾಲಕೃಷ್ಣ ರೈ ಮತ್ತು ಶ್ರೀಮತಿ ಉಷಲತಾ ಬಿ. ರೈ ದಂಪತಿಗಳ ಪುತ್ರ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.