Breaking News

ಶ್ರೀಮತಿ ಧರ್ಮಾವತಿ ಪಿ.ಜಿ. ಎ.ಎಸ್.ಐ. ಆಗಿ ಮುಂಬಡ್ತಿ

Advt_Headding_Middle
Advt_Headding_Middle


ಮಂಗಳೂರು ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ ಸ್ಟೇಬಲ್ ಆಗಿದ್ದ ಶ್ರೀಮತಿ ಧರ್ಮಾವತಿ ಪಿ.ಜಿ.ಯವರು ಎ.ಎಸ್.ಐ. ಆಗಿ ಪದೋನ್ನತಿ ಹೊಂದಿದ್ದಾರೆ. ಇವರು ಯೇನೆಕಲ್ಲು ಗ್ರಾಮದ ಮಾದನಮನೆ ದಿ. ಮೋಂಟಪ್ಪ ಗೌಡ ಮತ್ತು ದಿ. ನಾಗಮ್ಮ ದಂಪತಿಗಳ ಪುತ್ರಿಯಾಗಿದ್ದು, ಯೇನೆಕಲ್ಲಿನಲ್ಲಿ ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮುಗಿಸಿ ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು. ಕಾಲೇಜಿನಲ್ಲಿ ಪಿ.ಯು.ಸಿ. ಹಾಗೂ ಕೆ.ಎಸ್.ಎಸ್. ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪೂರೈಸಿರುತ್ತಾರೆ. ಸ್ಪೋರ್ಟ್ಸ್ ಕೋಟಾದಡಿ ಪೊಲೀಸ್ ಇಲಾಖೆಗೆ ಸೇರಿ ಸುಮಾರು 26 ವರ್ಷ ಸೇವೆ ಸಲ್ಲಿಸಿದ ಬಳಿಕ ಎ.ಎಸ್.ಐ. ಆಗಿ ಪದೋನ್ನತಿ ಹೊಂದಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ಪಾಂಡೇಶ್ವರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಪತಿ ಬಿ.ಪಿ. ಪುರಂದರ ಗೌಡರು ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಬೋಜಾರ ಮನೆಯವರಾಗಿದ್ದು, ಮಂಗಳೂರಿನ ಪಣಂಬೂರು ಪೋಲಿಸ್ ಠಾಣೆಯಲ್ಲಿ ಎ.ಎಸ್‌.ಐ. ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಪುತ್ರಿ ಕು. ಹರ್ಷಿತಾ ಬಿ.ಪಿ. ದ್ವಿತೀಯ ಎಂ.ಎಸ್.ಸಿ. ಮತ್ತು ಪುತ್ರ ತಿಲಕ್ ಬಿ.ಪಿ. ದ್ವಿತೀಯ ಬಿ.ಬಿ.ಎ. ವ್ಯಾಸಂಗ ಮಾಡುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.