Breaking News

ಶ್ರೀಮತಿ ಕಮಲಾ ಬಿ.ಯವರು ಪ್ರೌಢಶಾಲಾ ಶಿಕ್ಷಕಿಯಾಗಿ ಪದೋನ್ನತಿ

Advt_Headding_Middle
Advt_Headding_Middle

ಮಂಗಳೂರಿನ ಬೊಕ್ಕಪಟ್ಲ ಸ.ಹಿ.ಪ್ರಾ. ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿದ್ದ ಶ್ರೀಮತಿ ಕಮಲರವರು ಕುಪ್ಪೆಪದವಿನ‌ ಕಿಲೆಂಜಾರು‌ ಸರಕಾರಿ ಪ್ರೌಢಶಾಲೆಗೆ ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಪದೋನ್ನತಿ ಹೊಂದಿದ್ದಾರೆ. 1998 ರಲ್ಲಿ ಪುತ್ತೂರು ತಾಲೂಕಿನ ಕೊಂಬಾರು ಸ.ಹಿ.ಪ್ರಾ. ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಕರ್ತವ್ಯ ಆರಂಭಿಸಿದ ಇವರು 2002ರಲ್ಲಿ ಸುರತ್ಕಲ್ ಗೆ ವರ್ಗಾವಣೆಗೊಂಡು ಅಲ್ಲಿ ಒಂದೂವರೆ ವರ್ಷ ಸೇವೆ ಸಲ್ಲಿಸಿ ಮಂಗಳೂರಿನ ಬೊಕ್ಕಪಟ್ಲ ಸ.ಹಿ.ಪ್ರಾ. ಶಾಲೆಯಲ್ಲಿ ಸುಮಾರು 17 ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ ಪ್ರೌಢಶಾಲಾ ಶಿಕ್ಷಕಿಯಾಗಿ ಪದೋನ್ನತಿ ಹೊಂದಿದ್ದಾರೆ. ಇವರು ಬಳ್ಪ ಗ್ರಾಮದ ಕಾರ್ಜ ಮನೆಯವರಾಗಿದ್ದು, ಇವರ ಪತಿ ವಸಂತ ಕೆ.ವಿ.ಯವರು ಮಂಗಳೂರು ನಗರ ಸಶಸ್ತ್ರ ಮೀಸಲು ಪೋಲೀಸ್ ಪಡೆಯಲ್ಲಿ ಸಹಾಯಕ ಪೊಲೀಸ್ ಉಪನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.