Breaking News

ಪೆರುವಾಜೆ ಗ್ರಾ.ಪಂ.ನಲ್ಲಿ ಬಚ್ಚಲು ಗುಂಡಿ ಚಾಲನೆ ಮತ್ತು ಅನುಷ್ಠಾನ ಹಾಗೂ ರೋಜ್ ಗಾರ್ ದಿನಾಚರಣೆ

Advt_Headding_Middle
Advt_Headding_Middle

 

ಪೆರುವಾಜೆ ಗ್ರಾಮ ಪಂಚಾಯತು,ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ,ಜಿಲ್ಲಾ ಪಂಚಾಯತ್ ಮಂಗಳೂರು,ತಾಲೂಕು ಪಂಚಾಯತ್ ಸುಳ್ಯ ಇದರ ಸಹಯೋಗದಲ್ಲಿ ಉದ್ಯೋಗ ಖಾತರಿ ಯೋಜನೆಯಡಿ 2020 ಸೆ.ತಿಂಗಳ ವಿಶೇಷ ಅಭಿಯಾನ ಬಚ್ಚಲು ಗುಂಡಿ (ಸೋಕ್ ಪಿಟ್ ) ಚಾಲನೆ ಮತ್ತು ಅನುಷ್ಠಾನ ಹಾಗೂ ರೋಜ್ ಗಾರ್ ದಿನಾಚರಣೆ ಗ್ರಾಮ ಪಂಚಾಯತ್ ನಲ್ಲಿ ಸೆ.7 ರಂದು ಸಂಜೆ ನಡೆಯಿತು.


ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಬಚ್ಚಲು ಗುಂಡಿ ನಿರ್ಮಾಣ ಮತ್ತು ಜಲಮರುಪೂರಣ ಬಗ್ಗೆ ಮಾತನಾಡಿದರು.
ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಹನುಮಂತರಾಯಪ್ಪರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರಾದ ಶ್ರೀಮತಿ ಸರೋಜಿನಿ,,ಎಂ.ಜಿ.ಎನ್.ಆರ್.ಇ.ಜಿ.ಎ ತಾಂತ್ರಿಕ ಸಹಾಯಕರಾದ ಆತೀಶ್ , ಕು.ನಮಿತಾರವರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಅಲೆಕ್ಕಾಡಿ ಸ್ವಾಗತಿಸಿದರು.
ಸಿಬ್ಬಂದಿ ಶ್ರೀಮತಿ ಜಯಲಕ್ಷ್ಮೀ ಪ್ರಾರ್ಥಿಸಿ,ಶ್ರೀಮತಿ ಅಕ್ಷತಾ ರವರು ಕಾರ್ಯಕ್ರಮ ನಿರೂಪಿಸಿದರು.

ಪಂಚಾಯತ್ ಗೆ ಫ್ಯಾನ್ ಕೊಡುಗೆ  ಗ್ರಾಮ ಪಂಚಾಯತ್ ಗೆ ತಾಹಿರಾ ಮಹಮ್ಮದ್ ರವರು ಫ್ಯಾನ್ ನ್ನು ಕೊಡುಗೆಯಾಗಿ ನೀಡಿದರು.
ಇದನ್ನು ಪಂಚಾಯತ್ ಆಡಳಿತಾಧಿಕಾರಿ ಮತ್ತು ಪಿ.ಡಿ.ಒ ರವರು ಸ್ವೀಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.