ಪಕ್ಷ ಬಿಟ್ಟವರನ್ನು ಮತ್ತೆ ಸೇರಿಸಿಕೊಳ್ಳಬಾರದು – ನಾಯಕರಿಂದಲೇ ಪಕ್ಷಕ್ಕೆ ತೊಂದರೆ

Advt_Headding_Middle
Advt_Headding_Middle

 

ಯುವ ಕಾಂಗ್ರೆಸ್ ಸಭೆಯಲ್ಲಿ ಅಡ್ಪಂಗಾಯ ಅಸಮಾಧಾನ

ಸಭೆ ಮುಗಿದ ಬಳಿಕ ಮಿಥುನ್ ರೈ ಮಧ್ಯಸ್ಥಿಕೆಯಲ್ಲಿ ಎಂ.ವಿ.ಜಿ. – ಅಡ್ಪಂಗಾಯ ರಾಜಿ ಸಂದಾನ

ಇಂದು ಸುಳ್ಯದ ಯುವಜನ ಸಂಯುಕ್ತ ಮಂಡಳಿ ಯಲ್ಲಿ ನಡೆದ ಯುವ ಕಾಂಗ್ರೆಸ್ ಸಭೆಯಲ್ಲಿ ಕಾಂಗ್ರೆಸ್ ನಾಯಕರ ಅಸಮಾಧಾನ ಸ್ಪೋಟ ಗೊಂಡ ಪ್ರಸಂಗವು ನಡೆಯಿತು. ಬಳಿಕ ಸಭೆ ಅರ್ಧದಲ್ಲಿ ನಿಂತು, ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಮಧ್ಯಸ್ಥಿಕೆ ಯಲ್ಲಿ ನಾಯಕರ ರಾಜಿ ಸಂದಾನ ನಡೆಯಿತು.

ಸಭೆಯಲ್ಲಿ ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡರು ಭಾಷಣ ಮಾಡಲು ಆರಂಭಿಸಿ “ನಾವು ಗ್ರಾಮ ಮಟ್ಟದಿಂದಲೇ ಸಂಘಟನೆ ಮಾಡಬೇಕು.‌ಎಲ್ಲ ನಾಯಕರು ಕೂಡಾ ಇದಕ್ಕಾಗಿ ಫೀಲ್ಡ್ ಗೆ ಇಳಿಯಬೇಕು” ಎಂದು ಹೇಳಿ ಮಾತು ಮುಂದುವರೆಸಲೆತ್ನಿಸಿದಾಗ ವೇದಿಕೆಯಲ್ಲಿದ್ದ ಜಿಲ್ಲಾ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಧನಂಜಯ ಅಡ್ಪಂಗಾಯರು ಕುಳಿತಲ್ಲಿಂದಲೇ “ನೀವು ಅಧ್ಯಕ್ಷರಾಗಿದ್ದಾಗ ಎಷ್ಟು ಸೀಟು ಗೆದ್ದಿದ್ದೀರಾ? ” ಎಂದು ಪ್ರಶ್ನಿಸಿದರಲ್ಲದೆ, ಎದ್ದು ನಿಂತು “ಒಮ್ಮೆ ಪಕ್ಷ ಬಿಟ್ಟು ಹೋದವರನ್ನು ಮತ್ತೆ ನಾವು ಸೇರಿಸಿಕೊಳ್ಳಬಾರದು” ಎಂದು ಹೇಳಿ ತಮ್ಮ ಅಸಮಾಧಾನ ಹೊರ ಹಾಕಲು ಆರಂಭಿಸಿದಾಗ, ಮಿಥುನ್ ರೈ ಮತ್ತಿತರ ವೇದಿಕೆಯಲ್ಲಿದ್ದ ನಾಯಕರು ಬಂದು ಅಡ್ಪಂಗಾಯ ರನ್ನು ಸಮಾಧಾನ ಪಡಿಸಲೆತ್ನಿಸಿದಾಗ, ಇಲ್ಲ ನನಗೆ ಮಾತನಾಡಲು ಅವಕಾಶ ಬೇಕು, ಇಲ್ಲವಾದರೆ ನಾನು ಹೋಗುತ್ತೇನೆ ಎಂದು ಹೇಳಿದ ಅಡ್ಪಂಗಾಯರು ನಾವು 30 ವರ್ಷ ದಿಂದ ರಾಜಕಾರಣದಲ್ಲಿದ್ದೇನೆ. ನಾವು ನಿಯಮ ದಡಿಯಲ್ಲಿ ಕೆಲಸ ಮಾಡುತ್ತೇವೆ. ಎಲ್ಲರೂ ಸತ್ಯ ಹೇಳಬೇಕು.‌ಪಕ್ಷದೊಳಗೆ ತೊಂದರೆ ಮಾಡಿದರೆ ಸುಮ್ಮನಿರಬಾರದು. ಇಲ್ಲಿ ನಾಯಕರಿಂದಲೇ ಪಕ್ಷಕ್ಕೆ ತೊಂದರೆ ಕಾರ್ಯಕರ್ತರಿಂದ ಅಲ್ಲ ಎಂದು ಹೇಳಿದರು.

 

ಆಗ ವೆಂಕಪ್ಪ ಗೌಡರು “ನನ್ನಿಂದ ಪಕ್ಷಕ್ಕೆ ತೊಂದರೆಯಾಯಿತೆಂದು ಹೇಳುತ್ತಾರೆ. ನಾನು ಅಧ್ಯಕ್ಷ ನಾಗಿದ್ದ ಸಂದರ್ಭದಲ್ಲಿ ನಡೆದ ಎಂ.ಎಲ್.ಎ. ಚುನಾವಣೆ ಯಲ್ಲಿ ಕೇವಲ 1379 ಮತಗಳಷ್ಟೆ ನಮಗೆ ಹಿನ್ನಡೆಯಾಯಿತು ಎಂದು ಹೇಳಿದರು. ಆಗ ಧನಂಜಯ ಅಡ್ಪಂಗಾಯರು “ಆ ಸಂದರ್ಭದಲ್ಲಿ ಜಿಲ್ಲೆಯಲ್ಲಿ 7 ಕಡೆ ಪಕ್ಷದ ಶಾಸಕರು ಆರಿಸಿ ಬಂದಿದ್ದಾರೆ” ಎಂದರು. ಹೀಗೆ ಮಾತು ವಿನಿಮಯ ವಾಗುತ್ತಿದ್ದಾಗ ಮೈಕ್ ಬಳಿ ಹೋದ ಯೂತ್ ಜಿಲ್ಲಾಧ್ಯಕ್ಷ ಮಿಥುನ್ ರೈಯವರು “ಪಕ್ಷ ಎಂದರೆ ಮನೆಯ ಹಾಗೆ. ಗೆಲ್ಲುವ ನಿಟ್ಟಿನಲ್ಲಿ ಚರ್ಚೆ ಗಳು ಇರುತ್ತದೆ. ನಾನು ಮುಂದೆ ಎರಡು ಕಾರ್ಯಕ್ರಮ ದಲ್ಲಿ ಭಾಗವಹಿಸಬೇಕಿದೆ ಎಂದು ಹೇಳಿದರು. ಅಲ್ಲಿಗೆ ಸಭೆ ಮುಕ್ತಾಯಗೊಂಡಿತು.

 

ರಾಜಿ ಸಂದಾನ : ಸಭೆ ಮುಗಿದ ಬಳಿಕ ಧನಂಜಯ ಅಡ್ಪಂಗಾಯ, ವೆಂಕಪ್ಪ ಗೌಡ ರಿದ್ದು ಮಿಥುನ್ ರೈ ಮಧ್ಯಸ್ಥಿಕೆ ಯಲ್ಲಿ ರಾಜಿ ಸಂದಾನ ಸಭೆ ನಡೆಯಿತೆಂದು ಅಲ್ಲಿ ಪಕ್ಷ ಸಂಘಟನೆಯ ನಿಟ್ಟಿನಲ್ಲಿ ಕೈ ಗೊಳ್ಳಬೇಕಾದ ನಿರ್ಣಯದ ಕುರಿತು ಮಾತುಕತೆ ನಡೆಯಿತೆಂದು ತಿಳಿದು ಬಂದಿದೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.