Breaking News

ಹಳೆಗೇಟು ಸಾಂಸ್ಕೃತಿಕ ಸಂಘದ ವತಿಯಿಂದ ಧನಸಹಾಯ

Advt_Headding_Middle
Advt_Headding_Middle

ಸಾಂಸ್ಕೃತಿಕ ಸಂಘ (ರಿ.) ಹಳೆಗೇಟು ಸುಳ್ಯ ಇದರ ಸಕ್ರಿಯ ಕಾರ್ಯಕರ್ತರಾದ ಕಮಲಾಕ್ಷ ಆಚಾರ್ಯ ರವರ ಮಾತೃಶ್ರೀಯವರಾದ ಶ್ರೀಮತಿ ಸುಶೀಲಮ್ಮ ನವರು ಇತ್ತೀಚೆಗೆ ನಿಧನರಾಗಿದ್ದು ಇವರು ಕಳೆದ 30 ವರ್ಷಗಳಿಂದ ಗಣೇಶೋತ್ಸವದ ಸಂದರ್ಭದಲ್ಲಿ ಪ್ರಸಾದ ತಯಾರಿ ಹಾಗೂ ಇತರ ಸೇವೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಇವರ ನಿಸ್ವಾರ್ಥ ಸೇವೆಯ ಪರವಾಗಿ ಸಾಂಸ್ಕೃತಿಕ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಸ್ವಯಂಪ್ರೇರಿತವಾಗಿ ರೂ.10,000 ಧನಸಂಗ್ರಹಿಸಿ ಇವರ ಕುಟುಂಬಕ್ಕೆ ನೀಡಿದರು. ಸಾಂಸ್ಕೃತಿಕ ಸಂಘದ ಅಧ್ಯಕ್ಷ ಜ್ಞಾನೇಶ್ವರ್ ಶೇಟ್ ರವರು ಕಮಲಾಕ್ಷ ಆಚಾರ್ಯರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಂಘದ ಖಜಾಂಚಿ ಚಿತ್ತರಂಜನ್,ಸಂಚಾಲಕ ಶಿವನಾಥ್ ರಾವ್, ಕಾರ್ಯದರ್ಶಿ ಗೌತಮ್ ಭಟ್ ,ಶ್ರೀನಿವಾಸ ಮಾಸ್ತರ್, ಬಾಲಗೋಪಾಲ್ ಸೇರ್ಕಜೆ, ನಾಗರಾಜ್ ಶೇಟ್ , ರಾಘವೇಂದ್ರ ಶೇಟ್, ಕಿರಣ್ ನೀರ್ಪಾಡಿ, ಶ್ರೀಜೇಶ್, ರಾಧಾಕೃಷ್ಣ, ರಾಕೇಶ್ ಕುಂಟಿಕಾನ, ಶಿವಾಜಿ ಯುವ ವೃಂದದ ಅಧ್ಯಕ್ಷ ಸಚಿನ್ ರಾವ್ ರವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.