ಎಸ್ಸೆಸ್ಸೆಫ್ ಇರುವಂಬಳ್ಳ ಶಾಖೆ ಇದರ ವತಿಯಿಂದ ಉಚಿತ ಆಯುಷ್ಮಾನ್ ಕಾರ್ಡ್ ವಿತರಣೆ

Advt_Headding_Middle
Advt_Headding_Middle

ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ( ಎಸ್ಸೆಸ್ಸೆಫ್ ) ಇರುವಂಬಳ್ಳ ಶಾಖಾ ವತಿಯಿಂದ ಉಚಿತ ಆಯುಷ್ಮಾನ್ ಕಾರ್ಡ್ ವಿತರಣೆಯು ಸೆಪ್ಟೆಂಬರ್ 8 ರಂದು ತಾಜುಲ್ ಉಲಮಾ ನಗರದಲ್ಲಿ ನಡೆಯಿತು.

ಹುಸೈನ್ ತಂಙಳ್ ಆದೂರ್ ರವರು ದುಆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಎಸ್ ವೈ ಎಸ್ ಸುಳ್ಯ ಸೆಂಟರ್ ಅದ್ಯಕ್ಷರಾದ ಎ.ಬಿ.ಅಶ್ರಫ್ ಸಅದಿ ಅಡ್ಕ , ಎಸ್ ವೈ ಎಸ್ ಇರುವಂಬಳ್ಳ ಬ್ರಾಂಚ್ ಅದ್ಯಕ್ಷರಾದ ಹಾಜಿ ಹಸೈನಾರ್ ಮದನಿ ಕೋದಪ್ಪಾಡಿ , ಎಸ್ ವೈ ಎಸ್ ಇರುವಂಬಳ್ಳ ಬ್ರಾಂಚ್ ಉಪಾಧ್ಯಕ್ಷರಾದ ಜಿ.ಎಸ್.ಅಬ್ದುಲ್ ಖಾದಿರ್ ಸಅದಿ ಗೋರಡ್ಕ , ಎಸ್ಸೆಸ್ಸೆಫ್ ಇರುವಂಬಳ್ಳ ಶಾಖೆ ಅದ್ಯಕ್ಷರಾದ ಅಶ್ರಫ್ ಅಮಾನಿ ಪುಳಿಯಡಿ , ಎಸ್ ವೈ ಎಸ್ ಇರುವಂಬಳ್ಳ ಬ್ರಾಂಚ್ ಮಾಜಿ ಅದ್ಯಕ್ಷರಾದ ಬೀರಾನ್ ಕುಂಞಿ ಹಾಜಿ ಕೇನಾಜೆ, ಎಸ್ ವೈ ಎಸ್ ಸುಳ್ಯ ಸೆಂಟರ್ ಪ್ರಧಾನ ಕಾರ್ಯದರ್ಶಿ ಅಂದುಂಞಿ ಗೋರಡ್ಕ ,ರಿಯಾ ಟ್ರಾವೆಲ್ಸ್ ನ ರಷೀದ್ ಜಟ್ಟಿಪಳ್ಳ , ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಮಾಜಿ ಕಾರ್ಯದರ್ಶಿ ಎ.ಬಿ.ಅಬ್ಬಾಸ್ ಅಡ್ಕ ಹಾಗು ಎಸ್ಸೆಸ್ಸೆಫ್ ಜಾಲ್ಸೂರ್ ಸೆಕ್ಚರ್ ಪ್ರಧಾನ ಕಾರ್ಯದರ್ಶಿ ಐ.ಯಂ.ಅಬ್ಬಾಸ್ ಇರುವಂಬಳ್ಳ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಥಮ ಆಯುಷ್ಮಾನ್ ಕಾರ್ಡ್ ನ್ನು ಎಸ್ಸೆಸ್ಸೆಫ್ ಇರುವಂಬಳ್ಳ ಶಾಖಾ ಅದ್ಯಕ್ಷರಾದ ಅಶ್ರಫ್ ಅಮಾನಿ ಪುಳಿಯಡಿಯವರು ಎಸ್ ವೈ ಎಸ್ ಇರುವಂಬಳ್ಳ ಬ್ರಾಂಚ್ ಇದರ ಅದ್ಯಕ್ಷರಾದ ಹಾಜಿ ಹಸೈನಾರ್ ಮದನಿ ಕೋದಪ್ಪಾಡಿಯವರಿಗೆ ನೀಡುವ ಮೂಲಕ ಕಾರ್ಡ್ ವಿತರಣೆಗೆ ಚಾಲನೆ ನೀಡಿದರು.

ಹಲವಾರು ಮಂದಿ ಇದರ ಸದುಪಯೋಗವನ್ನು ಪಡೆದುಕೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.